Tag: Yadgir Farmers

  • ಟ್ರ‍್ಯಾಕ್ಟರ್ ಮೂಲಕ ಹತ್ತಿ ಬೆಳೆ ನಾಶ ಮಾಡಿದ ರೈತ

    ಟ್ರ‍್ಯಾಕ್ಟರ್ ಮೂಲಕ ಹತ್ತಿ ಬೆಳೆ ನಾಶ ಮಾಡಿದ ರೈತ

    ಸುದ್ದಿ ಬೆಳಕು ವಾರ್ತೆ ಶಹಾಪುರ : ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ತೇವಾಂಶದ ಕೊರತೆಯಿಂದ ಹತ್ತಿ ಗಿಡಗಳು ಬೆಳವಣಿಗೆ ಕಾಣದೆ ಒಣಗಿ ಹೋದ ಪರಿಣಾಮ, ಕಂಗಾಲಾದ ರೈತರೊಬ್ಬರು ತಾವು ಸಾಲ-ಸೋಲ ಮಾಡಿ ಬೆಳೆದಿದ್ದ ಬರೋಬ್ಬರಿ 7 ಎಕರೆ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಸಂಪೂರ್ಣ ನಾಶಪಡಿಸಿದ ಮನಕಲಕುವ ಘಟನೆ ಸಮೀಪದ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೋರನಹಳ್ಳಿ ಪಟ್ಟಣದ ರೈತ ಕಾಳಪ್ಪ ಪತ್ತಾರ ಅವರು ಗ್ರಾಮದ ಸರ್ವೆ ನಂ. 44/01 ರಲ್ಲಿರುವ ತಮ್ಮ 7 ಎಕರೆ…

  • ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರ ಪುನರ್ ಪ್ರಾರಂಭಿಸಲು ಕರವೇ ಒತ್ತಾಯ

    ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರ ಪುನರ್ ಪ್ರಾರಂಭಿಸಲು ಕರವೇ ಒತ್ತಾಯ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ರಾಜ್ಯ ಸರ್ಕಾರ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತುಕೊಟ್ಟು ಹಾಲು ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡುತ್ತಿಲ್ಲವಾದ್ದರಿಂದ ಈ ಭಾಗದಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ಯಾದಗಿರಿ ಜಿಲ್ಲೆಯ ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರವನ್ನು ಪುನರ್ ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರ ಪುನರ್ ಪ್ರಾರಂಭಿಸುವುದರ ಜೊತೆಗೆ ರೈತರಿಗೆ ಹಾಲು…

  • ಬರ ಪರಿಹಾರದ ಶೇ.50ರಷ್ಟು ಕೇಂದ್ರದ ಪಾಲಿನ ಹಣ ಬಿಡುಗಡೆಗೆ ಶಾಸಕ ತುನ್ನೂರ್ ಆಗ್ರಹ

    ಬರ ಪರಿಹಾರದ ಶೇ.50ರಷ್ಟು ಕೇಂದ್ರದ ಪಾಲಿನ ಹಣ ಬಿಡುಗಡೆಗೆ ಶಾಸಕ ತುನ್ನೂರ್ ಆಗ್ರಹ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಮಳೆ ಇಲ್ಲದ ಬೆಳೆಗಳು ಒಣಗಿದ ಪರಿಣಾಮ ರಾಜ್ಯದ ರೈತರ ಪರಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.50ರಷ್ಟು ಪರಿಹಾರದ ಹಣ ಕೂಡಲೇ ಬಿಡುಗಡೆ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಆಗ್ರಹಿಸಿದರು. ಗುರುವಾರ ವಿಶೇಷ ಅಧಿವೇಶನದಲ್ಲಿ ಬರ ಪರಸ್ಥಿತಿ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಸರ್ಕಾರವು ಈಗಾಗಲೇ 178 ತಾಲೂಕುಗಳು ಬರಪೀಡಿತವೆಂದು ಘೋಷಣೆ ಮಾಡಿದೆ, ಆದರೇ ಸಮಯ ಮೀರಿದರೇ ಇನ್ನೂ 50ಕ್ಕೂ ತಾಲೂಕುಗಳು ಸೇರಿಸಬೇಕಾಗುತ್ತದೆ, ಸುಮಾರು…

  • ರೈತರ ಖಾತೆಗೆ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಜಮೆ ಮಾಡಿ: ರೈತ ಸಂಘ ಒತ್ತಾಯ

    ರೈತರ ಖಾತೆಗೆ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಜಮೆ ಮಾಡಿ: ರೈತ ಸಂಘ ಒತ್ತಾಯ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಜಿಲ್ಲೆಯಲ್ಲಿ ಬರಗಾಲ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರೈತರ ಖಾತೆಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರವನ್ನು ತಕ್ಷಣ ಜಮೆ ಮಾಡಬೇಕು. ಬೆಳೆ ವಿಮೆ ಹಾಗೂ ಇನ್ಶುರೆನ್ಸ್‌ ಮೊತ್ತವನ್ನು ವಿಳಂಬವಿಲ್ಲದೆ ಪಾವತಿಸಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ. ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕೋಬ ಕಟ್ಟಿಮನಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಈ…

  • ರೈತರ ಕೃಷಿ ಪಂಪಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ಗೆ ಆಗ್ರಹಿಸಿ ಮೌನ ಪ್ರತಿಭಟನೆ

    ರೈತರ ಕೃಷಿ ಪಂಪಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ಗೆ ಆಗ್ರಹಿಸಿ ಮೌನ ಪ್ರತಿಭಟನೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಭೀಕರ ಬರಗಾಲ ಉದ್ಭವಿಸಿದೆ, ಯಾದಗಿರಿ ಹಾಗೂ ಗುರುಮಿಠಕಲ್ ತಾಲ್ಲೂಕಿನಲ್ಲಿ ಸಣ್ಣ-ಪುಟ್ಟ ರೈತರು ತಮ್ಮ ಜಮೀನುಗಳಲ್ಲಿ ಬೊರವೆಲ್ ಕೊರೆಸಿ, ವಿದ್ಯುತ್ ಸಂಪರ್ಕ ಪಡೆದು ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಆದರೆ ಕಳೆದ ೧೫ ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ರೈತರ ಬೆಳೆಗಳು ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ, ತಾಲ್ಲೂಕಿನ ಬಾಚವಾರ ಗ್ರಾಮದಲ್ಲಿ ರೈತರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮೌನ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಹಾಗೂ…

  • ಬ್ಯಾಂಕ್‌ನಿಂದ ರೈತರಿಗೆ ₹2.20 ಕೋಟಿ ಕೃಷಿ ಸಾಲ: 3% ಬಡ್ಡಿದರದಲ್ಲಿ ಸೌಲಭ್ಯ

    ಬ್ಯಾಂಕ್‌ನಿಂದ ರೈತರಿಗೆ ₹2.20 ಕೋಟಿ ಕೃಷಿ ಸಾಲ: 3% ಬಡ್ಡಿದರದಲ್ಲಿ ಸೌಲಭ್ಯ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ತಾಲ್ಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ನಿಯಮಿತ(ಪಿಕಾರ್ಡ್ ಬ್ಯಾಂಕ್) ನಿಂದ ತಾಲ್ಲೂಕಿನ ರೈತರಿಗೆ ಸರ್ಕಾರದ ಯೋಜನೆಗಳ ಲಾಭ ಪ್ರಾಮಾಣಿಕವಾಗಿ ತಲುಪಿಸಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ರಾಮಣ್ಣ ಬಳಿಚಕ್ರ ಹೇಳಿದರು. ಶುಕ್ರವಾರ ನಗರದ ಬ್ಯಾಂಕ್‌ನ ಆವರಣದಲ್ಲಿ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ೬೮ನೇ ವರ್ಷದ ವಾರ್ಷಿ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಈ ವರ್ಷ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿದಿಲ್ಲ, ರೈತರು ಬಿತ್ತನೆ ಮಾಡಿದ ಬೆಳೆಗಳು ಬಹುತೇಕ ನಾಶವಾಗಿವೆ, ಇಂತಹ ಕಠೀಣ ಸಂದರ್ಭದಲ್ಲಿ…

  • ತಕ್ಷಣ ಬರ ಪರಿಹಾರ ಕಾಮಗಾರಿ ಆರಂಭಿಸಿ: ಟಿ.ಎನ್. ಭೀಮುನಾಯಕ ಆಗ್ರಹ

    ತಕ್ಷಣ ಬರ ಪರಿಹಾರ ಕಾಮಗಾರಿ ಆರಂಭಿಸಿ: ಟಿ.ಎನ್. ಭೀಮುನಾಯಕ ಆಗ್ರಹ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಬರ ಘೋಷಣೆ ಮಾಡುವ ಪ್ರಕ್ರಿಯೆಯಲ್ಲೇ ಕಾಲಹರಣ ಮಾಡದೆ, ಜಿಲ್ಲೆಯ ಸಂಕಷ್ಟದಲ್ಲಿರುವ ರೈತರ ನೆರವಿಗೆ ತಕ್ಷಣ ಧಾವಿಸಿ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ವಿಶೇಷ ಬರಗಾಲ ಪರಿಹಾರ ಪ್ಯಾಕೇಜ್…

  • ಯಾದಗಿರಿ, ವಡಗೇರಾ ಬರ ಘೋಷಣೆ: ಶಾಸಕ ಚನ್ನಾರೆಡ್ಡಿ ತುನ್ನೂರ್‌ಗೆ ಸನ್ಮಾನ

    ಯಾದಗಿರಿ, ವಡಗೇರಾ ಬರ ಘೋಷಣೆ: ಶಾಸಕ ಚನ್ನಾರೆಡ್ಡಿ ತುನ್ನೂರ್‌ಗೆ ಸನ್ಮಾನ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಯಾದಗಿರಿ ಹಾಗೂ ವಡಗೇರಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರನ್ನು ಯಾದಗಿರಿ ಮತ್ತು ವಡಗೇರಾ ತಾಲೂಕಿನ ರೈತರು ಹಾಗೂ ಕಾಂಗ್ರೆಸ್ ಮುಖಂಡರು ಶಾಸಕರ ಕಾರ್ಯಾಲಯದಲ್ಲಿ ಸನ್ಮಾನಿಸಿದರು. ಬರಪೀಡಿತ ತಾಲೂಕುಗಳ ಘೋಷಣೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ವಿವಿಧ ಬರ ಪರಿಹಾರ ಕ್ರಮಗಳು ಹಾಗೂ ಸೌಲಭ್ಯಗಳು ದೊರೆಯುವ ನಿರೀಕ್ಷೆ ಮೂಡಿದೆ. ಈ ಹಿನ್ನೆಲೆಯಲ್ಲಿ ಶಾಸಕರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.…

  • ಯಾದಗಿರಿ ಬರ ಪಟ್ಟಿಗೆ ಉಳಿದ ತಾಲೂಕುಗಳ ಸೇರ್ಪಡೆ: ಶಾಸಕ ತುನ್ನೂರ ಭರವಸೆ

    ಯಾದಗಿರಿ ಬರ ಪಟ್ಟಿಗೆ ಉಳಿದ ತಾಲೂಕುಗಳ ಸೇರ್ಪಡೆ: ಶಾಸಕ ತುನ್ನೂರ ಭರವಸೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಸರ್ಕಾರದ ಬರ ಘೋಷಣೆಯ ನಿರ್ಧಾರದ ಬಗ್ಗೆ ರೈತರು ಯಾವದೇ ಆತಂಕ್ಕಕ್ಕೆ ಒಳಗಾಗಬಾರದು. ಮುಂದಿನ ೮-೧೦ ದಿನದಲ್ಲಿ ಬಿಟ್ಟು ಹೋಗಿರುವ ಇನ್ನುಳಿದ ತಾಲ್ಲೂಕಗಳನ್ನು ಬರ ಪಟ್ಟಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಕಂದಾಯ ಸಚಿವರಾದ ಜಿ.ಪರಮೇಶ್ವರ ಅವರು ನೀಡಿದ್ದು, ಹಿಂದಿನ ಪಟ್ಟಿಯಲ್ಲಿ ಕೈಬಿಟ್ಟ ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಲಿವೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದ್ದಾರೆ. ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಶಾಸಕರು, ಸೆ.೪ ಶುಕ್ರವಾರ ಕಂದಾಯ ಸಚಿವ…

  • ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹ: ಜೇಸ್ಕಾಂ ಕಚೇರಿಗೆ ಮನವಿ

    ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹ: ಜೇಸ್ಕಾಂ ಕಚೇರಿಗೆ ಮನವಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ರಾಜ್ಯದಲ್ಲಿ ಬರಗಾಲ ಆವರಿಸಿದ ಪರಿಣಾಮ ಈಗ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಐಪಿಸೆಟ್ ಗಳಿಗೆ ಈಗ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ಜೇಸ್ಕಾಂ ಅಧಿಕಾರಿಗಳು ಯಾವುದೇ ವಿದ್ಯುತ್ ಸಮಸ್ಯೆಯಾಗದಂತೆ ಐಪಿಸೆಟ್ ಗಳಿಗೆ ಸಮರ್ಪಕವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ರೈತರು ಆಗ್ರಹ ಮಾಡಿದ್ದಾರೆ. ಯಾದಗಿರಿ ತಾಲೂಕಿನ ಬೆಳಗೇರಾ,ಪಗಲಾಪುರ,ಯಡ್ಡಳ್ಳಿ ಗ್ರಾಮದ ರೈತರು ಗುರುವಾರ ಯಾದಗಿರಿ ಜೇಸ್ಕಾಂ ಕಚೇರಿಗೆ ಆಗಮಿಸಿ ಜೇಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ಮೂಲಕ ಆಗ್ರಹ ಮಾಡಿದ್ದಾರೆ. ಮಳೆ ಕೊರತೆ ಪರಿಣಾಮ…

↑
Suddi Belaku