ಅಕ್ಟೋಬರ್ 3ರಿಂದ ಗುರುಮಠಕಲ್–ಮುಂಬೈ ಬಸ್ ಸೇವೆ ಪುನರಾರಂಭ

Posted by

–

ಸುದ್ದಿ ಬೆಳಕು ವಾರ್ತೆ

ಗುರುಮಠಕಲ್ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಗುರುಮಠಕಲ್ ಘಟಕದಿಂದ ಗುರುಮಠಕಲ್–ಮುಂಬೈ ಬಸ್ ಸೇವೆಯನ್ನು ಅಕ್ಟೋಬರ್ 3ರಿಂದ ಪುನರಾರಂಭಿಸಲಾಗುತ್ತಿದೆ ಎಂದು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.

ಗುರುಮಠಕಲ್‌ನಿಂದ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಬಸ್ ಹೊರಡಲಿದ್ದು, ಮುಧೋಳ, ಸೇಡಂ, ಕಲಬುರಗಿ, ಸೊಲ್ಲಾಪುರ ಹಾಗೂ ಪುಣೆ ಮಾರ್ಗವಾಗಿ ಸಂಚರಿಸಲಿದೆ. ಮರುದಿನ ಬೆಳಗ್ಗೆ 6.30ಕ್ಕೆ ಮುಂಬೈನ ಬೊರಿವಿಲಿ ತಲುಪಲಿದೆ.

ಮುಂಬೈನ ಬೊರಿವಿಲಿಯಿಂದ ಅದೇ ದಿನ ಮಧ್ಯಾಹ್ನ 2.30ಕ್ಕೆ ಬಸ್ ಗುರುಮಠಕಲ್‌ನತ್ತ ಹೊರಡಲಿದೆ. ಇದೇ ಮಾರ್ಗದಲ್ಲಿ ಸಂಚರಿಸಿ ಮರುದಿನ ಬೆಳಗ್ಗೆ 7.15ಕ್ಕೆ ಗುರುಮಠಕಲ್ ತಲುಪಲಿದೆ.

ಮುಂಬೈ ಸೇರಿದಂತೆ ಮಾರ್ಗ ಮಧ್ಯದ ವಿವಿಧ ನಗರಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಈ ಬಸ್ ಸೇವೆಯಿಂದ ಅನುಕೂಲವಾಗಲಿದೆ. ಪ್ರಯಾಣಿಕರು ಸುರಕ್ಷಿತ ಹಾಗೂ ಸುಸಜ್ಜಿತ ಸಾರಿಗೆ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಘಟಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku