ಛಲವಾದಿ ವಿರುದ್ಧ ಆರೋಪ ವಿವಾದ ತೀವ್ರ – ಎಂಎಲ್‌ಸಿ ರಮೇಶ್ ವಿರುದ್ಧ ಕ್ರಮ ಎಚ್ಚರಿಕೆ

Posted by

ಯಾದಗಿರಿ : ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಇಲ್ಲ, ಸಲ್ಲದ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ನ ಎಂಎಲ್ ಸಿ ರಮೇಶ ಅವರ‌ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಕುರಕುಂದಾ ಎಚ್ಚರಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರತಿಪಕ್ಷದ ನಾಯಕನಾಗಿ ನಾರಾಯಣಸ್ವಾಮಿ ಅವರು ಸಮರ್ಥವಾಗಿ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದೇ ಕಾರಣಕ್ಕಾಗಿ ಇಂತಹವರನ್ನು ಮುಂದೆ ಮಾಡಿ ಇಲ್ಲದ ಆರೋಪಗಳನ್ನು ಮಾಡಿಸುವತ್ತ ಕಾಂಗ್ರೆಸ್ ಮುಂದಾಗಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯ ರಾಜಕಾರಣದ ಓರ್ವ ಹಿರಿಯ ನಾಯಕರು, ದಲಿತ ಮುಖಂಡರು ಆಗಿರುವ ಛಲವಾದಿ ಅವರನ್ನು ಬಿಜೆಪಿ ಸೂಕ್ತ ಸ್ಥಾನ,ಮಾನ ನೀಡಿದ್ದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಅವರು ನೇರ ನುಡಿಯ ನಿರ್ಭಯದ ವ್ಯಕ್ತಿಯಾಗಿದ್ದಾರೆ. ಇದ್ದುದ್ದನ್ನು ಇದ್ದಂತೆಯೇ ಹೇಳುತ್ತಾರೆ. ಆದರೆ ಇದು ಕಾಂಗ್ರೆಸ್ ನ ಕೆಲವರಿಗೆ ಸಹಿಸಿ ಕೊಳ್ಳಲು ಆಗುತ್ತಿಲ್ಲ. ಕಾರಣ ಅವರ ಬಗ್ಗೆ ಆಡಿದ ಮಾತುಗಳಿಗೆ ಎಂಎಲ್ ಸಿ ರಮೇಶ ಅವರು ಕೂಡಲೇ ಕ್ಷಮೆ ಕೇಳಬೇಕೆಂದ ಅವರು, ಈ ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku