Tag: Yadgir News

  • ಯಾದಗಿರಿಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಅಲ್ಪಸಂಖ್ಯಾತರ ಘಟಕ ರಚನೆ

    ಯಾದಗಿರಿಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಅಲ್ಪಸಂಖ್ಯಾತರ ಘಟಕ ರಚನೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಕರ್ನಾಟಕ ನವನಿರ್ಮಾಣ ಸೇನೆ ಯಾದಗಿರಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷರ ನೇಮಕ ಕಾರ್ಯಕ್ರಮವು ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಮಾಸನ್ ಅವರ ನೇತೃತ್ವದಲ್ಲಿ ಸೋಮವಾರ ಜರುಗಿತು. ಕನ್ನಡ ನಾಡು, ನುಡಿ, ಜಲ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುವ ಕ್ರಿಯಾಶೀಲ ಯುವ ಮುಖಂಡರಿಗೆ ವಿವಿಧ ಹುದ್ದೆಗಳ ಜವಾಬ್ದಾರಿ ವಹಿಸಿ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ನವನಿರ್ಮಾಣ ಸೇನೆಯ ಅಲ್ಪಸಂಖ್ಯಾತರ ಘಟಕವನ್ನು…

  • ಯಾದಗಿರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ: ರಾಮಾಯಣದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಜಿಲ್ಲಾಧಿಕಾರಿ

    ಯಾದಗಿರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ: ರಾಮಾಯಣದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಜಿಲ್ಲಾಧಿಕಾರಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ರತ್ನಾಕರನಿಂದ ಆದಿಕವಿಯಾಗಿ ರೂಪಾಂತರಗೊಂಡ ಮಹರ್ಷಿ ವಾಲ್ಮೀಕಿ ಅವರ ಜೀವನ ಪ್ರತಿಯೊಬ್ಬರಿಗೂ ದೊಡ್ಡ ಪ್ರೇರಣೆಯಾಗಿದೆ. ರಾಮಾಯಣದ ಮೂಲಕ ಅವರು ಸಮಾಜಕ್ಕೆ ನೀಡಿರುವ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ವತಿಯಿಂದ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ…

  • ಶೀಗಿ ಹುಣ್ಣಿಮೆ ಪ್ರಕೃತಿ ಸಂರಕ್ಷಣೆ ಮತ್ತು ಕೃಷಿ ಸಂಸ್ಕೃತಿಯ ಸಂದೇಶ ಸಾರುವ ಹಬ್ಬ: ವೀರೇಶ್ವರ ಶ್ರೀ

    ಶೀಗಿ ಹುಣ್ಣಿಮೆ ಪ್ರಕೃತಿ ಸಂರಕ್ಷಣೆ ಮತ್ತು ಕೃಷಿ ಸಂಸ್ಕೃತಿಯ ಸಂದೇಶ ಸಾರುವ ಹಬ್ಬ: ವೀರೇಶ್ವರ ಶ್ರೀ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಹಸಿರು ಸಂಪತ್ತಿನ ಸಂರಕ್ಷಣೆ, ಭೂತಾಯಿಗೆ ಕೃತಜ್ಞತೆ ಮತ್ತು ಕೃಷಿ ಸಂಸ್ಕೃತಿಯ ಮಹತ್ವವನ್ನು ಸಾರುವ ಶೀಗಿ ಹುಣ್ಣಿಮೆ ಪ್ರಕೃತಿಯೊಂದಿಗೆ ಮಾನವನ ಅವಿನಾಭಾವ ಸಂಬಂಧವನ್ನು ನೆನಪಿಸುವ ಹಬ್ಬವಾಗಿದೆ ಎಂದು ಸದ್ಗುರು ಶ್ರೀ ದಾಸಬಾಳದೀಶ್ವರ ಮಠದ ಪೀಠಾಧಿಪತಿ ವೀರೇಶ್ವರ ಶ್ರೀಗಳು ಹೇಳಿದರು. ನಗರದ ಸದ್ಗುರು ಶ್ರೀ ದಾಸಬಾಳದೀಶ್ವರ ಮಠದಲ್ಲಿ ಸೋಮವಾರ ಶೀಗಿ ಹುಣ್ಣಿಮೆ ಅಂಗವಾಗಿ ನಡೆದ ಶ್ರೀದೇವಿ ಪಾರಾಯಣ ಮಹಾಮಂಗಳ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅನ್ನ ನೀಡುವ ಭೂತಾಯಿಯನ್ನು ಆರಾಧಿಸಿ ಕೃತಜ್ಞತೆ ಸಲ್ಲಿಸುವುದು ನಮ್ಮ…

  • ಯಾದಗಿರಿ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾಗಿ ನ್ಯಾಯವಾದಿ ನಾಗಪ್ಪ ಮೊಗದಂಪುರ ಆಯ್ಕೆ

    ಯಾದಗಿರಿ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾಗಿ ನ್ಯಾಯವಾದಿ ನಾಗಪ್ಪ ಮೊಗದಂಪುರ ಆಯ್ಕೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಯಾದಗಿರಿ ಜಿಲ್ಲಾ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷರಾಗಿ ನ್ಯಾಯವಾದಿ ನಾಗಪ್ಪ ಮೊಗದಂಪುರ ಆಯ್ಕೆಯಾಗಿದ್ದಾರೆ. ನಗರದ ಮಡಿವಾಳ ಮಾಚಿದೇವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಸಮಾಜದ ಮುಖಂಡರು ಭಾಗವಹಿಸಿ, ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಜಿಲ್ಲಾ ಗೌರವಾಧ್ಯಕ್ಷರಾಗಿ ಮಡಿವಾಳಪ್ಪ ಬಿಜಾಸಪುರ, ಕಾರ್ಯದರ್ಶಿಯಾಗಿ ದೇವರಾಜ ಸಾಲಿಕೇರಿ, ಖಜಾಂಚಿಯಾಗಿ ಶ್ರೀಶೈಲ, ಕಾರ್ಯಾಧ್ಯಕ್ಷರಾಗಿ ಬೋನಪ್ಪ ಮಡಿವಾಳ, ಉಪಾಧ್ಯಕ್ಷರಾಗಿ ಸಂತೋಷಕುಮಾರ, ಸಹಕಾರ್ಯದರ್ಶಿಯಾಗಿ ರಾಜಪ್ಪ ತುಮಕೂರ, ಸಂಘಟನಾ ಕಾರ್ಯದರ್ಶಿಗಳಾಗಿ ಯಲ್ಲಪ್ಪ ಚಂದನಕೇರಿ, ಸಂತೋಷ ಮತ್ತು ಮಂಜು ಟಿ.…

  • ಯಾದಗಿರಿಯಲ್ಲಿ ಟೆನಿಸ್ ಕ್ರೀಡಾಕೂಟ: ಕ್ರೀಡೆ ಉತ್ತಮ ಆರೋಗ್ಯಕ್ಕೆ ಸಹಕಾರಿ : ಶಾಸಕ ಕಂದಕೂರ

    ಯಾದಗಿರಿಯಲ್ಲಿ ಟೆನಿಸ್ ಕ್ರೀಡಾಕೂಟ: ಕ್ರೀಡೆ ಉತ್ತಮ ಆರೋಗ್ಯಕ್ಕೆ ಸಹಕಾರಿ : ಶಾಸಕ ಕಂದಕೂರ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಕ್ರೀಡೆಗಳು ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿಗೊಳಿಸುವ ಮೂಲಕ ಉತ್ತಮ ಆರೋಗ್ಯ ಹೊಂದಲು ಬಹಳ ಸಹಕಾರಿಯಾಗುತ್ತದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು. ಇಲ್ಲಿನ ಟೆನಿಸ್ ಕ್ಲಬ್ ವತಿಯಿಂದ ಆಫಿಸರ್ ಕ್ಲಬ್ ಆವರಣದಲ್ಲಿ ರಾಜ್ಯದ ವಿವಿಧ ಕ್ರೀಡಾಪಟುಗಳಿಂದ ಮೂರು ದಿನಗಳ ಕಾಲ ನಡೆದ 30, 40, 50, 60 ಮತ್ತು 70 ಕೆಟಗೆರಿ ಕ್ರೀಡೆಗಳಲ್ಲಿ ವಿಜೇತ ಆಟಗಾರರಿಗೆ ಭಾನುವಾರ ಸಂಜೆ ಮಾಜಿ ಶಾಸಕ ದಿ.ನಾಗಣ್ಣಗೌಡ ಕಂದಕೂರ ಫೌಂಡೇಶನ್ ದಿಂದ ಕಪ್ ಗಳನ್ನು…

  • ಯಾದಗಿರಿಗೆ ತಲುಪಿದ ‘ಡಾ. ವಿಷ್ಣು ದಾದಾ’ ಕನ್ನಡ ರಥಯಾತ್ರೆ: ರಸ್ತೆ ಸುರಕ್ಷತೆ, ಪರಿಸರ ಜಾಗೃತಿ

    ಯಾದಗಿರಿಗೆ ತಲುಪಿದ ‘ಡಾ. ವಿಷ್ಣು ದಾದಾ’ ಕನ್ನಡ ರಥಯಾತ್ರೆ: ರಸ್ತೆ ಸುರಕ್ಷತೆ, ಪರಿಸರ ಜಾಗೃತಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಯಾನಿಯಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲಿಮಠ ಅವರು ಜೂನಿಯರ್ ವಿಷ್ಣುವರ್ಧನ್ ಎಂದೆ ಚಿರಪರಿಚಿತರಾಗಿದ್ದು, ಜೂನಿಯರ್ ವಿಷ್ಣುವರ್ಧನ್ ರಾದ ನಾಗಬಸಯ್ಯ ಮಳಲಿಮಠ ಅವರು ಡಾ.ವಿಷ್ಟು ದಾದಾ ಹೆಸರಿನ‌ ಕನ್ನಡದ ರಥ ಯಾತ್ರೆಯು ಸೋಮವಾರ ಯಾದಗಿರಿ ನಗರಕ್ಕೆ ತಲುಪಿದೆ. 11 ವರ್ಷದಿಂದ ನಾಗಬಸಯ್ಯ ಮಳಲಿಮಠ ಅವರು ಕನ್ನಡ ನಾಡು ನುಡಿ,ಸರಕಾರಿ ಶಾಲೆ ಉಳಿವಿಗೆ,ಪರಿಸರ, ಹಾಗೂ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ರಥಯಾತ್ರೆ ಮೂಲಕ…

  • ಯಾದಗಿರಿಯಲ್ಲಿ ವಂದೇ ಭಾರತ ಸ್ಲೀಪರ್ ರೈಲು ನಿಲುಗಡೆಗೆ ಕ್ರಮ: ಸಚಿವ ವಿ. ಸೋಮಣ್ಣ ಭರವಸೆ

    ಯಾದಗಿರಿಯಲ್ಲಿ ವಂದೇ ಭಾರತ ಸ್ಲೀಪರ್ ರೈಲು ನಿಲುಗಡೆಗೆ ಕ್ರಮ: ಸಚಿವ ವಿ. ಸೋಮಣ್ಣ ಭರವಸೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲಾ ಕೇಂದ್ರದ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ ಸ್ಲೀಪರ್ ಕೋಚ್ ರೈಲು ನಿಲುಗಡೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ,ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆಂದು ಶಾಸಕ ಶರಣಗೌಡ ಕಂದಕೂರ ಹೇಳಿದ್ದಾರೆ. ಈ ಕುರಿತು ಭಾನುವಾರ ಬೆಳಿಗ್ಗೆ ತಮ್ಮೊಂದಿಗೆ ಸಚಿವ ವಿ.ಸೋಮಣ್ಣ ಅವರು, ದೂರವಾಣಿ ಮೂಲಕ ಮಾತನಾಡಿದ್ದು, ವಂದೇ ಭಾರತ ಸ್ಲೀಪರ್ ಕೋಚ್ ರೈಲು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ…

  • ಮೀನುಗಾರರಿಗೆ ಸರಕಾರ ಸೂಕ್ತ ಪರಿಹಾರ ಘೋಷಣೆ ಮಾಡಲಿ : ರಾಚಣ್ಣಗೌಡ ಮುದ್ನಾಳ

    ಮೀನುಗಾರರಿಗೆ ಸರಕಾರ ಸೂಕ್ತ ಪರಿಹಾರ ಘೋಷಣೆ ಮಾಡಲಿ : ರಾಚಣ್ಣಗೌಡ ಮುದ್ನಾಳ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದ ಮೀನುಗಾರರು ಈಗ ಕಷ್ಟದ ಜೀವನ ನಡೆಸುತ್ತಿದ್ದು ಸರಕಾರ ಮೀನುಗಾರರ ಬದುಕಿಗೆ ಸಹಾಯವಾಗಲು ಹೆಚ್ಚಿನ ಪರಿಹಾರ ಹಣ ನೀಡಬೇಕೆಂದು ಬಿಜೆಪಿ ಮುಖಂಡರಾದ ರಾಚಣ್ಣಗೌಡ ಮುದ್ನಾಳ ಅವರು ಹೇಳಿದ್ದಾರೆ. ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರಿನ ಮೂಲಗಳು ಬತ್ತಿ ಹೋಗಿವೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ಭೀಮಾನದಿ ಹಾಗೂ ಕೃಷ್ಣಾ ನದಿ ಬತ್ತಿ ಹೋಗಿವೆ. ಅದೆ ರೀತಿ ಕೆರೆಗಳು…

  • ಹುಲ್ಕಲ್‌ನಲ್ಲಿ ರೈತರೊಂದಿಗೆ ಮನ್ ಕಿ ಬಾತ್ 139ನೇ ಸಂಚಿಕೆ ವೀಕ್ಷಿಸಿದ ರಾಚಣ್ಣಗೌಡ ಮುದ್ನಾಳ

    ಹುಲ್ಕಲ್‌ನಲ್ಲಿ ರೈತರೊಂದಿಗೆ ಮನ್ ಕಿ ಬಾತ್ 139ನೇ ಸಂಚಿಕೆ ವೀಕ್ಷಿಸಿದ ರಾಚಣ್ಣಗೌಡ ಮುದ್ನಾಳ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಯಾದಗಿರಿ ವಿಧಾನಸಭಾ ಕ್ಷೇತ್ರದ ಹುಲ್ಕಲ್ ಗ್ರಾಮದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಅವರು ಭಾನುವಾರ ರೈತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ 139ನೇ ಸಂಚಿಕೆಯನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಸಾಧಕರು, ರೈತರ ಪರಿಶ್ರಮ, ಸ್ವದೇಶಿ ಉತ್ಪನ್ನಗಳ ಬಳಕೆ, ಪರಿಸರ ಸಂರಕ್ಷಣೆ ಹಾಗೂ ತಂತ್ರಜ್ಞಾನದ ಬಳಕೆಯಿಂದ ಜನಜೀವನದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಪ್ರಧಾನಿ ಹಂಚಿಕೊAಡ ವಿಚಾರಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಚಣ್ಣಗೌಡ…

  • ಮನ್ ಕೀ ಬಾತ್ ಜನಧ್ವನಿಯ ನೈಜ ಆಂದೋಲನ: ಮಹೇಶರಡ್ಡಿ ಮುದ್ನಾಳ್

    ಮನ್ ಕೀ ಬಾತ್ ಜನಧ್ವನಿಯ ನೈಜ ಆಂದೋಲನ: ಮಹೇಶರಡ್ಡಿ ಮುದ್ನಾಳ್

    ಸುದ್ದಿ ಬೆಳಕು ವಾರ್ತೆ ಯಾದಗಿರಿ : “ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮವು ಕೇವಲ ಭಾಷಣವಲ್ಲ; ಅದು ಕಳೆದ 12 ವರ್ಷಗಳಿಂದ ದೇಶದ ಕೋಟ್ಯಂತರ ಜನಸಾಮಾನ್ಯರ ಆಶೋತ್ತರಗಳನ್ನು ಬಿಂಬಿಸುವ ಜನಧ್ವನಿಯ ನೈಜ ಆಂದೋಲನವಾಗಿ ರೂಪುಗೊಂಡಿದೆ,” ಎಂದು ಯಾದಗಿರಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ 139ನೇ ಆವೃತ್ತಿಯ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಆಲಿಸಿದ ನಂತರ…

↑
Suddi Belaku