ಗಡಿಯಲ್ಲಿ ಮರಳು ದಂಧೆ ವಿರೋಧಿಸಿ ಕೆಆರ್‌ಎಸ್ ಉಪವಾಸ ಸತ್ಯಾಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏಪ್ರಿಲ್ 24 : ನೆರೆಯ ತೆಲಂಗಾಣ ರಾಜ್ಯದವರಿಂದ ನಮ್ಮ ನಾಡಿನ ಖನಿಜ ಸಂಪತ್ತು ಲೂಟಿಯಾಗುತ್ತಿದ್ದು, ಕೂಡಲೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕೆಆರ್‌ಎಸ್‌ ಕಾರ್ಯಕರ್ತರು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ಜಿಲ್ಲೆಯ ಗಡಿ ಭಾಗದ ಚೇಲೇರಿ ದೊಡ್ಡ ಹಳ್ಳವು ಕರ್ನಾಟಕ ಮತ್ತು ತೆಲಂಗಾಣ ಉಭಯ ರಾಜ್ಯಗಳ ಗಡಿಯಾಗಿದೆ. ಇಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹವಾಗಿದ್ದು, ತೆಲಂಗಾಣ ರಾಜ್ಯದವರು ಅಕ್ರಮವಾಗಿ ಲೂಟಿ ಮಾಡುತ್ತಿದ್ದಾರೆ. ತಡೆಯಲು ಹೋದ ನಮ್ಮ ಜನರನ್ನು ಹೆದರಿಸಿ, ಬೆದರಿಸಿ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಗಡಿಯಲ್ಲಿ ಗಲಿಬಿಲಿ ಉಂಟಾಗಿದೆ. ಈ ಬಗ್ಗೆ ಹತ್ತು ಹಲವು ಬಾರಿ ನಮ್ಮ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ತೆಲಂಗಾಣ ಗಡಿಭಾಗವನ್ನು ಸರ್ವೆ ಮಾಡಿ ಗುರುತು ಮಾಡಬೇಕು, ಮರಳು ಅಕ್ರಮವಾಗಿ ಸಾಗಿಸುತ್ತಿರುವ ತೆಲಂಗಾಣದ ಟ್ರ್ಯಾಕ್ಟರ್‌ ಮತ್ತು ಜೆಸಿಬಿಗಳನ್ನು ವಶಕ್ಕೆ ಪಡೆಯಬೇಕು, ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಬೇಕು, ಸರಕಾರಿ ಕಾಮಗಾರಿಗಳಿಗೆ ಕಾನೂನಾತ್ಮಕವಾಗಿ ಒದಗಿಸಿಕೊಡಬೇಕು. ಸರಕಾರದ ಮರಳನ್ನು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಗುರುಮಠಕಲ್ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರು ಭೇಟಿ ನೀಡಿ, ಪ್ರತಿಭಟನಾಕಾರರ ಜತಗೆ ಮಾತುಕತೆ ನಡೆಸಿ, ಮನವಿ ಪತ್ರ ಸ್ವೀಕರಿಸಿದರು.

ಮರಳು ಅಕ್ರಮ ದಂಧೆ ತಡೆಯಿರಿ!
ಮರಳು ಅಕ್ರಮ ದಂಧೆಕೋರರನ್ನು ತಡೆ ಹಿಡಿಯಿರಿ ಎಂದರೂ ತಡೆಯುತ್ತಿಲ್ಲ. ಕೇವಲ ನೋಡೋಣ ಮಾಡೋಣ ಎನ್ನುತ್ತ ಕಾಲಹರಣ ಮಾಡುತ್ತಿದ್ದಾರೆ ಹೊರತು ಯಾವುದೇ ರೀತಿಯ ಶಾಶ್ವತ ಪರಿಹಾರಕ್ಕೆ ಯತ್ನಿಸುತ್ತಿಲ್ಲ. ಹೀಗಾಗಿ ಗಡಿ ಸಮಸ್ಯೆ ಇತ್ಯರ್ಥ ಆಗುವವರೆಗೂ ನಮ್ಮ ನಿರ್ಧಾರ ಅಚಲವಾಗಿರುತ್ತದೆ ಎಂದು ಗುಡುಗಿದ್ದಾರೆ. ಕೂಡಲೇ ನಮ್ಮ ಜಿಲ್ಲಾಡಳಿತ ನೆರೆಯ ತೆಲಂಗಾಣ ರಾಜ್ಯದ ಅಧಿ ಕಾರಿಗಳ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಸತ್ಯಾಗ್ರಹದಲ್ಲಿ ಕೆಆರ್‌ಎಸ್ ಪಕ್ಷದಜಿಲ್ಲಾಧ್ಯಕ್ಷ ಜಗನ್ನಾಥ್‌ ಎಸ್‌ ಚಿಂತನಹಳ್ಳಿ, ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ಪೂಜಾರಿ, ಗುರುಮಠಕಲ್ ತಾಲೂಕ ಅಧ್ಯಕ್ಷ ವೆಂಕಟೇಶ ಎಂ, ಶಾಂತಕುಮಾರ ಯಲಸತ್ತಿ, ಬಸವಲಿಂಗಪ್ಪ ದುಪ್ಪಲ್ಲಿ, ಭೀಮು ದಳಪತಿ, ನರಸಿಂಗ, ಖತಾಲ್ ಸಾಬ್ ಸೇರಿದಂತೆ ಕಿಶೋರ್ ರಾವ್ ಪಾಟೀಲ್ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *

Suddi Belaku