ಗುರಿಯತ್ತ ಗಮನ ಇರಲಿ, ಅಡೆತಡೆಗಳ ಮೇಲಲ್ಲ: ರಂಭಾಪುರಿ ಜಗದ್ಗುರುಗಳು

Posted by

–

ಸುದ್ದಿ ಬೆಳಕು ವಾರ್ತೆ

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)   ಜಗತ್ತು ಎಷ್ಟೇ ಬದಲಾದರೂ ಸಂಬAಧಗಳು ಸಡಿಲಗೊಳ್ಳಬಾರದು. ಬಾಂಧವ್ಯ ಸಂಬAಧಗಳನ್ನು ಮರೆತರೆ ಮನುಷ್ಯನಿಗೂ ಯಂತ್ರಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಮನುಷ್ಯನ ಗಮನ ಗುರಿಯತ್ತ ಇರಬೇಕೇ ಹೊರತು ಸಮಸ್ಯೆ ಅಡೆತಡೆಯ ಮೇಲಲ್ಲವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶ್ರಾವಣ ಕೊನೆಯ ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸುಖ ದು:ಖಗಳು ಜೀವನದ ಹಗಲು ರಾತ್ರಿಗಳಿದ್ದಂತೆ. ಸುಖದಲ್ಲಿ ಹಿಗ್ಗದೇ ಕಷ್ಟದಲ್ಲಿ ಕುಗ್ಗದೇ ಸಮಾನವಾಗಿ ಸ್ವೀಕರಿಸಬೇಕು. ವಿನಯವಿಲ್ಲದ ವಿದ್ಯೆ ಹಸಿವಿಲ್ಲದ ಊಟ ಹರಿತವಿಲ್ಲದ ಆಯುಧ ಉಪಕಾರ ಇಲ್ಲದ ಜೀವನ ಗುಣವಿಲ್ಲದ ರೂಪ. ಉಪಯೋಗಕ್ಕೆ ಬಾರದ ಹಣ ಎಲ್ಲವೂ ವ್ಯರ್ಥ. ಸಹನೆ ಇದ್ದರೆ ಸಮಯ ಕೂಡಾ ಸಹಾಯ ಮಾಡುತ್ತದೆ. ಸಹನೆ ಇಲ್ಲದಿದ್ದರೆ ಸಮಯವೇ ಸಂಕಷ್ಟಗಳನ್ನು ರವಾನಿಸುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಮಾನವ ಜೀವನದ ಶ್ರೇಯೋಭಿವೃದ್ಧಿಗೆ ಅಡಿಪಾಯವಾಗಿವೆ. ಸತ್ಯ ಶುದ್ಧ ಧರ್ಮ ಮಾರ್ಗ ಉಜ್ವಲ ಬದುಕಿಗೆ ಕಾರಣವಾಗುತ್ತದೆ ಎಂದರು.

ಪುರಾಣ ಪ್ರವಚನ ಮಾಡಿದ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶ್ವಾಸ ಇಲ್ಲದಿದ್ದರೆ ಜೀವನ ಮುಗಿಯುತ್ತದೆ. ವಿಶ್ವಾಸ ಇಲ್ಲದಿದ್ದರೆ ಸಂಬAಧಗಳು ಉಳಿಯುವುದಿಲ್ಲ. ಏನೂ ಇಲ್ಲದೇ ಇದ್ದಾಗ ಗಳಿಸಿಕೊಂಡು ಹೋಗಬೇಕು. ಎಲ್ಲವೂ ಇದ್ದಾಗ ಉಳಿಸಿಕೊಂಡು ಹೋಗುವುದೇ ಶ್ರೀ ಜಗದ್ಗುರು ರೇಣುಕಾಚಾರ್ಯರ  ಸತ್ಯ ಜೀವನ ಸಂದೇಶವಾಗಿದೆ ಎಂದರು. ಶ್ರಾವಣ ಪೂರ್ತಿ ಶಿಷಪೂಜಾನುಷ್ಠಾನ ಕೈಗೊಂಡಿದ್ದ ಅಂಬಾಜೋಗಾಯಿ ಶಂಭುಲಿAಗ ಶಿವಾಚಾರ್ಯ ಸ್ವಾಮಿಗಳು ಕೊನೆ ಶ್ರಾವಣ ಗುರುವಾರದಂದು ಅನುಷ್ಠಾನ ಮಂಗಲಗೊಳಿಸಿ ಜಗದ್ಗುರುಗಳವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನಮ್ಮ ಮನಸ್ಸಿಗೆ ಅಪಾರ ಸಂತೋಷ ಸಂತೃಪ್ತಿ ತಂದಿದೆ. ಗುರು ಕಾರುಣ್ಯದ ಶಕ್ತಿಯಿಂದ ನಮ್ಮ ಜೀವನ ಪಾವನವಾಗಿದೆ. ನಮ್ಮ ಬಳಿ ಏನಿದೆ ಅನ್ನುವುದಕ್ಕಿಂತ ನೆಮ್ಮದಿ ಇದೆಯಾ ಎಂದು ಯೋಚಿಸುವುದು ಉತ್ತಮ. ನೆಮ್ಮದಿಗಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲವೆಂದರು. ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಕರ್ಜಿಗಿ ಮುರುಗೇಂದ್ರ ಮಠದ ಶಿವ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗಂಗಾಧರ ಹಿರೇಮಠ ಪ್ರಾರ್ಥನಾ ಗೀತೆ ಸಲ್ಲಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.

ದಸರಾ ಪೂರ್ವ ಪ್ರಕಟಣೆ ಬಿಡುಗಡೆ: ಬೆಳಗಿನ ಮಹಾಪೂಜಾ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ಇದೇ ಅಕ್ಟೋಬರ್ ೧೧ರಿಂದ ೨೧ರ ವರೆಗೆ  ಜರುಗಲಿರುವ ಶ್ರೀ ರಂಭಾಪುರಿ ಜಗದ್ಗುರುಗಳವರ ೩೫ನೇ ವರ್ಷದ ದಸರಾ ಧರ್ಮ ಸಮ್ಮೇಳನದ ಪೂರ್ವ ಪ್ರಕಟಣೆಯನ್ನು ಬಿಡುಗಡೆ ಮಾಡಲಾಯಿತು. ಜಮಖಂಡಿಯ ಜಮಖಂಡಿ ಮುತ್ತಿನ ಪೆಂಡಿ ಮಠದ ಶ್ರೀಗಳು ಅಂಬಾ ಜೋಗಾಯಿ, ತೇರದಾಳ, ಅಣದೂರು, ರೌಡಕುಂದ, ಚಿಮ್ಮಲಗಿ, ರಾಣೆಬೆನ್ನೂರು, ಬೇರುಗುಂಡಿ, ಶ್ರೀಗಳು ಹುಡುಗಿ, ಕರ್ಜಗಿ ಮಠಗಳ ಶ್ರೀಗಳು ಉಪಸ್ಥಿತರಿದ್ದರು.

 ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು. ಶ್ರಾವಣ ಕೊನೆಯ ಗುರುವಾರದಂದು ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಹಾಗೂ ಪುಷ್ಪಾಲಂಕಾರ ಮಾಡಲಾಯಿತು.

Leave a Reply

Your email address will not be published. Required fields are marked *

↑
Suddi Belaku