ಬರ ಪರಿಹಾರದ ಶೇ.50ರಷ್ಟು ಕೇಂದ್ರದ ಪಾಲಿನ ಹಣ ಬಿಡುಗಡೆಗೆ ಶಾಸಕ ತುನ್ನೂರ್ ಆಗ್ರಹ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಮಳೆ ಇಲ್ಲದ ಬೆಳೆಗಳು ಒಣಗಿದ ಪರಿಣಾಮ ರಾಜ್ಯದ ರೈತರ ಪರಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.50ರಷ್ಟು ಪರಿಹಾರದ ಹಣ ಕೂಡಲೇ ಬಿಡುಗಡೆ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಆಗ್ರಹಿಸಿದರು.

ಗುರುವಾರ ವಿಶೇಷ ಅಧಿವೇಶನದಲ್ಲಿ ಬರ ಪರಸ್ಥಿತಿ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಸರ್ಕಾರವು ಈಗಾಗಲೇ 178 ತಾಲೂಕುಗಳು ಬರಪೀಡಿತವೆಂದು ಘೋಷಣೆ ಮಾಡಿದೆ, ಆದರೇ ಸಮಯ ಮೀರಿದರೇ ಇನ್ನೂ 50ಕ್ಕೂ ತಾಲೂಕುಗಳು ಸೇರಿಸಬೇಕಾಗುತ್ತದೆ, ಸುಮಾರು 40 ಲಕ್ಷ ಹೆಕ್ಟರ್ ನಷ್ಟು ಬೆಳೆ ಹಾಳಾಗಿದೆ. ಇದಕ್ಕೆ 1852 ಲಕ್ಷ ಕೋಟಿ ರೂ. ಪರಿಹಾರ ನೀಡಬೇಕಿದೆ, ಕಾರಣ ಕೂಡಲೇ ಕೇಂದ್ರ ತನ್ನ ಪಾಲಿನ ಹಣ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಬೇಕೆಂದು ಶಾಸಕರು ಒತ್ತಾಯಿಸಿದರು.

ರಾಜ್ಯದ ಬರ ಪರಸ್ಥಿತಿ ಬಗ್ಗೆ ವಿವರಿಸಲು ಸರ್ವ ಪಕ್ಷಗಳ ನಿಯೋಗ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು, ಅಲ್ಲಿ ಇಲ್ಲಿನ ವಾಸ್ತವ್ಯ ಪರಿಸ್ಥರಿ ವಿವರಿಸಬೇಕೆಂದರು.
2023ರ ಬಾಕಿ ಇರುವ ವಿಮೆ ಹಣವೂ ಕೂಡಲೇ ಬಿಡುಗಡೆ ಮಾಡಬೇಕೆಂದರು.

ಬರಗಾಲ ಘೋಷಿಸಲು ಕೇಂದ್ರ ಸರ್ಕಾರದ ಎನ್ ಡಿಆರ್ ಎಫ್ ನಿಯಮಗಳು ಸಡಿಲು ಮಾಡಿ ರೈತರಿಗೆ ತುರ್ತು ಅಗತ್ಯ ನೆರವು ನೀಡಬೇಕೆಂದು ತುನ್ನೂರ ಆಗ್ರಹಿಸಿದರು.
ಕೇಂದ್ರ ತಂಡ ಪರಿಶೀಲಿನೆ ಹೋದಾಗ ಅಲ್ಲಿ ವಾಸ್ತವ್ಯ ಸ್ಥಿತಿ ಅಧ್ಯಯನ ಮಾಡಿ ಪರಿಹಾರ ನೀಡಬೇಕು.ಇದರಲ್ಲಿ ರೈತರಿಗೆ ಅನ್ಯಾಯವಾಗಬಾರದೆಂದರು.

ಕುಡಿಯುವ ನೀರಿನ ಸೌಲಭ್ಯಗಳಿಗಾಗಿ ರಾಜ್ಯ ಸರ್ಕಾರವು ಎಲ್ಲ ಕ್ಷೇತ್ರಗಳಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ. ಆ ಹಣದ ಜತೆಗೆ ಹೆಚ್ಚಿನ ಹಣ ಕೊಡಬೇಕು. ನಗರಸಭೆಗಳಲ್ಲಿ ಅನುದಾನ ಕೊರತೆ ಇದೆ, ಕಾರಣ ಬೋರವೆಲ್ ಕೊರೆಯಿಸಲು ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ ಶಾಸಕರು, ರೈತರಿಗೆ,ಮಹಿಳೆಯರಿಗೆ ಹೈನುಗಾರಿಕೆ ಮಾಡಲು ಕೂಡಾ ಅನುದಾನ ನೀಡಬೇಕೆಂದರು.

ಪ್ರತಿಪಕ್ಷದ ಆರೋಪಕ್ಕೆ ಚಾಟಿ ಬೀಸಿದ ಶಾಸಕ ತುನ್ನೂರ ಅವರು, 2014ರಲ್ಲಿ ಶೂಟ್ ಬೂಟ್ ಹಾಕಿಕೊಂಡವರೇ ಜೀರೋ ಅಕೌಂಟ್ ಮಾಡಿಸಿ,ಅದಕ್ಕೆ ಪ್ರತಿ ಅಕೌಂಟಿಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಅವರಂತೆಯೇ ನಮ್ಮ ಪಕ್ಷ ಮತ್ತು ಸರ್ಕಾರ ಸುಳ್ಳು ಭರವಸೆ ನೀಡಿಲ್ಲ ಎಂದು ಶಾಸಕ ತುನ್ನೂರ ಜರಿದರು.

Leave a Reply

Your email address will not be published. Required fields are marked *

↑
Suddi Belaku