by
Tag: Karnataka News

ಪೆಟ್ರೋಲ್ ಪಂಪ್ ಹಂಚಿಕೆಯಲ್ಲಿ ಅಕ್ರಮ ಆರೋಪ
ಸುದ್ದಿ ಬೆಳಕು ವಾರ್ತೆ ಸೈದಾಪುರ : ಬೀದರ-ಗುತ್ತಿ ರಾಷ್ಟ್ರೀಯ ಹೆದ್ದಾರಿ 150 ಮಾರ್ಗದ ಕಡೇಚೂರು ದಿಂದ ಸೈದಾಪುರ (108-116ಕಿ.ಮೀ) ಮಧ್ಯದಲ್ಲಿ ಕೇಂದ್ರ ಸರ್ಕಾರದ ಸೌಮ್ಯದ ಎಚ್.ಪಿ.ಸಿ.ಎಲ್.ಸಂಸ್ಥೆಯ ಎಚ್.ಪಿ.ಪೆಟ್ರೋಲ್ ಪಂಪ್ ಡೀಲರ್ ಶಿಪ್ ಹಂಚಿಕೆಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಸ್ಥಳೀಯ ಮೂಲಗಳ ಪ್ರಕಾರ, ಈ ಪೆಟ್ರೋಲ್ ಪಂಪ್ ಡೀಲರ್ ಶಿಪ್ ಅನ್ನು ಪಡೆದುಕೊಳ್ಳಲು 2023ರಲ್ಲಿ ಹಿಂದೂಳಿದ ವರ್ಗ ಮೀಸಲಾತಿ ಅಡಿಯಲ್ಲಿ ಅರ್ಜಿ ಅಹ್ವಾನಿಸಲಾಗಿತ್ತು. ಅದರಂತೆ ಅನೇಕರು…
by

ಸುಳ್ಳು ದೂರುಗಳಿಗೆ ಕಡಿವಾಣ – 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್
ಸುದ್ದಿ ಬೆಳಕು ವಾರ್ತೆ ಯಾದಗಿರಿ: ಸುಳ್ಳು ಹಾಗೂ ದುರುದ್ದೇಶಪೂರಿತ ದೂರುಗಳನ್ನು ನೀಡಿ ಬಳಿಕ ಹಿಂಪಡೆಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಜಿಲ್ಲಾ ಪಂಚಾಯತ್ ಕಠಿಣ ಕ್ರಮ ಕೈಗೊಂಡಿದ್ದು, 24 ದೂರುದಾರರಿಗೆ ಒಟ್ಟು ₹1,57,475 ವಸೂಲಾತಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ತಿಳಿಸಿದ್ದಾರೆ. ಸರ್ಕಾರದ 05.03.2021ರ ಸುತ್ತೋಲೆಯ ಅನ್ವಯ, ಮೊದಲು ದೂರು ಸಲ್ಲಿಸಿ ನಂತರ ಹಿಂಪಡೆದ ಹಾಗೂ ಸಾಕ್ಷ್ಯಾಧಾರವಿಲ್ಲದೆ ಸುಳ್ಳು ದೂರು ನೀಡಿದವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ನೋಟಿಸ್ ಪಡೆದವರು ಸಮಾಧಾನಕರ…
by
ರಾಯಚೂರನಲ್ಲಿ ವಾಸವಿ ಜಯಂತಿ ಬ್ಯಾನರ್ ತೆರವು: ಆರ್ಯವೈಶ್ಯ ಸಮಾಜ ಖಂಡನೆ.
ಆರ್ಯವೈಶ್ಯ ಸಮಾಜದ ಧಾರ್ಮಿಕ ಭಾವನೆಗಳಿಗೆ ದಕ್ಕೆ: ಬಾದಾಮಿ ಸುದ್ದಿ ಬೆಳಕು ವಾರ್ತೆ ಸೈದಾಪುರ ಏಪ್ರಿಲ್ 26: ವಾಸವಿ ಜಯಂತಿಯಂತಹ ಪವಿತ್ರ ಹಬ್ಬದ ಸಂದರ್ಭದಲ್ಲಿ ಬ್ಯಾನರ್‍ಗಳನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿರುವುದು ಆರ್ಯ ವೈಶ್ಯ ಸಮಾಜದ ಧಾರ್ಮಿಕ ಭಾವನೆಗಳಿಗೆ ದಕ್ಕೆಯುಂಟುಮಾಡಿದೆ ಎಂದು ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ರಾಘವೇಂದ್ರ ಬಾದಾಮಿ ಸೈದಾಪುರ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರ ನಗರದಲ್ಲಿ ವಾಸವಿ ಜಯಂತಿ ಪ್ರಯುಕ್ತ ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್‍ಗಳನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿರುವ ಕ್ರಮಕ್ಕೆ ಆರ್ಯವೈಶ್ಯ ಸಮಾಜದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.…
by

ಗಡಿಯಲ್ಲಿ ಮರಳು ದಂಧೆ ವಿರೋಧಿಸಿ ಕೆಆರ್‌ಎಸ್ ಉಪವಾಸ ಸತ್ಯಾಗ್ರಹ
ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 24 : ನೆರೆಯ ತೆಲಂಗಾಣ ರಾಜ್ಯದವರಿಂದ ನಮ್ಮ ನಾಡಿನ ಖನಿಜ ಸಂಪತ್ತು ಲೂಟಿಯಾಗುತ್ತಿದ್ದು, ಕೂಡಲೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕೆಆರ್‌ಎಸ್ ಕಾರ್ಯಕರ್ತರು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಜಿಲ್ಲೆಯ ಗಡಿ ಭಾಗದ ಚೇಲೇರಿ ದೊಡ್ಡ ಹಳ್ಳವು ಕರ್ನಾಟಕ ಮತ್ತು ತೆಲಂಗಾಣ ಉಭಯ ರಾಜ್ಯಗಳ ಗಡಿಯಾಗಿದೆ. ಇಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹವಾಗಿದ್ದು, ತೆಲಂಗಾಣ ರಾಜ್ಯದವರು ಅಕ್ರಮವಾಗಿ ಲೂಟಿ ಮಾಡುತ್ತಿದ್ದಾರೆ. ತಡೆಯಲು ಹೋದ ನಮ್ಮ ಜನರನ್ನು ಹೆದರಿಸಿ, ಬೆದರಿಸಿ ಹಲ್ಲೆ…
by

ಸಿಡಿಲು ಅಪ್ಪಳಿ ಮಹಿಳೆ ದಾರುಣ ಸಾವು
ಸುದ್ದಿ ಬೆಳಕು ವಾರ್ತೆ ಹಟ್ಟಿ ಚಿನ್ನದ ಗಣಿ, ಏಪ್ರಿಲ್ 22 : ಸಮೀಪದ ಯರಜಂತಿ ಗ್ರಾಮದ ಬಸವನಬಗಡಿ ದೊಡ್ಡಿಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ದುರಗಮ್ಮ (49), ಗಂಡ ಸಾಬಣ್ಣ ನಾಯಕ ಎಂದು ಗುರುತಿಸಲಾಗಿದೆ. ತಾವು ವಾಸಿಸುತ್ತಿದ್ದ ಜಮೀನಿನಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿನ ಬಣವಿಯನ್ನು ಮಳೆಯಿಂದ ರಕ್ಷಿಸಲು ತಾಡಪತ್ರೆ ಹೊದಿಸಿ, ಅಲ್ಲಿಂದ ಸಮೀಪದ ಗುಡಿಸಲಿಗೆ ಮರಳುತ್ತಿದ್ದ ವೇಳೆ ಸಿಡಿಲು ಅಪ್ಪಳಿಸಿ ಸ್ಥಳದಲ್ಲೇ ಅಸು ನೀಗಿದ್ದಾರೆ ಎಂದು…
by

ಗಗನಕ್ಕೇರಿದ ನಿಂಬೆಹಣ್ಣು ಬೆಲೆ – ಗ್ರಾಹಕರು, ವ್ಯಾಪಾರಸ್ಥರಲ್ಲಿ ಆತಂಕ
ಯಾದಗಿರಿ: ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದ್ದು, ವ್ಯಾಪಾರಸ್ಥರು ಹಾಗೂ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಕಳೆದ ತಿಂಗಳು 5 ರೂ.ಗೆ ದೊರೆಯುತ್ತಿದ್ದ ಒಂದು ನಿಂಬೆಹಣ್ಣು ಇದೀಗ 10ರಿಂದ 15 ರೂ.ವರೆಗೆ ಏರಿಕೆಯಾಗಿದೆ. ಇದರಿಂದ ಖರೀದಿದಾರರು ಹಿಂಜರಿಯುತ್ತಿದ್ದು, ವ್ಯಾಪಾರದಲ್ಲಿ ಮಂದಗತಿ ಕಂಡುಬರುತ್ತಿದೆ. ಸ್ಥಳೀಯ ವ್ಯಾಪಾರಸ್ಥರು ಕಲಬುರಗಿಯ ಸುಲ್ತಾನಪುರ ಮಾರುಕಟ್ಟೆಯಿಂದ ಒಂದು ಚೀಲ ನಿಂಬೆಹಣ್ಣು ಸುಮಾರು 9 ಸಾವಿರ ರೂ.ಗೆ ಖರೀದಿ ಮಾಡುತ್ತಿದ್ದಾರೆ. ಒಂದು ಚೀಲದಲ್ಲಿ ಸುಮಾರು 1000 ಹಣ್ಣುಗಳಿದ್ದರೂ, ಕೆಲವು ಹಣ್ಣುಗಳು ಪರಿಪಕ್ವವಾಗಿರದ ಕಾರಣ ಗ್ರಾಹಕರು…
by

ಯಾದಗಿರಿ ಟೌನ್ ಅಂಚೆ ಕಚೇರಿ ವಿಲೀನ – ಎಲ್ಲಾ ಸೇವೆಗಳು ಮುಖ್ಯ ಅಂಚೆ ಕಚೇರಿಯಲ್ಲಿ ಲಭ್ಯ
ಯಾದಗಿರಿ : 2026ರ ಏಪ್ರಿಲ್ 13 ರಿಂದ ಯಾದಗಿರಿ ನಗರದ ಗಾಂಧಿ ಚೌಕ್‌ನ ಅಂಚೆ ಕಚೇರಿಯನ್ನು ಯಾದಗಿರಿ ಮುಖ್ಯ ಅಂಚೆ ಕಚೇರಿ ಕೇಂದ್ರ ಕಚೇರಿ ಯಾದಗಿರಿ 585201 ಜೊತೆ ವಿಲೀನಗೊಳಿಸಿದೆ ಎಂದು ಯಾದಗಿರಿ ಅಂಚೆ ಕಚೇರಿ ಅಧೀಕ್ಷಕರು ಅವರು ತಿಳಿಸಿದ್ದಾರೆ. ಯಾದಗಿರಿ ಟೌನ್ ಅಂಚೆ ಕಚೇರಿಯ ಗ್ರಾಹಕರು ಹಾಗೂ ಅದರ ವ್ಯಾಪ್ತಿಯ ಸಾರ್ವಜನಿಕರಿಗೆ ಎಲ್ಲಾ ಅಂಚೆ ಸೇವೆಗಳು ಯಾದಗಿರಿ ಮುಖ್ಯ ಅಂಚೆ ಕಚೇರಿಯಲ್ಲಿ ಲಭ್ಯವಿರುತ್ತದೆ. ಹೀಗಾಗಿ, ಸಾರ್ವಜನಿಕರು ತಮ್ಮ ಎಲ್ಲಾ ಅಂಚೆ ಸಂಬಂಧಿತ ವ್ಯವಹಾರಗಳನ್ನು ಯಾದಗಿರಿ ಮುಖ್ಯ…
by

ಲಿಂಗೇರಿ ವಸತಿ ನಿಲಯದಲ್ಲಿ ಅಂಬೇಡ್ಕರ್ ಜಯಂತಿ – “ಅಸಮಾನತೆ ನಿವಾರಣೆಗೆ ಸಂವಿಧಾನ ದಾರಿ”
ಯಾದಗಿರಿ : ಸ್ವಾತಂತ್ರ್ಯ ಪೂರ್ವ ಮತ್ತು ನಂತರವೂ ಸಮಾಜದಲ್ಲಿ ಅಸಮಾನತೆ, ಜಾತೀಯತೆ ಹಾಗೂ ಮೇಲು–ಕೀಳು ಮನೋಭಾವಗಳು ಜೀವಂತವಾಗಿದ್ದ ಸಂದರ್ಭದಲ್ಲಿ ಅದನ್ನು ಬೇರು ಸಮೇತ ಕಿತ್ತೊಗೆಯಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಕತ್ತಲಿನಲ್ಲಿದ್ದ ಸಮಾಜಕ್ಕೆ ಬೆಳಕಿನ ದಾರಿ ತೋರಿದ ಮಹಾಪುರುಷರು ಎಂದು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಸಿಬ್ಬಂದಿ ಶ್ರೀಮತಿ ನಿರ್ಮಲ ಹೇಳಿದರು. ನಗರ ಸಮೀಪದ ಲಿಂಗೇರಿ ಸ್ಟೇಷನ್‌ನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್…
by
- ಅಕ್ಟೋಬರ್ 3ರಿಂದ ಗುರುಮಠಕಲ್–ಮುಂಬೈ ಬಸ್ ಸೇವೆ ಪುನರಾರಂಭ

- ಯಾದಗಿರಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ: ಹಿರಿಯರ ಪಾಲನೆ ಪ್ರತಿಯೊಬ್ಬರ ಕರ್ತವ್ಯ

- ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಮಿಕ ಸಾವು: ಮರಣೋತ್ತರ ಪರೀಕ್ಷೆಗೆ ಆಗ್ರಹ

- ವಿಧಾನಸೌಧದ ಮೆಟ್ಟಿಲುಗಳಲ್ಲಿ ಉರ್ದು ಹಬ್ಬ: ಟಿ.ಎನ್. ಭೀಮುನಾಯಕ ವಿರೋಧ

- ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಆರೋಪ: ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ















