by
Category: ಯಾದಗಿರಿ ಸುದ್ದಿ
News Acritical

ಆರ್ಥಿಕ ಸ್ವಾವಲಂಬನೆಗೆ ಸಹಕಾರವೇ ಮೂಲ ಮಂತ್ರ : ಶರಣಯ್ಯ ಸ್ವಾಮಿ ನೀಲಗಿರಿಮಠ
ಸುದ್ದಿ ಬೆಳಕು ವಾರ್ತೆ ಸುರಪುರ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿ., ಯಾದಗಿರಿ ಹಾಗೂ ಯಾದಗಿರಿ ಸಹಕಾರ ಇಲಾಖೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪತ್ತಿನ ಸಹಕಾರ ಸಂಘ ನಿ, ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಆಡಳಿತ ಮಂಡಳಿ ನಿರ್ದೇಶಕರಿಗಾಗಿ ‘ಕ್ಲಸ್ಟರ್ ತರಬೇತಿ ಕಾರ್ಯಕ್ರಮ’ವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಶರಣಯ್ಯ ಸ್ವಾಮಿ ನೀಲಗಿರಿಮಠ, “ಪತ್ತಿನ ಸಹಕಾರ…
by

ಸಮಾಜದ ಏಳಿಗೆಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ: ರಾಚಣ್ಣಗೌಡ ಮುದ್ನಾಳ
ಸುದ್ದಿ ಬೆಳಕು ವಾರ್ತೆ ಯಾದಗಿರಿ: ಒಗ್ಗಟ್ಟಿನಲ್ಲಿ ಬಲವಿದೆ. ಸಮಾಜದ ವಿಷಯ ಬಂದಾಗ ಎಲ್ಲರೂ ರಾಜಕೀಯ, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಂದಾಗಿ ಶ್ರಮಿಸೋಣ ಎಂದು ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಉದ್ಯಮಿ ರಾಚಣ್ಣಗೌಡ ಮುದ್ನಾಳ ಹೇಳಿದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಯುವ ಘಟಕ, ತಾಲೂಕು ಘಟಕ, ತಾಲೂಕು ಯುವ ಘಟಕ ಹಾಗೂ ವೀರಶೈವ ಸಮಾಜದ ಸಂಯುಕ್ತಾಶ್ರಯದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ನೂತನ ಪದಾಧಿಕಾರಿಗಳ ಅಭಿನಂದನಾ…
by

ವೀರಶೈವ ಮಹಾಸಭೆಗೆ ಮಲ್ಲಿಕಾರ್ಜುನ ಅರುಣಿ ನೇಮಕ – ಜೆಡಿಎಸ್ ವತಿಯಿಂದ ಸನ್ಮಾನ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಗುರುಮಠಕಲ್ ತಾಲ್ಲೂಕಿನ ಕ್ರಿಯಾಶೀಲ ಯುವ ನಾಯಕ, ಸಂಘಟನಾ ಚತುರನಾದ ಮಲ್ಲಿಕಾರ್ಜುನ ಅರುಣಿ ಅವರಿಗೆ ವೀರಶೈವ ಲಿಂಗಾಯತ ಮಹಾಸಭೆಯ ಯುವ ಘಟಕದ ರಾಷ್ಟಿçÃಯ ಪದಾಧಿಕಾರಿಗಳಲ್ಲಿ ಸ್ಥಾನ ದೊರೆತಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಶ್ಚಂದ್ರ ಕಟಕಟಿ ಅಬಿಪ್ರಾಯಪಟ್ಟರು. ರವಿವಾರ ಇಲ್ಲಿನ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರ ಜನಸಂಪರ್ಕ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದರು. ರಾಜಕೀಯದ ಜೊತೆ ಜೊತೆಯಲ್ಲಿ ಸಮಾಜದ…
by

ಸ್ವಚ್ಛ ಭಾರತ–ಸ್ವಸ್ಥ ಭಾರತ ಘೋಷಣೆಯಡಿ ಎನ್‌ಎಸ್‌ಎಸ್ ವಿಶೇಷ ಶ್ರಮದಾನ
ಸುದ್ದಿ ಬೆಳಕು ವಾರ್ತೆ ರಾಯಚೂರು : ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕವು ದತ್ತು ಗ್ರಾಮ ಮಟಮಾರಿಯಲ್ಲಿ ಆಯೋಜಿಸಿರುವ 2025–26ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ “ಸ್ವಚ್ಛ ಭಾರತ–ಸ್ವಸ್ಥ ಭಾರತ” ಘೋಷಣೆಯಡಿ ವಿಶೇಷ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿತು. “ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಶಿಬಿರದ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಶಿಬಿರದಲ್ಲಿ ಸ್ವಯಂಸೇವಕಿಯರು ಗ್ರಾಮದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.…
by

100 ದಿನಗಳ ಬಳಿಕ ಯಾದಗಿರಿಯಲ್ಲಿ ಗುಡುಗು-ಸಿಡಿಲಿನ ಮಳೆ – ಜನರಿಗೆ ತಂಪಿನ ನೆಮ್ಮದಿ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಬರೋಬ್ಬರಿ 100 ದಿನಗಳ ನಂತರ ಗಿರಿಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು, ಸಂಜೆಯಾಗುತ್ತಿದ್ದಂತೆ ಗಾಳಿ, ಗುಡುಗು ಮತ್ತು ಸಿಡಿಲಿನ ಅರ್ಭಟದ ನಡುವೆ ಧಾರಾಕಾರ ಮಳೆ ಸುರಿಯಿತು. ಮೂರು ತಿಂಗಳುಗಳಿಂದ ಕೆಂಡದಂತಿದ್ದ ಜಿಲ್ಲೆಯ ನೆಲ ಕೆಲಹೊತ್ತು ತಂಪು ಕಂಡು ಜನರು ನಿಟ್ಟುಸಿರು ಬಿಟ್ಟರು. ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದ್ದು, ಸಂಜೆ 4.30ರ ವೇಳೆಗೆ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯಿತು. ಶಹಾಪುರದಲ್ಲಿ…
by

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ: ಶರಣಪ್ಪ ಮಾನೇಗಾರ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಬಡತನ ಎನ್ನುವುದು ಸಾಧನೆಗೆ ಅಡ್ಡಿಯಾಗಬಾರದು ಯಾದಗಿರಿಯನ್ನು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಲು ಶಿಕ್ಷಣವೊಂದೇ ಪ್ರಬಲ ಅಸ್ತ್ರ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಯರಗೋಳ ಅವರು ಅಭಿಪ್ರಾಯಪಟ್ಟರು. ಯಾದಗಿರಿ ನಗರದ ಕೊಲ್ಲೂರು ಮಲ್ಲಪ್ಪ ಮೆಮೋರಿಯಲ್ ಕಾಲೇಜು ಮತ್ತು ಗಂಗೋತ್ರಿ ಕೋಚಿಂಗ್ ಸೆಂಟರ್‌ಗೆ ಭೇಟಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ನೂರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಹಿಂದುಳುದಿರುವಿಕೆಗೆ ಕಾರಣ ಮತ್ತು ಪರಿಹಾರ…
by

ಮೇ 10ರಂದು ಯಾದಗಿರಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಸುದ್ದಿ ಬೆಳಕು ವಾರ್ತೆ ಯಾದಗಿರಿ: ಮಹಾಸಾಧ್ವಿ ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಇದೇ ಮೇ 10 ಭಾನುವಾರ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ರೆಡ್ಡಿ ಸಮಾಜ ಅಧ್ಯಕ್ಷ ರಾಮರೆಡ್ಡಿಗೌಡ ತಂಗಡಗಿ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಜಯಂತಿ ಆಯೋಜಿಸಿ, ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಲಾಗುವುದು ಅದಕ್ಕೂ ಪೂರ್ವದಲ್ಲಿ ಬೆಳಿಗ್ಗೆ ಬಸವೇಶ್ವರ…
by

ಸಾರ್ವಜನಿಕರಿಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ವಿತರಿಸಿ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸೂಚನೆ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಸಾರ್ವಜನಿಕರಿಗೆ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ಸಮರ್ಪಕವಾಗಿ ಹಾಗೂ ನಿಗದಿತ ದರದಲ್ಲಿ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಗ್ಯಾಸ್ ಏಜೆನ್ಸಿದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ಯಾಸ್ ಏಜೆನ್ಸಿದಾರರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು, ಹೆಚ್ಚುವರಿ ದರ ವಸೂಲಿ ಮಾಡುವುದು ಅಥವಾ ಕೃತಕ ಅಭಾವ ಸೃಷ್ಟಿಸುವುದು ಕಂಡುಬಂದರೆ ಅಗತ್ಯ ವಸ್ತುಗಳ ಕಾಯ್ದೆ-1955 ಹಾಗೂ ಪೆಟ್ರೋಲಿಯಂ ವಸ್ತುಗಳ ಸಂಗ್ರಹ ಮತ್ತು…
by

ಯಾದಗಿರಿ ನಗರದಲ್ಲಿ ಎರಡು ದಿನ ನೀರು ಸರಬರಾಜು ಸ್ಥಗಿತ: ಸಹಕರಿಸಲು ಮನವಿ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ನಗರದ ನೀರು ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮೇ 6 ಮತ್ತು 7ರಂದು ನಗರಾದ್ಯಂತ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪೌರಾಯುಕ್ತರಾದ ಉಮೇಶ ಚವ್ಹಾಣ ತಿಳಿಸಿದ್ದಾರೆ. ನೀರು ಶುದ್ಧೀಕರಣ ಘಟಕದಲ್ಲಿರುವ ಮೋಟಾರ್‌ನ ‘ಫುಟ್‌ಬಾಲ್’ (Foot valve) ದುರಸ್ತಿಯಲ್ಲಿದ್ದು, ಅದನ್ನು ಸರಿಪಡಿಸುವುದು ಅತ್ಯಗತ್ಯವಾಗಿದೆ. ಈ ತುರ್ತು ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ದಿನಾಂಕ 06-05-2026 (ಬುಧವಾರ), ದಿನಾಂಕ: 07-05-2026 (ಗುರುವಾರ) ದುರಸ್ತಿ ಕಾರ್ಯದ ಅವಧಿಯಲ್ಲಿ ನೀರಿನ ಲಭ್ಯತೆ…
by
- ಅಕ್ಟೋಬರ್ 3ರಿಂದ ಗುರುಮಠಕಲ್–ಮುಂಬೈ ಬಸ್ ಸೇವೆ ಪುನರಾರಂಭ

- ಯಾದಗಿರಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ: ಹಿರಿಯರ ಪಾಲನೆ ಪ್ರತಿಯೊಬ್ಬರ ಕರ್ತವ್ಯ

- ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಮಿಕ ಸಾವು: ಮರಣೋತ್ತರ ಪರೀಕ್ಷೆಗೆ ಆಗ್ರಹ

- ವಿಧಾನಸೌಧದ ಮೆಟ್ಟಿಲುಗಳಲ್ಲಿ ಉರ್ದು ಹಬ್ಬ: ಟಿ.ಎನ್. ಭೀಮುನಾಯಕ ವಿರೋಧ

- ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಆರೋಪ: ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ
















