ಕಾಡಂಗೇರಾ (ಬಿ) ಗ್ರಾಮದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ವಡಗೇರಾ ತಾಲೂಕಿನ ಕಾಡಂಗೇರಾ (ಬಿ) ಗ್ರಾಮದಲ್ಲಿ ಕನ್ನಡ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ೭೧ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ಶಿವಶರಣ ನಾಯ್ಕೋಡಿ, ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆಗಾರಿಕೆ. ಕನ್ನಡ ಭಾಷೆಯ ಉಳಿವು ಕೇವಲ ಮಾತಿಗೆ ಸೀಮಿತವಾಗದೆ, ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು. ಯುವಜನರು ಕನ್ನಡದ ಇತಿಹಾಸ, ಪರಂಪರೆ ಮತ್ತು ಹಿರಿಮೆಯನ್ನು ಅರಿತು ಭಾಷೆಯ ಬಳಕೆ ಹಾಗೂ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದರ ಜತೆಗೆ ಮುಂದಿನ ಪೀಳಿಗೆಗೂ ಕನ್ನಡದ ಮಹತ್ವವನ್ನು ಪರಿಚಯಿಸುವ ಕೆಲಸವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮ ಘಟಕ ಉಪಾಧ್ಯಕ್ಷ ಸುರೇಶ್, ಯಲ್ಲು ನಾಯಕ, ಸಾಬು ಹೆಡಿಗಿಮದ್ರಿ, ಮಂಜು ವಿಶ್ವಕರ್ಮ, ಮೈಬು ಸಾಬ್, ರಂಗು ನಾಯಕ, ಗ್ರಾಮದ ಮುಖಂಡರಾದ ರಾಜಶೇಖರ್ ಚಾಮನಾಳ, ಲಕ್ಷ್ಮಣ ಪೊಲೀಸ್ ಪಾಟೀಲ್, ಶ್ರೀಮಂತ ಗಾಡಿ, ನಾಗಪ್ಪ ಉಲಟ್ಟಿ, ದೊಡ್ಡಪ್ಪ ಕಾಕ್ಲೂರ್, ಮೌನೇಶ್ ವಿಶ್ವಕರ್ಮ, ಶರಣಪ್ಪ ಕುಂಬಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

↑
Suddi Belaku