ರೈತರ ಕೃಷಿ ಪಂಪಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ಗೆ ಆಗ್ರಹಿಸಿ ಮೌನ ಪ್ರತಿಭಟನೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಭೀಕರ ಬರಗಾಲ ಉದ್ಭವಿಸಿದೆ, ಯಾದಗಿರಿ ಹಾಗೂ ಗುರುಮಿಠಕಲ್ ತಾಲ್ಲೂಕಿನಲ್ಲಿ ಸಣ್ಣ-ಪುಟ್ಟ ರೈತರು ತಮ್ಮ ಜಮೀನುಗಳಲ್ಲಿ ಬೊರವೆಲ್ ಕೊರೆಸಿ, ವಿದ್ಯುತ್ ಸಂಪರ್ಕ ಪಡೆದು ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಆದರೆ ಕಳೆದ ೧೫ ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ರೈತರ ಬೆಳೆಗಳು ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ, ತಾಲ್ಲೂಕಿನ ಬಾಚವಾರ ಗ್ರಾಮದಲ್ಲಿ ರೈತರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮೌನ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈಗಾಗಲೇ ಮುಂಗಾರುಮಳೆ ಒಂದು ಕಡೆದ ಕೈ ಕೊಟ್ಟಿದೆ, ರೈತರು ಸಾಲ ಮಾಡಿ, ಭಿತ್ತನೆ ಮಾಡಿದ ಬೆಳೆಗಳು ನಾಶವಾಗಿವೆ, ಇನ್ನೂ ಕೆಲವು ರೈತರು ತಮ್ಮ ಸಣ್ಣ-ಪಿಟ್ಟ ಜಮೀನುಗಳಲ್ಲಿ ಬೊರವೆಲ್ ಹಾಕಿಸಿ, ತರಕಾರಿ, ಭತ್ತ, ಹತ್ತಿ ಇನ್ನೀತರ ಬೆಳೆಗಳನ್ನು ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡಿ ಹಾಕಿದ್ದಾರೆ, ಆದರೆ ಜೆಸ್ಕಾಂ ನಿರ್ಲಕ್ಷದಿಂದ ರೈತರಿಗೆ ೭ ಗಂಟೆ ತ್ರಿಪೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಪದೇ-ಪದೇ ವಿದ್ಯುತ್ ಸರಬರಾಜು ಕಡಿತಗೊಳ್ಳುತ್ತಿದೆ, ರೈತರ ಕೃಷಿ ಪಂಪಸೆಟ್ ಯಂತ್ರಗಳು ಸುಡುತ್ತಿವೆ, ಅಲ್ಲದೇ ಬೆಳೆಗಳು ಕೂಡ ನೀರಿಲ್ಲದೇ ಬಿಸಿಲಿನ ತಾಪಕ್ಕೆ ಬಾಡುತ್ತಿವೆ ಎಂದು ತಮ್ಮ ನೋವು ವ್ಯಕ್ತಪಡಿಸಿದರು,
೨ ತಾಲ್ಲೂಕುಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಪಂಪಸೆಟ್‌ಗಳನ್ನು ಅವಲಂಬಿಸಿ, ಕೃಷಿ ಕ್ಷೇತ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ, ಒಂದು ಕಡೆ ಮಳೆ ಕೊರತೆ ಹಾಗೂ ವಿದ್ಯುತ್ ಸೂಕ್ತ ಸರಬರಾಜು ಇಲ್ಲದೇ ರೈತಾಪಿ ವರ್ಗ ಉದ್ಯೋಗ ಅರಸಿ ಬೆಂಗಳೂರು, ಪೂನಾ, ಮುಂಬೈ ನಗರಗಳಿಗೆ ಬೃಹತ್ ಸಂಖ್ಯೆಯಲ್ಲಿ ಗುಳೆ ಹೋಗುತ್ತಿದ್ದಾರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಅರ್ಜುನಪ್ಪ ಬಡಿಗೇರ್, ಹಿರಿಯ ಹೋರಾಟಗಾರರಾದ ಉಮೇಶ್ ಮುದ್ನಾಳ್, ರೈತ ಮುಖಂಡರಾದ ಶಿವಯೋಗಿ ಬಡಿಗೇರ್, ಮಾಣಿಕರಾಯ ಡೊಂಕನೂರ್, ಶಾಂತಪ್ಪ, ಬಸವರಾಜ್ ಕವಲ್ದಾರ್, ಮಂಜುನಾಥ ಬಡಿಗೇರ ಸೇರಿದಂತೆ ರೈತರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku