
ವಡಗೇರಾ:ಕೇಂದ್ರ ಬಿಜೆಪಿ ಸರ್ಕಾರ ಪಂಚ ರಾಜ್ಯಗಳ ಚುನಾವಣೆ ಮುಗಿದ ಬಳಿಕ ವಾಣಿಜ್ಯ ಗ್ಯಾಸ್ ಬಳಕೆ ಬೆಲೆ ಒಮ್ಮಿಂದೊಮ್ಮೆಲೆ 993 ರೂಪಾಯಿಗಳ ಏರಿಕೆ ಮಾಡಿದ್ದನ್ನು ರಾಜ್ಯ ರೈತ ಸಂಘ ತಾಲೂಕು ಕಾರ್ಯದರ್ಶಿ ಫಕೀರ್ ಅಹ್ಮದ್ ಮರಡಿ ವಡಗೇರಾ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೇಂದ್ರ ಸಚಿವರು ಗ್ಯಾಸ್ ಕೊರತೆ ಇಲ್ಲ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ.ಆದರೆ ದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ಸರಿಯಾಗಿ ಅಡುಗೆ ಗ್ಯಾಸ್ ಸಿಗದೆ ಜನ ಪರದಾಡುತ್ತಿದ್ದಾರೆ.ಹೋಟೆಲ್ ಹಾಗೂ ಇನ್ನಿತರ ಕಡೆ ಕಟ್ಟಿಗೆ ತಂದು ಅಡುಗೆ ಮಾಡುವಂತ ಪರಿಸ್ಥಿತಿ ಬಂದಿದೆ ಇಂತಹ ಪರಿಸ್ಥಿತಿಯಲ್ಲಿ ಏಕಾಏಕಿ ವಾಣಿಜ್ಯ19 ಕೆ.ಜಿ ಗ್ಯಾಸ್ ಸಿಲೆಂಡರ್ 993 ಗೆ ಏರಿಸಿ ಮತ್ತು 5 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 260 ರೂಪಾಯಿ ಹೆಚ್ಚಿಸಿ ಸಾಮಾನ್ಯ ಜನರ ಜಿಬಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.ಇದೇ ರೀತಿ ದರ ಹೆಚ್ಚಳ ಮಾಡುತ್ತಾ ಹೋದಲ್ಲಿ ನಗರ ಪ್ರದೇಶದ ಜನರಿಗೆ ಹೋಟೆಲಗಳಲ್ಲಿ ತುತ್ತು ಅನ್ನವು ಸಿಗದಂತ ಪರಿಸ್ಥಿತಿ ಬರಲಿದೆ ಪಟ್ಟಣ ಪ್ರದೇಶದಲ್ಲಿ ವಾಸಿಸುವ ಸಾಮಾನ್ಯ ಜನರ ಬದುಕಿಗೆ ಇದು ಕಂಟಕವಾಗಿದೆ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಮಾಡುತ್ತಾ ಬಂದಿದೆ ವಿನಹ ಇಳಿಕೆ ಮಾಡಿಲ್ಲ ಇವುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಜೀವನ ಮಾಡಲು ಪರದಾಡುವಂಥಾಗಿದೆ ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಳದಿಂದ ಹೋಟೆಲ್ ಹಾಗೂ ಇನ್ನಿತರ ಸಣ್ಣ ಪುಟ್ಟ ವ್ಯಾಪಾರಿಗಳು ಕಂಗಾಲಾಗಿದ್ದಾರೆ.ಸಿಲಿಂಡರ್ ಬೆಲೆ ಏರಿಕೆ ಮಾಡಿರುವ ಕಾರಣ ಆಹಾರ ಪದಾರ್ಥಗಳು ಹೋಟೆಲ್ ತಿಂಡಿ ತಿನಿಸುಗಳ ದರ ದುಪ್ಪಟ್ಟಾಗಿವೆ ಜೊತೆಗೆ ಸಿಲೆಂಡರ್ ಹೆಚ್ಚಾಗಿರುವ ಕಾರಣ ಕೆಲ ಹೋಟೆಲ್ ಗಳು ಬಂದಾಗಿರುವ ಉದಾಹರಣೆಗಳಿವೆ ಇದರಿಂದ ಸಾಮಾನ್ಯ ವರ್ಗದ ಜನ ಕಂಗಾಲಾಗಿದ್ದು ಕೂಡಲೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡುವಂತೆ ರಾಜ್ಯ ರೈತ ಸಂಘ ತಾಲೂಕು ಕಾರ್ಯದರ್ಶಿ ಫಕೀರ್ ಅಹ್ಮದ್ ಮರಡಿ ವಡಗೇರಾ ಒತ್ತಾಯಿಸಿದ್ದಾರೆ.










Leave a Reply