ಮನೆ ಪಟ್ಟಿ ಮತ್ತು ಮನೆ ಗಣತಿ ಆರಂಭ: ಸರಿಯಾದ ಉತ್ತರ ನೀಡಿ ಸಹಕರಿಸಲು ಮನವಿ

Posted by

ಯಾದಗಿರಿ : ಭಾರತ ಜನಗಣತಿ-2027ರ ಅಂಗವಾಗಿ ದಿನಾಂಕ: 01.04.2026 ರಿಂದ ದಿನಾಂಕ: 15.04.2026 ರವರೆಗೆ ಸ್ವಯಂ ಗಣತಿ (Self Enemuration: ಕಾರ್ಯವು ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 4405 ನಾಗರೀಕರು ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ.

ಇದಲ್ಲದೆ, ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 274 ಟಿಎನ್‌ಆರ್ 2026 ದಿನಾಂಕ:31-3-2026 ರ ಮೇರೆಗೆ, ಕರ್ನಾಟಕ ರಾಜ್ಯದಲ್ಲಿ ಜನಗಣತಿ-2027 ರ 1-ನೇ ಹಂತ ಅಂದರೆ ಮನೆಗಳ ಪಟ್ಟಿ ಮತ್ತು ಮನೆ ಗಣತಿಯನ್ನು ದಿನಾಂಕ: 16.04.2026 ರಿಂದ ದಿನಾಂಕ: 15.05.2026 ರವರೆಗೆ 30 ದಿನಗಳ ಕಾಲ ನಡೆಸಲಾಗುವುದು.

ಗಣತಿದಾರರು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅವರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿ ಸಹಕರಿಸಲು ಹಾಗೂ ಜಿಲ್ಲೆಯಲ್ಲಿ ಭಾರತ ಜನಗಣತಿ-2027 ನೇದ್ದನ್ನು ಯಶಸ್ವಿಗೊಳಿಸಲು ಸಾರ್ವಜನಿಕರಲ್ಲಿ
ಜಿಲ್ಲಾಧಿಕಾರಿಗಳು ಹಾಗೂ ಪ್ರಧಾನ ಜನಗಣತಿ ಅಧಿಕಾರಿ, ಯಾದಗಿರಿ. ಅವರು ಕೋರಿದ್ದಾರೆ.

Leave a Reply

Your email address will not be published. Required fields are marked *

Suddi Belaku