Tag: ಯಾದಗಿರಿ ಸುದ್ದಿ

  • ಬೆಂಗಳೂರು–ಮುಂಬೈ ವಂದೇ ಭಾರತ್ ರೈಲು ಶೀಘ್ರ ಆರಂಭಿಸಿ: ಭೀಮನಾಯಕ್ ಆಗ್ರಹ

    ಬೆಂಗಳೂರು–ಮುಂಬೈ ವಂದೇ ಭಾರತ್ ರೈಲು ಶೀಘ್ರ ಆರಂಭಿಸಿ: ಭೀಮನಾಯಕ್ ಆಗ್ರಹ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 18 :   ಬೆಂಗಳೂರು–ಮುಂಬೈ ವಂದೇ ಭಾರತ್ ಶಯನಯಾತ್ರೆ (ಸ್ಲೀಪರ್) ರೈಲು ಆರಂಭದಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಸೇವೆ ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮನಾಯಕ್ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸುವುದಾಗಿ ಹೇಳಲಾಗಿದ್ದು, ಯಾದಗಿರಿ–ಬೆಂಗಳೂರು ನಡುವೆ ಸುಮಾರು ಐದು ಅರ್ಧ ಗಂಟೆ ಹಾಗೂ ಯಾದಗಿರಿ–ಮುಂಬೈ ನಡುವೆ ಸುಮಾರು…

  • ನಗರಾಭಿವೃದ್ಧಿಗೆ ಕೋಟ್ಯಂತರ ಅನುದಾನ – ಶಾಸಕ ತುನ್ನೂರ ಮಾಹಿತಿ

    ನಗರಾಭಿವೃದ್ಧಿಗೆ ಕೋಟ್ಯಂತರ ಅನುದಾನ – ಶಾಸಕ ತುನ್ನೂರ ಮಾಹಿತಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 18 : ಜಿಲ್ಲಾ ಕೇಂದ್ರವಾಗಿ 15 ವರ್ಷಗಳು ಕಳೆದಿರುವ ಯಾದಗಿರಿ ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದ್ದಾರೆ. ನಗರದ ತಹಸಿಲ್ದಾರ ಕಚೇರಿ ಮುಂಭಾಗದ ವಾರ್ಡ್ ಸಂಖ್ಯೆ 26ರಲ್ಲಿ ನಗರಸಭೆಯ 2023-24ನೇ ಸಾಲಿನ ಎಸ್‌ಬಿಎಂ 2.0 (ನಗರ) ಯೋಜನೆಯಡಿ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು,…

  • ವಿಷಪೂರಿತ ಅನಿಲದಿಂದ ಸಂಕಷ್ಟ: ಕೈಗಾರಿಕೆ ವಿರುದ್ಧ ಜನರ ಆಕ್ರೋಶ

    ವಿಷಪೂರಿತ ಅನಿಲದಿಂದ ಸಂಕಷ್ಟ: ಕೈಗಾರಿಕೆ ವಿರುದ್ಧ ಜನರ ಆಕ್ರೋಶ

    ಸುದ್ದಿ ಬೆಳಕು ವಾರ್ತೆ ಸೈದಾಪುರ, ಏಪ್ರಿಲ್ 17 : ಕಡೇಚೂರು–ಬಾಡಿಯಾಳ ಕೈಗಾರಿಕಾ ವಲಯದಲ್ಲಿನ ರಾಸಾಯನಿಕ ಕಂಪನಿಗಳಿಂದ ಹೊರಬರುತ್ತಿರುವ ವಿಷಪೂರಿತ ಅನಿಲ ಮತ್ತು ತ್ಯಾಜ್ಯಗಳಿಂದ ಸೈದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ದಿನೇ ದಿನೇ ಹೆಚ್ಚುತ್ತಿರುವ ದುರ್ವಾಸನೆ ಹಾಗೂ ವಾಯು ಮಾಲಿನ್ಯದಿಂದ ಜನರಲ್ಲಿ ಆತಂಕ ಹೆಚ್ಚುತ್ತಿದ್ದು, ಈ ಹಿನ್ನೆಲೆ ಸ್ಥಳೀಯರು ಮತ್ತು ಸಾಮಾಜಿಕ ಹೋರಾಟಗಾರರು ಸಂಘಟಿತವಾಗಿ ಜನಜಾಗೃತಿ ಅಭಿಯಾನ ಆರಂಭಿಸಲು ಮುಂದಾಗಿದ್ದಾರೆ. ಪಟ್ಟಣದ ಜಿ.ಆರ್. ಪಾರ್ಕ್‌ನಲ್ಲಿ ಗುರುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ‘ಕೈಗಾರಿಕಾ ಹಟವೋ…

  • ಹತ್ತಿಕುಣಿ ಕಾಡಾ ನಾಲಾ ಆಧುನೀಕರಣಕ್ಕೆ ₹72 ಕೋಟಿ ಅನುಮೋದನೆ: ರೈತರಿಗೆ ಹರ್ಷ

    ಹತ್ತಿಕುಣಿ ಕಾಡಾ ನಾಲಾ ಆಧುನೀಕರಣಕ್ಕೆ ₹72 ಕೋಟಿ ಅನುಮೋದನೆ: ರೈತರಿಗೆ ಹರ್ಷ

    ಸುದ್ದಿ ಬೆಳಕು ವಾರ್ತೆ ಗುರುಮಠಕಲ್. ಏಪ್ರಿಲ್ 17 : ಕ್ಷೇತ್ರದ ರೈತರ ದಶಕಗಳ ಕನಸಾಗಿದ್ದ ಹತ್ತಿಕುಣಿ ಕಾಡಾ ನಾಲಾ ಆಧುನೀಕರಣ ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದ್ದು, ರಾಜ್ಯ ಸಚಿವ ಸಂಪುಟವು ₹72 ಕೋಟಿ ಅನುದಾನಕ್ಕೆ ಅಧಿಕೃತ ಅನುಮೋದನೆ ನೀಡಿದೆ. ಈ ಯೋಜನೆಗಾಗಿ ಶಾಸಕ ಶರಣಗೌಡ ಕಂದಕೂರ ಕಳೆದ ಮೂರು ತಿಂಗಳಿನಿಂದ ಸರ್ಕಾರವನ್ನು ಸತತವಾಗಿ ಮನವಿ ಮಾಡುತ್ತಿದ್ದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಉಪಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಗಮನ ಸೆಳೆಯುವ ಮೂಲಕ ಯೋಜನೆಯ ತುರ್ತು ಅಗತ್ಯವನ್ನು ವಿವರಿಸಿದ್ದರು. ಇದರ…

  • ಯಾದಗಿರಿಯಲ್ಲಿ ಪಿಯುಸಿ ಸಾಧಕರಿಗೆ ಸನ್ಮಾನ | ಓದಿನ ಮಹತ್ವದ ಬಗ್ಗೆ ನಾಸೀರ್ ಅಹ್ಮದ್

    ಯಾದಗಿರಿಯಲ್ಲಿ ಪಿಯುಸಿ ಸಾಧಕರಿಗೆ ಸನ್ಮಾನ | ಓದಿನ ಮಹತ್ವದ ಬಗ್ಗೆ ನಾಸೀರ್ ಅಹ್ಮದ್

    ​ ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 17 : “ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿ ತಲುಪಲು ಮತ್ತು ಉನ್ನತ ಶಿಕ್ಷಣ ಪಡೆಯಲು ಕಠಿಣ ಪರಿಶ್ರಮ ಹಾಗೂ ಓದು ಮಾತ್ರ ಏಕೈಕ ಮಾರ್ಗವಾಗಿದೆ” ಎಂದು ಮಹಾತ್ಮ ಗಾಂಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾಸೀರ್ ಅಹ್ಮದ್ ಅವರು ಅಭಿಪ್ರಾಯಪಟ್ಟರು. ​ನಗರದ ನಾಜೀರ್ ಕಾಲೋನಿ ಸ್ಟೇಷನ್ ಏರಿಯಾದಲ್ಲಿರುವ ಮಹಾತ್ಮ ಗಾಂಧಿ ಕಲಾ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ನಡೆದ ಪಿಯುಸಿ…

  • ಬಿಸಿಲಿಗೆ ತತ್ತರಿಸಿದ ಯಾದಗಿರಿ – ಟ್ಯಾಂಕರ್ ಮೂಲಕ ನೀರು ಸಿಂಪಡಣೆ ಕ್ರಮ

    ಬಿಸಿಲಿಗೆ ತತ್ತರಿಸಿದ ಯಾದಗಿರಿ – ಟ್ಯಾಂಕರ್ ಮೂಲಕ ನೀರು ಸಿಂಪಡಣೆ ಕ್ರಮ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 17 : ಬಿಸಿಲಿನ ತಾಪಮಾನ ದಿನೇ,ದಿನೇ ಹೆಚ್ಚಾಗುತ್ತಿದ್ದು, ಇಡಿ ನಗರ ಕಾಯ್ದು ಕೆಂಡವಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಮುಖ್ಯ ರಸ್ತೆಗಳಲ್ಲಿ ನೀರು ಸಿಂಪಡಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭೆಯಿಂದ ಸುಮಾರು ಐದು ಲಕ್ಷ ರೂ.ವೆಚ್ಚದ ಇಲ್ಲಿನ ಸುಭಾಷ ಸರ್ಕಲ್ ಬಳಿ ಎರಡು ಕಡೆ ಹಾಕಲಾದ ಹಸಿರು ನೆರಳಿನ ಪರದೆ ಸ್ಥಳವನ್ನು ಶುಕ್ರವಾರ ಪರಿಶೀಲಿಸಿದ ಶಾಸಕರು, ಶಾಸ್ತ್ರಿ ಚೌಕ ಬಳಿ ಇರುವ ಎಲ್ ಇಡಿ…

  • ಯಾದಗಿರಿ ಅಪಘಾತ: ಒಂದೇ ಕುಟುಂಬದ 7 ಮಂದಿ ಸಜೀವ ದಹನ

    ಯಾದಗಿರಿ ಅಪಘಾತ: ಒಂದೇ ಕುಟುಂಬದ 7 ಮಂದಿ ಸಜೀವ ದಹನ

      ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನಗೊಂಡು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಸಿರವಾರ ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣ ನಾಯಕ, ಅವರ ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕುಟುಂಬವು ಸುರಪುರದಲ್ಲಿರುವ ಮನೆ ದೇವರ ದರ್ಶನ ಪಡೆದು ವಾಪಸ್ಸು ಸಿರವಾರ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಶಾಂತಪುರ ಕ್ರಾಸ್ ಬಳಿ…

  • ಯಾದಗಿರಿ ಬಳಿ ಭೀಕರ ಅಪಘಾತ: ಕಾರು–ಬಸ್ ಡಿಕ್ಕಿ, 7 ಮಂದಿ ಸಜೀವ ದಹನ
    ,

    ಯಾದಗಿರಿ ಬಳಿ ಭೀಕರ ಅಪಘಾತ: ಕಾರು–ಬಸ್ ಡಿಕ್ಕಿ, 7 ಮಂದಿ ಸಜೀವ ದಹನ

    ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಪ್ರಯಾಣಿಕರು ಸಜೀವ ದಹನಗೊಂಡು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೆಂಗಳೂರುದಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಸಾಗುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಯಿಂದ ಎರಡೂ ವಾಹನಗಳಿಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಏಳು ಮಂದಿ ಪ್ರಯಾಣಿಕರು ಸಜೀವ ದಹನಗೊಂಡು…

  • ಛಲವಾದಿ ವಿರುದ್ಧ ಆರೋಪ ವಿವಾದ ತೀವ್ರ – ಎಂಎಲ್‌ಸಿ ರಮೇಶ್ ವಿರುದ್ಧ ಕ್ರಮ ಎಚ್ಚರಿಕೆ

    ಛಲವಾದಿ ವಿರುದ್ಧ ಆರೋಪ ವಿವಾದ ತೀವ್ರ – ಎಂಎಲ್‌ಸಿ ರಮೇಶ್ ವಿರುದ್ಧ ಕ್ರಮ ಎಚ್ಚರಿಕೆ

    ಯಾದಗಿರಿ : ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಇಲ್ಲ, ಸಲ್ಲದ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ನ ಎಂಎಲ್ ಸಿ ರಮೇಶ ಅವರ‌ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಕುರಕುಂದಾ ಎಚ್ಚರಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರತಿಪಕ್ಷದ ನಾಯಕನಾಗಿ ನಾರಾಯಣಸ್ವಾಮಿ ಅವರು ಸಮರ್ಥವಾಗಿ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದೇ ಕಾರಣಕ್ಕಾಗಿ ಇಂತಹವರನ್ನು ಮುಂದೆ ಮಾಡಿ ಇಲ್ಲದ ಆರೋಪಗಳನ್ನು ಮಾಡಿಸುವತ್ತ ಕಾಂಗ್ರೆಸ್…

  • ಮನೆ ಪಟ್ಟಿ ಮತ್ತು ಮನೆ ಗಣತಿ ಆರಂಭ: ಸರಿಯಾದ ಉತ್ತರ ನೀಡಿ ಸಹಕರಿಸಲು ಮನವಿ

    ಮನೆ ಪಟ್ಟಿ ಮತ್ತು ಮನೆ ಗಣತಿ ಆರಂಭ: ಸರಿಯಾದ ಉತ್ತರ ನೀಡಿ ಸಹಕರಿಸಲು ಮನವಿ

    ಯಾದಗಿರಿ : ಭಾರತ ಜನಗಣತಿ-2027ರ ಅಂಗವಾಗಿ ದಿನಾಂಕ: 01.04.2026 ರಿಂದ ದಿನಾಂಕ: 15.04.2026 ರವರೆಗೆ ಸ್ವಯಂ ಗಣತಿ (Self Enemuration: ಕಾರ್ಯವು ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 4405 ನಾಗರೀಕರು ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ. ಇದಲ್ಲದೆ, ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 274 ಟಿಎನ್‌ಆರ್ 2026 ದಿನಾಂಕ:31-3-2026 ರ ಮೇರೆಗೆ, ಕರ್ನಾಟಕ ರಾಜ್ಯದಲ್ಲಿ ಜನಗಣತಿ-2027 ರ 1-ನೇ ಹಂತ ಅಂದರೆ ಮನೆಗಳ ಪಟ್ಟಿ ಮತ್ತು…

Suddi Belaku