ವೀರಶೈವ ಮಹಾಸಭೆಗೆ ಮಲ್ಲಿಕಾರ್ಜುನ ಅರುಣಿ ನೇಮಕ – ಜೆಡಿಎಸ್ ವತಿಯಿಂದ ಸನ್ಮಾನ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಗುರುಮಠಕಲ್ ತಾಲ್ಲೂಕಿನ ಕ್ರಿಯಾಶೀಲ ಯುವ ನಾಯಕ, ಸಂಘಟನಾ ಚತುರನಾದ ಮಲ್ಲಿಕಾರ್ಜುನ ಅರುಣಿ ಅವರಿಗೆ ವೀರಶೈವ ಲಿಂಗಾಯತ ಮಹಾಸಭೆಯ ಯುವ ಘಟಕದ ರಾಷ್ಟಿçÃಯ ಪದಾಧಿಕಾರಿಗಳಲ್ಲಿ ಸ್ಥಾನ ದೊರೆತಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಶ್ಚಂದ್ರ ಕಟಕಟಿ ಅಬಿಪ್ರಾಯಪಟ್ಟರು.
ರವಿವಾರ ಇಲ್ಲಿನ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರ ಜನಸಂಪರ್ಕ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದರು.
ರಾಜಕೀಯದ ಜೊತೆ ಜೊತೆಯಲ್ಲಿ ಸಮಾಜದ ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಅರುಣಿ ಇವರಿಗೆ ಮನೆತನದ ಹಿನ್ನೆಲೆಯಲ್ಲಿಯೇ ಸೇವೆ ಹಾಗೂ ಗುರು ಹಿರಿಯರ ಸಮಾಜದ ಸೇವೆಯ ಗುಣ ರಕ್ತಗತವಾಗಿ ಬಂದಿರುವುದರಿAದ ಇವರಿಗೆ ದೊಡ್ಡ ಸ್ಥಾನ ಮಾನ ಲಭಿಸಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಿ ಉನ್ನತ ಸ್ಥಾನ ಮಾನಗಳು ಪಡೆಯುವಂತಾಗಲಿ ಎಂದು ಆಶಿಸುವುದಾಗಿ ಹೇಳಿದರು.
ಇನ್ನೋರ್ವ ಮುಖಂಡ ಜೆಡಿಎಸ್ ಜಿಲ್ಲಾ ವಕ್ತ್ತಾರ ಮಲ್ಲಣ್ಣಗೌಡ ಹಳಿಮನಿ ಕೌಳೂರ್ ಮಾತನಾಡಿ ಅರುಣಿ ಅವರು ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವನೆ ರೂಢಿಸಿಕೊಂಡಿದ್ದು ಸೇವೆಗೆ ತಕ್ಕಂತೆ ದೊಡ್ಡ ಸ್ಥಾನ ಮಾನ ಲಭಿಸಿದೆ ಇನ್ನು ಹೆಚ್ಚು ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ದೊಡ್ಡಣ್ಣಗೌಡ ಆರೀಕೆರಿ, ನರಸಿಂಹರಡ್ಡಿ ಚಿಂತಕುಟ, ಮಲ್ಲಣ್ಣಗೌಡ ಹೊಸಳ್ಳಿ, ಬಾಬುಗೌಡ ಸೌರಾಷ್ಟ್ರಳ್ಳಿ, ಆನಂದ್ ವಡ್ವಾಟ್, ಭೀಮಲಿಂಗ ಕೋಳಿ, ನಾಗಾಲಿಂಗಪ್ಪ ಬೊಯ್, ಮರೆಪ್ಪ ಗುಡಗುಡಿ, ಯಲ್ಲಪ್ಪ ಬೂತ, ಯಲ್ಲಾಲಿಂಗ ಚಾಮನಳ್ಳಿ, ರಾಜು ಉಪ್ಪಿನ್, ನಿರಂಜನರೆಡ್ಡಿ, ಮೌನೇಶ್ ಪಾಟೀಲ್, ಬಂದೇಶ್ ಮಾಡ್ವಾರ್, ಅಶೋಕೆರೆಡ್ಡಿ ಹೊನಿಗೇರ, ಸಿದ್ದುರೆಡ್ಡಿ ಆರೀಕೆರ, ಶಂಕರೆಪ್ಪಗೌಡ ಹೊರುಂಚ, ಶಿವು ಚವಾಣ್ ಇನ್ನಿತರರು ಇದ್ದರು.

You Might Also Like

Leave a Reply

Your email address will not be published. Required fields are marked *

Suddi Belaku