
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಗ್ರಾಮೀಣ ಭಾಗದ ಎಲ್ಲಾ ಗ್ರಾಮ ಪಂಚಾಯತಿಯ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಮೇ 1 ರಿಂದ 15ರ ವರೆಗೆ ಆಯೋಜಿಸಲಾಗಿದೆ ಎಂದು ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ.
ಶಿಬಿರವನ್ನು ವ್ಯವಸ್ಥಿತವಾಗಿ 2026ರ ಮೇ 1 ರಿಂದ ರಿಂದ 15ರ ವರೆಗೆ ಜರುಗುವಂತೆ ಕ್ರಮವಹಿಸಲು ಹಾಗೂ ಶಿಬಿರ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ಕೈಗೊಳ್ಳಲು ಈ ಕಛೇರಿಯಿಂದ ಈಗಾಗಲೇ ಎಲ್ಲಾ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ವಂಚಾಯತ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ. ಶಿಬಿರವು ಬೇಸಿಗೆ ಕಾಲದಲ್ಲಿ ಕೈಗೊಳ್ಳುತ್ತಿರುವುದರಿಂದ ಮೂಲಭೂತವಾಗಿ ಅಗತ್ಯವಾಗಿರುವ ತಂಪಾದ ಕುಡಿಯುವ ನೀರು, ತರಬೇತಿ ಕೋಣೆಯಲ್ಲಿ ವಿದ್ಯುತ್ ಬೆಳಕು, ಫ್ಯಾನ್ ಮತ್ತು ಮಕ್ಕಳ ಸುರಕ್ಷಿತೆಗೆ ಆದ್ಯತೆ ನೀಡಲು ಸಹ ಸೂಚಿಸಿದೆ.
ಶಿಬಿರದ ಚಟುವಟಿಕೆಗಳಲ್ಲಿ ನಿಯತಕಾಲಿಕೆಗಳನ್ನು ಓದುವುದು, ಕಥೆ ಕಟ್ಟುವಿಕೆ, ಗಟ್ಟಿ ಓದು (read aloud), ಪತ್ರ ಬರೆಯುವುದು, ಕವನ ರಚಿಸುವುದು, ಭಾಷಣ ಮಾಡುವುದು, ಅಂಕಿ ಸಂಖ್ಯೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಗ್ರಾಮದಲ್ಲಿ ಬಳಸುವ ಅಳತೆ ಮತ್ತು ಮಾಪಕಗಳು, ಟ್ಯಾನ್‌ಗ್ರಾಮ್, ಪೇಪರ್ ಫ್ಯಾನ್, ಜೆಟ್ ಪ್ಲೇನ್, ಕಣ್ಣುಮಿಟುಕಿಸುವ ಗೊಂಬೆ, ಚದುರಂಗ ಕೇರಂ, ಆಕಾಶ ವೀಕ್ಷಣೆ, ಪಕ್ಷಿ ವೀಕ್ಷಣೆ ಇತ್ಯಾದಿ ಇರುತ್ತವೆ. ಅಲ್ಲದೇ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರಿಗೆ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ, ಮೂಲಕ ಈ ಶಿಬಿರ ಕೈಗೊಳ್ಳುವ ಕುರಿತು ತರಬೇತಿ ನೀಡಲಾಗಿರುತ್ತದೆ. ಈ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಈ ಮೂಲಕ ಸಾರ್ವಜನಿಕರಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸಲು ಸೂಚಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










Leave a Reply