ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹ: ಜೇಸ್ಕಾಂ ಕಚೇರಿಗೆ ಮನವಿ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ರಾಜ್ಯದಲ್ಲಿ ಬರಗಾಲ ಆವರಿಸಿದ ಪರಿಣಾಮ ಈಗ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಐಪಿಸೆಟ್ ಗಳಿಗೆ ಈಗ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ಜೇಸ್ಕಾಂ ಅಧಿಕಾರಿಗಳು ಯಾವುದೇ ವಿದ್ಯುತ್ ಸಮಸ್ಯೆಯಾಗದಂತೆ ಐಪಿಸೆಟ್ ಗಳಿಗೆ ಸಮರ್ಪಕವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ರೈತರು ಆಗ್ರಹ ಮಾಡಿದ್ದಾರೆ.

ಯಾದಗಿರಿ ತಾಲೂಕಿನ ಬೆಳಗೇರಾ,ಪಗಲಾಪುರ,ಯಡ್ಡಳ್ಳಿ ಗ್ರಾಮದ ರೈತರು ಗುರುವಾರ ಯಾದಗಿರಿ ಜೇಸ್ಕಾಂ ಕಚೇರಿಗೆ ಆಗಮಿಸಿ ಜೇಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ಮೂಲಕ ಆಗ್ರಹ ಮಾಡಿದ್ದಾರೆ.

ಮಳೆ ಕೊರತೆ ಪರಿಣಾಮ ರೈತರು ಬೆಳೆದ ಬೆಳೆ ಉಳಿಸಿಕೊಂಡು ಬೆಳೆಸಲು ರೈತರು ಕೊಳವೆ ಬಾವಿ,ತೆರೆದ ಬಾವಿ ಸೇರಿ ಇನ್ನಿತರ ನೀರಿನ ಮೂಲಗಳು ಆಶ್ರಯಿಸಿಕೊಂಡಿದ್ದಾರೆ.

ನೀರಿನ ಕೊರತೆಯಿಂದ ಹತ್ತಿ,ಭತ್ತ,ಶೇಂಗಾ ಬೆಳೆ ಬಾಡುತ್ತಿದೆ.ಆದರೆ, ಬಾಡುವ ಬೆಳೆಗಳಿಗೆ ಕೊಳವೆ ಬಾವಿ ನೀರು ಹರಿಸಿಕೊಂಡು ಬೆಳೆ ಸರಿಯಾಗಿ ಬೆಳೆಯಬೇಕೆಂದರೆ ಈಗ ಬರದ ಜೊತೆ ಕರೆಂಟ್ ಸಮಸ್ಯೆ ತಲೆದೋರಿದೆ.

ವಿದ್ಯುತ್ ಬೇಡಿಕೆ ಹೆಚ್ಚಾದ ಹಿನ್ನಲೆ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ.ಸುಟ್ಟು ಹೋದ ವಿದ್ಯುತ್ ಪರಿವರ್ತಕಗಳು ಬೇಗ ದುರಸ್ತಿ ಮಾಡ್ದೆ ವಿಳಂಬ ಮಾಡಲಾಗುತ್ತಿದೆ.ಅದೆ ರೀತಿ ಹೆಚ್ಚಿನ ಪ್ರಮಾಣದಲ್ಲಿ ಟಿಸಿಗಳನ್ನು ಅಳವಡಿಸಿ ವಿದ್ಯುತ್ ಕೊರತೆಯಾಗದಂತೆ ಕ್ರಮಕೈಗೊಳ್ಳುವಂತೆ ರೈತರು ಜೇಸ್ಕಾಂ‌‌ ಇಲಾಖೆ ಇಇ ರಾಘವೇಂದ್ರ ಅವರಿಗೆ ಮನವಿ ಮಾಡಿದರು. ಕರೆಂಟ್ ಇಲ್ಲದಿದ್ದರೆ ನಾವು ಬದುಕುವದು ಹೇಗೆ ಕರೆಂಟ್ ಸರಿಯಾಗಿ ಕೊಡಿ ನಾವು ಬೆಳೆಗೆ ನೀರು ಹರಿಸಿಕೊಳ್ಳುತ್ತೆವೆ.ಇಲ್ಲದಿದ್ದರೆ ಸಾಯುವ ಪರಿಸ್ಥಿತಿ ಬರಲಿದೆ ಎಂದರು.

ಬಾಕ್ಸ್: ವಿವಿಧ ಗ್ರಾಮದಿಂದ ಆಗಮಿಸಿದ ರೈತರ ಸಮಸ್ಯೆಗಳನ್ನು ಜೇಸ್ಕಾಂ ಇಇ ರಾಘವೇಂದ್ರ ಅವರು ಆಲಿಸಿ ಸ್ಥಳದಲ್ಲಿ ಇದ್ದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ವಿದ್ಯುತ್ ಪೂರೈಕೆ ಮಾಡಬೇಕು .ವಿದ್ಯುತ್ ವಿತರಣೆಯಲ್ಲಿ ಲೋಪವಾದರೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಈ ವೇಳೆ ರೈತರಾದ ಸೋಮನಗೌಡ ಪೊಲೀಸ್ ಪಾಟೀಲ, ಸಿದ್ದಪ್ಪ ಪೂಜಾರಿ, ಬಸ್ಸಪ್ಪ ಚಟ್ಟೆರ್, ಅಯ್ಯಪ್ಪ, ನರಸರೆಡ್ಡಿ, ಬಾಲರೆಡ್ಡಿ, ಬಸನಗೌಡ, ಸದಾಶೀವರೆಡ್ಡಿ ಕೊಡ್ಲಾ, ಶಿವಣ್ಣಗೌಡ ಅಯ್ಯಣನೋರ್, ಜಗದೀಶ್ ಕೊಲಕುಂದಿ, ಶಂಕರೆಪ್ಪ ಪೂಜಾರಿ, ಮಲ್ಲಿಕಾರ್ಜುನ, ಸಿದ್ದಲಿಂಗಪ್ಪ ಪೂಜಾರಿ, ಭೀಮರಾಯ ಬಸುನಾಯಕ, ಹಣಮಂತ ಹೂಗಾರ, ಕಾಶೇಪ್ಪ ರೈತರು ಇದ್ದರು.

Leave a Reply

Your email address will not be published. Required fields are marked *

↑
Suddi Belaku