ಕಾಲುವೆ ಕೊನೆ ಭಾಗದ ರೈತರಿಗೆ ನೀರು ನೀಡಲು ಆಗ್ರಹ: ಮಾಗನೂರು ನೇತೃತ್ವದಲ್ಲಿ ಪ್ರತಿಭಟನೆ

Posted by

–

ಸುದ್ದಿ ಬೆಳಕು ವಾರ್ತೆ

ಶಹಾಪುರ : ವಾರಬಂದಿ ಮಾಡಿಕೊಂಡು ಐಸಿಸಿ ಸಭೆ ನಿರ್ಣಾಯದಂತೆ ನೆಪಕ್ಕೆ ಮಾತ್ರ ನೀರು ಹರಿಸಿಕೊಂಡು ಇಲ್ಲಿನ ಕೊನೆಯ ಭಾಗದ ರೈತರ ಹೊಲಗಳಿಗೆ ಇನ್ನೂ ನೀರು ಮುಟ್ಟದೆ ಇದ್ದರೂ ಕೆಬಿಜೆಎನ್,ಎಲ್, ಅಧಿಕಾರಿಗಳು ರಾತ್ರೊರಾತ್ರಿ ತೆಲಂಗಾಣಕ್ಕೆ ನೀರು ಹರಿಸಿದ್ದು ಖಂಡಿಸಿ ಅನುವಾರ, ಸೇರಿದಂತೆ ಹೈಯಾಳ ಭಾಗದ ರೈತರು ತಾಲುಕಿನ ಭೀ,ಗುಡಿ ಕೆ,ಬಿ,ಜೆ,ಎನ್,ಎಲ್, ಕೇಂದ್ರ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು, ಕುಡಿಯಲು ನೀರಿಗೆ ಬರ ಪರಸ್ಥಿತಿಯಲ್ಲಿ ಡ್ಯಾಂ ನೀರು ಹೊರ ರಾಜ್ಯಕ್ಕೆ ಬಿಡಲಾಗುತ್ತಿದೆ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಯಾದಗಿರಿ ಜಿಲ್ಲಾ ನಿಕಟ ಪೂರ್ವ ಬಿಜೆಪಿ ಅಧ್ಯಕ್ಷರಾದ ಚಂದ್ರಶೇಖರಗೌಡ ಮಾಗನೂರ ಆರೋಪಿಸಿದರು, ರೈತರ ಪ್ರತಿಭಟನೆ ನಡೆಯುತ್ತಿದ್ದರೂ ಸಂಭಂಧಪಟ್ಟ ಎಇಇ ಯವರು ನೀರು ಇಲ್ಲ ಯಾಕೆ ಬರಬೇಕು ಎಂದು ಪ್ರಶ್ನೆ ಮಾಡಿದ್ದು ಉದ್ದಟ್ಟತನ ಕರ್ತವ್ಯವಾಗಿದೆ, ಎಂದ ಅವರು, ಮುಂದಿನ ದಿನಮಾನಗಳಲ್ಲಿ ಜನ ಜಾನುವಾರು ಸೇರಿದಂತೆ ಮಾನವ ಸಂಕುಲಕ್ಕೂ ನೀರಿನ ಬರ ತಟ್ಟುವ ಮುನಸೂಚನೆ ಸರ್ಕಾರಕ್ಕೆ ಗೊತ್ತಿದ್ದರೂ ತೆಲಂಗಾಣ ರಾಜ್ಯಕ್ಕೆ ನೀರು ಬಿಡುವದು ಕಾಂಗ್ರೆಸ್ ಸರ್ಕಾರದ ರೈತರ ಮಾರಣ ಹೋಮಕ್ಕೆ ಮುಂದಾಗಿದ್ದಾರೆ, ಮುಂದಿನ ದಿನಗಳಲ್ಲಿ ಕೊನೆ ಭಾಗದ ರೈತರಿಗೆ ನೀರು ಬಿಡದಿದ್ದಲ್ಲಿ ಕಚೇರಿ ಮುತ್ತಿಗೆ ಹಾಕುತ್ತೇವೆ ಎಂದು ಮಾಗನೂರವರು ವಾಗ್ದಾನ ಮಾಡಿದರು, ಜೇವರ್ಗಿ ತಾಲುಕಿನ ಮಾಜಿ ಶಾಸಕರ ಸಹೋದರ ಬಸವರಾಜಗೌಡ ನರಬೋಳಿಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಸಮಯದಲ್ಲಿ ರೈತ ಚಾಂದ ಪಟೇಲ್ ಸೆರಿದಂತೆ ನೂರಾರು ಜನ ರೈತರು ಹಾಜರಿದ್ದರು, ಬೀ,ಗುಡಿ ಪಿಎಸ್,ಐ ದೇವಿಂದ್ರಡ್ಡಿಯವರು ಪೋಲಿಸ್ ಬಂದೋಬಸ್ತ ಮಾಡಿದ್ದರು.


ರೈತರ ಹಿತ ಕಾಪಾಡುವ ದೃಷ್ಟಿಯಿಂದ ಎಸ್,ಬಿ,ಸಿ, ಎಮ್,ಬಿಸಿ, ಕಾಲುವೆಗಳಿಗೆ ನೀರಿ ಗೇಟ್ ತೆರೆದು ನೀರು ಕೊಡಬೇಕು ಎಂದು ಪಟ್ಟು ಹಿಡಿದ ಕಾರಣ ಮುಖ್ಯ ಇಂಜಿನಿಯರ್ ರವರು ನಿರ್ಧೇಶನದಂತೆ ಕೊನೆಯ ಭಾಗದ ರೈತರಿಗೆ ನೀರು ಮುಂದಿನ ಅ,21ರವರೆಗೂ ಬಿಡಬೇಕು ಎಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದರು, ರೈತರು ತೆಲಂಗಾಣಕ್ಕೆ ಯಾವುದೆ ಕಾರಣಕ್ಕೂ ನೀರು ಬಿಡಬಾರದು ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ.
ಚಂದ್ರಶೇಖರಗೌಡ ಮಾಗನೂರು ನಿಕಟ ಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷರು ಯಾದಗಿರಿ.

Leave a Reply

Your email address will not be published. Required fields are marked *

↑
Suddi Belaku