ರಾಯಚೂರನಲ್ಲಿ ವಾಸವಿ ಜಯಂತಿ ಬ್ಯಾನರ್ ತೆರವು: ಆರ್ಯವೈಶ್ಯ ಸಮಾಜ ಖಂಡನೆ.

Posted by


ಆರ್ಯವೈಶ್ಯ ಸಮಾಜದ ಧಾರ್ಮಿಕ ಭಾವನೆಗಳಿಗೆ ದಕ್ಕೆ: ಬಾದಾಮಿ

ಸುದ್ದಿ ಬೆಳಕು ವಾರ್ತೆ

ಸೈದಾಪುರ ಏಪ್ರಿಲ್  26: ವಾಸವಿ ಜಯಂತಿಯಂತಹ ಪವಿತ್ರ ಹಬ್ಬದ ಸಂದರ್ಭದಲ್ಲಿ ಬ್ಯಾನರ್‍ಗಳನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿರುವುದು ಆರ್ಯ ವೈಶ್ಯ ಸಮಾಜದ ಧಾರ್ಮಿಕ ಭಾವನೆಗಳಿಗೆ ದಕ್ಕೆಯುಂಟುಮಾಡಿದೆ ಎಂದು ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ರಾಘವೇಂದ್ರ ಬಾದಾಮಿ ಸೈದಾಪುರ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರ ನಗರದಲ್ಲಿ ವಾಸವಿ ಜಯಂತಿ ಪ್ರಯುಕ್ತ ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್‍ಗಳನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿರುವ ಕ್ರಮಕ್ಕೆ ಆರ್ಯವೈಶ್ಯ ಸಮಾಜದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು , ನಮ್ಮ ಆರ್ಯವೈಶ್ಯ ಸಮಾಜವು ನಮ್ಮ ರಾಜ್ಯಕ್ಕೆ ಮತ್ತು ದೇಶದ ಆರ್ಥಿಕತೆಗೆ ತನ್ನದೆ ಕೊಡುಗೆ ನೀಡುತ ಬಂದಿದೆ ಅದರ ಜೊತೆಗೆ ಯಾವುದೇ ಸಂಘರ್ಷಕ್ಕೆ ಇಳಿಯದೆ ಶಾಂತಿಯಯೇ ನಮ್ಮ ಮೂಲ ಮಂತ್ರವಾಗಿರಬೇಕು ಎಂದು ಭೋಧಿಸಿದ ನಮ್ಮ ಕುಲದೇವತೆಯ ಕನ್ನಿಕಾ ಪರಮೇಶ್ವರಿ ವಾಸವಿ ಅಮ್ಮನವರ ಜಯಂತಿ ವೇಳೆ ನಗರಸಭೆಯ ಅಧಿಕಾರಿಗಳು ಯಾವುದೇ ಪೂರ್ವ ಸೂಚನೆ ನೀಡದೆ ಈ ಕ್ರಮ ಕೈಗೊಂಡಿರುವುದು ಖಂಡನೀಯವಾಗಿದ್ದು, ಸಂಬಂಧಪಟ್ಟವರು ಕ್ಷಮೆಯಾಚನೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಸಮಾಜದ ಹಬ್ಬಗಳಿಗೆ ಗೌರವ ನೀಡಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

Suddi Belaku