ಯಾದಗಿರಿಯಲ್ಲಿ ಟೆನಿಸ್ ಕ್ರೀಡಾಕೂಟ: ಕ್ರೀಡೆ ಉತ್ತಮ ಆರೋಗ್ಯಕ್ಕೆ ಸಹಕಾರಿ : ಶಾಸಕ ಕಂದಕೂರ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕ್ರೀಡೆಗಳು ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿಗೊಳಿಸುವ ಮೂಲಕ ಉತ್ತಮ ಆರೋಗ್ಯ ಹೊಂದಲು ಬಹಳ ಸಹಕಾರಿಯಾಗುತ್ತದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಇಲ್ಲಿನ ಟೆನಿಸ್ ಕ್ಲಬ್ ವತಿಯಿಂದ ಆಫಿಸರ್ ಕ್ಲಬ್ ಆವರಣದಲ್ಲಿ ರಾಜ್ಯದ ವಿವಿಧ ಕ್ರೀಡಾಪಟುಗಳಿಂದ ಮೂರು ದಿನಗಳ ಕಾಲ ನಡೆದ 30, 40, 50, 60 ಮತ್ತು 70 ಕೆಟಗೆರಿ ಕ್ರೀಡೆಗಳಲ್ಲಿ ವಿಜೇತ ಆಟಗಾರರಿಗೆ ಭಾನುವಾರ ಸಂಜೆ ಮಾಜಿ ಶಾಸಕ ದಿ.ನಾಗಣ್ಣಗೌಡ ಕಂದಕೂರ ಫೌಂಡೇಶನ್ ದಿಂದ ಕಪ್ ಗಳನ್ನು ವಿತರಿಸಿ ಅವರು ಶಾಸಕರು ಮಾತನಾಡಿದರು.
ದೇಶಿ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದ ಕಂದಕೂರ, ಸೋಲು,ಗೆಲುವು ಸಮಾನವಾಗಿ ಸ್ವೀಕರಿಸುವ ಮೂಲಕ ಆಟಗಳನ್ನು ಆಡಬೇಕು. ಸೋಲೆ ಗೆಲಿವಿನ‌ ಮೆಟ್ಟಿಲು ಎಂಬ ಭಾವನೆಯಲ್ಲಿ ಮತ್ತು ಸ್ಪರ್ಧಾತ್ಮಕ ಮನಸ್ಸಿನಿಂದ ಆಟಗಾರರು ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದರು.

ಸದೃಢ ಮತ್ತು ಉತ್ತಮ ಆರೋಗ್ಯಕ್ಕೆ ಕ್ರೀಡೆ ಸರಿಯಾದ ಮದ್ದು ಇದ್ದಂತೆ, ನಿತ್ಯ ವಾಕಿಂಗ್, ಯೋಗ,ಧ್ಯಾನ ಮತ್ತು ಆಟಗಳನ್ನು ಆಡುವುದರಿಂದ ಬಿಪಿ,ಶುಗರ್ ಸೇರಿದಂತೆಯೇ ಇತರೆ ರೋಗಗಳನ್ನು ತಡೆಯಬಹುದೆಂದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಇಂದು ಕ್ರೀಡೆಗಳಿಗೆ ಬಹಳ ಮಹತ್ವವಿದೆ. ರಾಜ್ಯ,ರಾಷ್ಟ್ರ ಮತ್ತು ಅಂತರ ರಾಷ್ಟ್ರದಲ್ಲಿ ಮಾನ್ಯತೆ ಹೆಚ್ಚಾಗಿದ್ದು, ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಗಳು ಆರ್ಥಿಕ ಸೇರಿದಂತೆಯೇ ಇತರೇ ಸೌಲಭ್ಯಗಳು ನೀಡುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಇನ್ನು ಹೆಚ್ಚಿನ‌ ಸಾಧನೆ‌ ಮಾಡಲಿ ಎಂದರು. ಈ ವೇಳೆ ಉದ್ಯಮಿ ಮಲ್ಲಿಕಾರ್ಜುನರೆಡ್ಡಿ ಕಂದಕೂರ, ಹೆಚ್ಚುವರಿ ಎಸ್ ಪಿ ಧರಣೇಶ, ಆಯೋಜಕರಾದ ಅಜಯರೆಡ್ಡಿ ಏಲ್ಹೆರಿ, ನೀಲಕೃಷ್ಣ, ಪ್ರಸಾದ, ಡಾ.ಶರಣಗೌಡ ಕೊಡ್ಲಾ, ಮಹೇಶರೆಡ್ಡಿ ಹತ್ತಿಕುಣಿ ಇತರರಿದ್ದರು.

ಇದೇ ವೇಳೆ 30,40,50,60 ಮತ್ತು 70 ಕೆಟಗೆರಿ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳಲ್ಲಿ ವಿಜೇತ ಆಟಗಾರರಾದ ಜಗದೀಶ ಹೆಂದೆ, ಮಹೇಶರೆಡ್ಡಿ ಹತ್ತಿಕುಣಿ, ಪೂರ್ಣಬಾಬು, ಜೀತೆಂದ್ರ ಅವರಿಗೆ ಶಾಸಕರಾದ ಕಂದಕೂರ ಮತ್ತು ತುನ್ನೂರ ಅವರುಗಳು ಪ್ರಶಸ್ತಿ ಪ್ರದಾನ ಮಾಡಿದರು.

ಕಳೆದ ಮೂರು ದಿನಗಳ ಹಿಂದೆ ಆರಂಭವಾದ ಈ ಕ್ರೀಡಾಕೂಟವನ್ನು ಎಸ್ ಪಿ ಪೃಥ್ವಿಕ್ ಶಂಕರ್, ನಿವೃತ್ತ ಎಡಿಜಿಪಿ ಗಗನ್ ದೀಪ್ ಅವರು ಚಾಲನೆ ನೀಡಿದ್ದರು.

ಬೆಂಗಳೂರು, ಬಾಗಲಕೋಟ್, ರಾಯಚೂರು,ಸಿಂದನೂರ, ಜಮಖಂಡಿ,ವಿಜಯಪುರ,ಬೀದರ ಸೇರಿದಂತೆಯೇ ವಿವಿಧ ಜಿಲ್ಲೆಗಳಿಂದ ಆಟಗಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

↑
Suddi Belaku