
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 17 : ಬಿಸಿಲಿನ ತಾಪಮಾನ ದಿನೇ,ದಿನೇ ಹೆಚ್ಚಾಗುತ್ತಿದ್ದು, ಇಡಿ ನಗರ ಕಾಯ್ದು ಕೆಂಡವಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಮುಖ್ಯ ರಸ್ತೆಗಳಲ್ಲಿ ನೀರು ಸಿಂಪಡಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯಿಂದ ಸುಮಾರು ಐದು ಲಕ್ಷ ರೂ.ವೆಚ್ಚದ ಇಲ್ಲಿನ ಸುಭಾಷ ಸರ್ಕಲ್ ಬಳಿ ಎರಡು ಕಡೆ ಹಾಕಲಾದ ಹಸಿರು ನೆರಳಿನ ಪರದೆ ಸ್ಥಳವನ್ನು ಶುಕ್ರವಾರ ಪರಿಶೀಲಿಸಿದ ಶಾಸಕರು, ಶಾಸ್ತ್ರಿ ಚೌಕ ಬಳಿ ಇರುವ ಎಲ್ ಇಡಿ ಪರದೆ ಮೇಲೆ ಬೇಸಿಗೆ ಮುಗಿಯುವವರೆಗೂ ದಿನದ ತಾಪಮಾನ ಎಷ್ಟು ಎಂಬ ಬಗ್ಗೆ ಮಾಹಿತಿ ಹಾಕಿ ಎಂದು ಸ್ಥಳದಲ್ಲಿಯೇ ಇದ್ದ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷ್ಮಿಕಾಂತ ರೆಡ್ಡಿ ಅವರಿಗೆ ಹೇಳಿದರು. ನಗರದ ಮುಖ್ಯ ರಸ್ತೆಗಳಲ್ಲಿ
ಟ್ಯಾಂಕರ ಮೂಲಕ ನೀರು ಹಾಯಿಸುವ ಕುರಿತು ಕೂಡಲೇ ಒಂದು ನಿರ್ಧಾರ ತೆಗೆದುಕೊಂಡು ಜಾರಿ ಮಾಡಿ ಎಂದರು. ಶಾಸಕರ ಸೂಚಿಸಿರುವ ಕೆಲಸಗಲಳು ಕೂಡಲೇ ಕಾರ್ಯಗತ ಮಾಡಲಾಗುವುದೆಂದು
ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಲಕ್ಣ್ಮೀಕಾಂತರೆಡ್ಡಿ,
ನಗರಸಭೆ ಪೌರಾಯಕ್ತರು ಉಮೇಶ ಚವ್ಹಾಣ ಹೇಳಿದರು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಕಾಂಗ್ರೆಸ್ ಮುಖಂಡರಾದ ಸಾಬಣ್ಣ ಕೆಂಗೂರಿ, ಶರಣಗೌಡ ಬಲಕಲ್, ತಿಮ್ಮಪ್ಪ ನಾಯಕ, ನಗರಸಭೆ ಸಮುದಾಯ ಸಂಘಟನಾಧಿಕಾರಿ ಬೀಮಣ್ಣ ವೈದ್ಯ, ನಗರಸಭೆ ಸಿಬ್ಬಂದಿಗಳಾದ ನಾಗರಾಜ ಚಿಂತನಳ್ಳಿ, ಅಶೋಕ ಯಾದವ, ಅವ್ವಮ್ಮ, ಪ್ರೇಮಾ ಸೇರಿದಂತೆಯೇ ಇತರರಿದ್ದರು.










Leave a Reply