Tag: Shahapur News

  • ಬರ ಪಟ್ಟಿಯಿಂದ ಯಾದಗಿರಿ, ಗುರುಮಠಕಲ್ ಕೈಬಿಟ್ಟಿದ್ದೇಕೆ? ಶರಣಗೌಡ ಕಂದಕೂರ ಕಿಡಿ

    ಬರ ಪಟ್ಟಿಯಿಂದ ಯಾದಗಿರಿ, ಗುರುಮಠಕಲ್ ಕೈಬಿಟ್ಟಿದ್ದೇಕೆ? ಶರಣಗೌಡ ಕಂದಕೂರ ಕಿಡಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ, ಬೆಳೆ ನಷ್ಟದ ನಡುವೆಯೂ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಶಾಸಕ ಶರಣಗೌಡ ಕಂದಕೂರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ನೀಡಿರುವ ವರದಿಗಳಲ್ಲಿಯೇ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳಲ್ಲಿ ಮಳೆ ಕೊರತೆ ಹೆಚ್ಚಿರುವುದಾಗಿ ಉಲ್ಲೇಖಿಸಲಾಗಿದೆ. ಆದರೂ ಕೇವಲ ಒಂದು…

  • ಯಾದಗಿರಿಯ 4 ಕ್ಷೇತ್ರಗಳನ್ನೂ ಬರಪೀಡಿತ ಎಂದು ಘೋಷಿಸಿ: ಭೀಮುನಾಯಕ ಎಚ್ಚರಿಕೆ

    ಯಾದಗಿರಿಯ 4 ಕ್ಷೇತ್ರಗಳನ್ನೂ ಬರಪೀಡಿತ ಎಂದು ಘೋಷಿಸಿ: ಭೀಮುನಾಯಕ ಎಚ್ಚರಿಕೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಜಿಲ್ಲೆಯ ಶಹಾಪುರ ಕ್ಷೇತ್ರ ವೊಂದನ್ನೇ ಬರ ಪೀಡಿತ ಎಂದು ಘೋಷಣೆ ಮಾಡಿದ ಸರ್ಕಾರ ಯಾದಗಿರಿ ಜಿಲ್ಲೆಯ ಇನ್ನುಳಿದ ಮೂರು ಕ್ಷೇತ್ರಗಳ ವ್ಯಾಪ್ತಿಯ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ, ಕೂಡಲೇ ಆಗಿರುವ ಅನ್ಯಾಯ ಸರಿಪಡಿಸಬೇಕು ಇಲ್ಲವಾದಲ್ಲಿ ಜಿಲ್ಲೆಗೆ ಭೇಟಿ ಕೊಡುವ ಸಚಿವರು, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ ಎನ್ ಭೀಮುನಾಯಕ ಗುಡುಗಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ನೆರೆಯ…

  • ಗೋಗಿ ಕಾಲುವೆಗೆ ಇಬ್ಬರು ಮಕ್ಕಳನ್ನು ಎಸೆದ ತಂದೆ ಬಂಧನ; ಸಾನ್ವಿ, ಸೃಜನ್ ಮೃತದೇಹ ಪತ್ತೆ

    ಗೋಗಿ ಕಾಲುವೆಗೆ ಇಬ್ಬರು ಮಕ್ಕಳನ್ನು ಎಸೆದ ತಂದೆ ಬಂಧನ; ಸಾನ್ವಿ, ಸೃಜನ್ ಮೃತದೇಹ ಪತ್ತೆ

    ಸುದ್ದಿ ಬೆಳಕು ವಾರ್ತೆ ಶಹಾಪುರ : ಹೆಂಡತಿಯ ಮೇಲಿನ ಅತಿಯಾದ ಕೋಪ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನಿಬ್ಬರು ಕಂದಮ್ಮಗಳನ್ನು ಕಾಲುವೆಯ ರಭಸದ ನೀರಿಗೆ ಎಸೆದು ಕೊಂದಿದ್ದ ಪಾಪಿ ತಂದೆ ಶಾಂತಪ್ಪ ಬಿರಾದಾರ್‌ನನ್ನು ಗೋಗಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ನೀರುಪಾಲಾಗಿದ್ದ ೯ ವರ್ಷದ ಸಾನ್ವಿ ಹಾಗೂ ೩ ವರ್ಷದ ಸೃಜನ್ ಮೃತದೇಹಗಳು ಬುಧವಾರ ಕಾಲುವೆಯಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ. ಮೂಲತಃ ತಾಲ್ಲೂಕಿನ ಕಕ್ಕಸಗೇರ ಗ್ರಾಮದ ನಿವಾಸಿಯಾದ ಶಾಂತಪ್ಪ,…

  • ಮಳೆಯ ಕೊರತೆ: ಗ್ರಾಮೀಣ ಕಾರ್ಮಿಕರು ವಲಸೆ ಹೋಗದೆ ವಿಬಿ-ಜಿರಾಮಜಿ ಯೋಜನೆಯಡಿ ಉದ್ಯೋಗ ಪಡೆಯಿರಿ

    ಮಳೆಯ ಕೊರತೆ: ಗ್ರಾಮೀಣ ಕಾರ್ಮಿಕರು ವಲಸೆ ಹೋಗದೆ ವಿಬಿ-ಜಿರಾಮಜಿ ಯೋಜನೆಯಡಿ ಉದ್ಯೋಗ ಪಡೆಯಿರಿ

    ಸುದ್ದಿ ಬೆಳಕು ವಾರ್ತೆ ಶಹಾಪುರ: ಮಳೆಯ ಕೊರತೆಯಿಂದ ಗ್ರಾಮೀಣ ಪ್ರದೇಶದ ಕೃಷಿ ಕೂಲಿ ಕಾರ್ಮಿಕರು ಕೆಲಸ ಸಿಗದೆ ಕುಟುಂಬ ನಿರ್ವಹಣೆಗಾಗಿ ದೂರದ ನಗರ-ಪಟ್ಟಣಗಳಿಗೆ ಕೆಲಸಕ್ಕಾಗಿ ವಲಸೆ ಹೊಗದೆ ನಿಮ್ಮೂರಲ್ಲೆ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ ಅಂಡ ಆಜೀವಿಕ್ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾಮ ಪಂಚಾಯಿತಿಯಿAದ ನೀಡುವ ಕೂಲಿ ಕೆಲಸ ಮಾಡಿ ಎಂದು ಶಹಾಪುರ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಬಸವರಾಜ ಶರಭೈ ಅವರು ಕೂಲಿಕಾರರಲ್ಲಿ ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಯಾದಗಿರಿ, ತಾಲೂಕ ಪಂಚಾಯಿತಿ ಶಹಾಪುರ,…

  • ಜನ ಕಲ್ಯಾಣ–ಲೋಕ ಕಲ್ಯಾಣಕ್ಕಾಗಿ ಶ್ರೀಗಳ ಪಾದಯಾತ್ರೆ: ವಿವಿಧ ರಾಜ್ಯಗಳ ಭಕ್ತರು ಭಾಗಿ

    ಜನ ಕಲ್ಯಾಣ–ಲೋಕ ಕಲ್ಯಾಣಕ್ಕಾಗಿ ಶ್ರೀಗಳ ಪಾದಯಾತ್ರೆ: ವಿವಿಧ ರಾಜ್ಯಗಳ ಭಕ್ತರು ಭಾಗಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅಬ್ಬೆತುಮಕೂರವರೆಗೆ ಪ್ರತಿವರ್ಷದ ಪದ್ದತಿಯಂತೆ ಪರಂಪರಾ ಪಾದಯಾತ್ರೆಯನ್ನು ಜನ ಕಲ್ಯಾಣ ಮತ್ತು ಲೋಕ ಕಲ್ಯಾಣಕ್ಕಾಗಿ ಕೈಗೊಳ್ಳಲಾಗುತ್ತಿದೆ ಎಂದು ಪೀಠಾಧಿಪತಿ ಡಾ ಗಂಗಾಧರ ಮಹಾಸ್ವಾಮಿಗಳು ನುಡಿದರು. ಸೋಮವಾರ ದಂದು ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿಸಿ ಪಾದಯಾತ್ರಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ವಿಶ್ವರಾಧ್ಯರು ಜನಿಸಿದ ಈ ಗಂವ್ಹಾರ ಅತ್ಯಂತ ಪವಿತ್ರವಾದ ನೆಲವಾಗಿದೆ. ಅವರು ಕಿರಿಯ…

  • ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶೆ ಸುಪ್ರಿಯಾ ನವಲೆ

    ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶೆ ಸುಪ್ರಿಯಾ ನವಲೆ

    ಸುದ್ದಿ ಬೆಳಕು ವಾರ್ತೆ ಶಹಾಪುರ: ಸಮಾಜದ ಅಮೂಲ್ಯ ಆಸ್ತಿಯಾಗಿರುವ ಹಿರಿಯ ನಾಗರಿಕರ ರಕ್ಷಣೆ ಮತ್ತು ಅವರ ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರೂ ಪ್ರಥಮ ರ‍್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕರ‍್ಯರ‍್ಶಿಗಳಾದ ಶ್ರೀಮತಿ ಸುಪ್ರಿಯಾ ನವಲೆ ಅವರು ಹೇಳಿದರು. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರ‍್ನಾಟಕ ರಾಜ್ಯ ಕಾನೂನು ಸೇವೆಗಳ…

  • ಮಳೆಯ ಕೊರತೆ; ಪ್ರತಿಯೊಬ್ಬ ರೈತರೂ ಬೆಳೆ ವಿಮೆ ಮಾಡಿಸಿ: ಸಚಿವರ ಸೂಚನೆ

    ಮಳೆಯ ಕೊರತೆ; ಪ್ರತಿಯೊಬ್ಬ ರೈತರೂ ಬೆಳೆ ವಿಮೆ ಮಾಡಿಸಿ: ಸಚಿವರ ಸೂಚನೆ

    ಸುದ್ದಿ ಬೆಳಕು ವಾರ್ತೆ ಶಹಾಪುರ: ಮಳೆಯ ಕೊರತೆಯಿಂದ ತಾಲೂಕಿನಾದ್ಯಂತ ಬೆಳೆಗಳು ಒಣಗುತ್ತಿದ್ದು, ಪ್ರತಿಯೊಬ್ಬ ರೈತರೂ ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು. ತಾಲೂಕಿನ ಮುಡಬೂಳ ಗ್ರಾಮದ ಹೊಲಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಳೆ ವಿಮೆ ನೋಂದಣಿಗೆ ಆಗಸ್ಟ್ 10 ಕೊನೆಯ ದಿನವಾಗಿರುವುದರಿಂದ ಪ್ರತಿ ಗ್ರಾಮದಲ್ಲೂ ಡಂಗುರ ಸಾರಿ ರೈತರಿಗೆ ಮಾಹಿತಿ ನೀಡುವಂತೆ ತಾಲೂಕು ಪಂಚಾಯಿತಿ…

  • ಶಹಾಪುರದಲ್ಲಿ ಕನಕದಾಸರ ಭಕ್ತಿತತ್ವ ಕುರಿತು ವಿಶೇಷ ಉಪನ್ಯಾಸ

    ಶಹಾಪುರದಲ್ಲಿ ಕನಕದಾಸರ ಭಕ್ತಿತತ್ವ ಕುರಿತು ವಿಶೇಷ ಉಪನ್ಯಾಸ

    ಸುದ್ದಿ ಬೆಳಕು ವಾರ್ತೆ ಶಹಾಪುರ: ಕನಕದಾಸರು ಕೇವಲ ಭಕ್ತ ಕವಿ ಮಾತ್ರವಲ್ಲ, ಸಮಾಜ ಸುಧಾರಕ, ಮಾನವತಾವಾದಿ ಹಾಗೂ ಸಮಾನತೆಯ ಹರಿಕಾರರಾಗಿದ್ದಾರೆ. ಕನಕದಾಸರ ಸಾಹಿತ್ಯವು ಭಕ್ತಿ, ಜ್ಞಾನ, ವೈರಾಗ್ಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಸಮನ್ವಯವಾಗಿದೆ ಎಂದು ಜ್ಞಾನ ಮೃತ ಸೇವಾ ಶಿಕ್ಷಣ ಸಂಸ್ಥೆಯ ಯಾಗಾಚಾರ್ಯ ನರಸಿಂಹ ವೈದ್ಯ ಹೇಳಿದರು. ಶಹಾಪುರ ನಗರದ ಜ್ಞಾನಮೃತ ಸೇವಾ ಶಿಕ್ಷಣ ಟ್ರಸ್ಟ್ (ರಿ) ಯೋಗಧಾಮ ವಿದ್ಯಾನಗರದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕಾಗಿನೆಲೆ ಮತ್ತು ಜ್ಯೋತಿರ್ಗಮಯ ಸೇವಾ ಸಂಸ್ಥೆಯ ಸಗಯೋಗದಲ್ಲಿ ನಡೆದ ಕನಕದಾಸರ…

  • ಕನಕದಾಸರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ತಬಿತಾ ಪ್ರಸಾದ

    ಕನಕದಾಸರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ತಬಿತಾ ಪ್ರಸಾದ

    ಸುದ್ದಿ ಬೆಳಕು ವಾರ್ತೆ ಶಹಾಪುರ: ದುಡಿಮೆ ಮತ್ತು ಜ್ಞಾನ ಎರಡೂ ಸಮಾನವಾಗಿದ್ದರೆ ಮಾತ್ರ ಸಮಾಜದ ಒಳಿತು ಸಾಧ್ಯ ಎಂಬ ಕನಕದಾಸರಆಶಯದಂತೆ ನಾವೆಲ್ಲರೂ ಬಾಳೋಣ ಎಂದು ವಿಶ್ವಜ್ಯೋತಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ತಬಿತಾ ಪ್ರಸಾದ ಹೇಳಿದರು. ಶಹಾಪುರದ ವಿಶ್ವಜ್ಯೋತಿ ಪದವಿ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕಾಗಿನೆಲೆ ಮತ್ತುಜ್ಯೋತಿರ್ಗಮಯ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಕನಕದಾಸರ ಜೀವನ ಮತ್ತು ಸಾಹಿತ್ಯದ ಕುರಿತು ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕದಾಸರ ವಿಚಾರಧಾರೆಗಳನ್ನು ಮತ್ತು ಜಾತ್ಯತೀತ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ…

  • ಕನಕದಾಸರ ಸಮಾನತೆ ಸಂದೇಶ ಇಂದಿಗೂ ಪ್ರಸ್ತುತ: ಅಯ್ಯಮ್ಮ ಎನ್. ಪಾಟೀಲ್

    ಕನಕದಾಸರ ಸಮಾನತೆ ಸಂದೇಶ ಇಂದಿಗೂ ಪ್ರಸ್ತುತ: ಅಯ್ಯಮ್ಮ ಎನ್. ಪಾಟೀಲ್

    ಸುದ್ದಿ ಬೆಳಕು ವಾರ್ತೆ ಶಹಾಪುರ : ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಹಾಗೂ ಜ್ಯೋತಿರ್ಗಮಯ ಸೇವಾ ಸಂಸ್ಥೆ, ದೋರನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶಹಾಪುರದ ಶ್ರೀ ವಿದ್ಯಾನಿಧಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ‘ಕನಕ ದರ್ಶನ’ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಅಯ್ಯಮ್ಮ ಎನ್. ಪಾಟೀಲ್, ಇಂದಿಗೂ ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ಮುಂದುವರಿದಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಕನಕದಾಸರ ಕಾವ್ಯಗಳಲ್ಲಿ ಅಡಕವಾಗಿರುವ ಸಮಾನತೆ, ಮಾನವೀಯತೆ…

↑
Suddi Belaku