ಬ್ಯಾಂಕ್‌ನಿಂದ ರೈತರಿಗೆ ₹2.20 ಕೋಟಿ ಕೃಷಿ ಸಾಲ: 3% ಬಡ್ಡಿದರದಲ್ಲಿ ಸೌಲಭ್ಯ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ತಾಲ್ಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ನಿಯಮಿತ(ಪಿಕಾರ್ಡ್ ಬ್ಯಾಂಕ್) ನಿಂದ ತಾಲ್ಲೂಕಿನ ರೈತರಿಗೆ ಸರ್ಕಾರದ ಯೋಜನೆಗಳ ಲಾಭ ಪ್ರಾಮಾಣಿಕವಾಗಿ ತಲುಪಿಸಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ರಾಮಣ್ಣ ಬಳಿಚಕ್ರ ಹೇಳಿದರು.
ಶುಕ್ರವಾರ ನಗರದ ಬ್ಯಾಂಕ್‌ನ ಆವರಣದಲ್ಲಿ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ೬೮ನೇ ವರ್ಷದ ವಾರ್ಷಿ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಈ ವರ್ಷ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿದಿಲ್ಲ, ರೈತರು ಬಿತ್ತನೆ ಮಾಡಿದ ಬೆಳೆಗಳು ಬಹುತೇಕ ನಾಶವಾಗಿವೆ, ಇಂತಹ ಕಠೀಣ ಸಂದರ್ಭದಲ್ಲಿ ಕೂಡ ಬ್ಯಾಂಕ್ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡಿ, ಸಾಲ ವಸೂಲಾತಿಯಲ್ಲಿ ಶೇ.೯೦% ರಷ್ಟು ಸಾಧನೆ ಮಾಡಿ, ಜಿಲ್ಲಾ ಮಟ್ಟದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ಪ್ರಥಮ ಸ್ಥಾನದಲ್ಲಿರುವುದು ಎಲ್ಲಿರಿಗೂ ಗೌರವದ ವಿಷಯ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್‌ನಿAದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಳ್ಳಲು ೨.೨೦ ಕೋಟಿ ರೂ. ಸಾಲ ಶೇ. ೩%ರ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗಿದೆ, ಅದರ ಲಾಭ ಪಡೆದುಕೊಂಡು ಆರ್ಥಿಕವಾಗಿ ಬದಲಾವಣೆ ಸಾಧಿಸಬೇಕೆಂದರು.
ಬ್ಯಾAಕ್‌ನ ನಿರ್ದೇಶಕ ಬಸರಡ್ಡಿ ಪಾಟೀಲ್ ಹೆಗ್ಗಣಗೇರಾ ಮಾತನಾಡಿ, ಬ್ಯಾಂಕ್‌ನ ವಾರ್ಷಿಕ ವರಧಿ ವಾಚಿಸಿ, ಈ ವರ್ಷ ಬರಗಾಲ ಇರುವುದರಿಂದ ರೈತರಿಗೆ ಅನುಕೂಲತೆ ಒದಗಿಸಲು ಸಹಕಾರ ಇಲಾಖೆಯಿಂದ ಹೆಚ್ಚಿನ ಸಹಾಯ ನೀಡಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಬ್ಯಾಂಕ್‌ನ ವ್ಯವಸ್ಥಾಪಕ ಅಯ್ಯಣರಡ್ಡಿ ನಾಯ್ಕಲ್, ಬ್ಯಾಂಕ್‌ನ ಆರ್ಥಿಕ ತಃಖ್ತೆಗಳನ್ನು ಮಂಡಿಸಿ, ಬರುವ ದಿನಗಳಲ್ಲಿ ಅರ್ಹ ರೈತರಿಗೆ ಬ್ಯಾಂಕ್‌ನಿAದ ಹೆಚ್ಚಿನ ಆರ್ಥಿಕ ಸಾಲ ನೀಡಲಾಗುವುದು ಎಂದರು.
ವೇದಿಕೆ ಮೇಲೆ ಬ್ಯಾಂಕ್‌ನ ಉಪಾಧ್ಯಕ್ಷರಾದ ನಾಗರಡ್ಡಿ ಅಣಬಿ, ನಿರ್ದೇಶಕರಾದ ಶರಣಪ್ಪಗೌಡ ಮಾಲಿ ಪಾಟೀಲ್ ಕೌಳೂರ, ಆರ್. ಮಹಾದೇವಪ್ಪ ಅಬ್ಬೆತುಮಕೂರ, ಅಮೃತರಡ್ಡಿ ಪಾಟೀಲ್ ಹತ್ತಿಕುಣಿ, ರಾಘವೇಂದ್ರರಡ್ಡಿ ಕೊಂಕಲ್, ವೆಂಕಟರಾಮುಲು ಚಪೆಟ್ಲಾ, ಶರಣಗೌಡ ಸೌರಾಷ್ಟçಹಳ್ಳಿ, ರವಿಪುತ್ರ ಆರ್. ಹೊಸಳ್ಳಿ, ರಾಮಚಂದ್ರಪ್ಪ ಮುಂಡರಗಿ, ಬನ್ನಪ್ಪ ಹಳಿಗೇರಿ, ಶ್ರೀಮತಿ ಮರೆಮ್ಮ ಮುಂಡರಗಿ, ಜಲ್ಲಮ್ಮ ತಾತಳಗೇರಾ, ಜಿಲ್ಲಾ ವ್ಯವಸ್ಥಾಪಕರಾದ ಅಜಯ ಮಾಲಿ ಪಾಟೀಲ್, ಸಹಕಾರ ಇಲಾಖೆ ಅಧಿಕಾರಿ ಪ್ರಶಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀಮತಿ ಕಮಲಾಬಾಯಿ ಸ್ವಾಗತಿಸಿದರು, ಶ್ರೀಮತಿ ಸೌಮ್ಯಶ್ರೀ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku