
ಯಾದಗಿರಿ : 2026ರ ಏಪ್ರಿಲ್ 13 ರಿಂದ ಯಾದಗಿರಿ ನಗರದ ಗಾಂಧಿ ಚೌಕ್‌ನ ಅಂಚೆ ಕಚೇರಿಯನ್ನು ಯಾದಗಿರಿ ಮುಖ್ಯ ಅಂಚೆ ಕಚೇರಿ ಕೇಂದ್ರ ಕಚೇರಿ ಯಾದಗಿರಿ 585201 ಜೊತೆ ವಿಲೀನಗೊಳಿಸಿದೆ ಎಂದು ಯಾದಗಿರಿ ಅಂಚೆ ಕಚೇರಿ ಅಧೀಕ್ಷಕರು ಅವರು ತಿಳಿಸಿದ್ದಾರೆ.
ಯಾದಗಿರಿ ಟೌನ್ ಅಂಚೆ ಕಚೇರಿಯ ಗ್ರಾಹಕರು ಹಾಗೂ ಅದರ ವ್ಯಾಪ್ತಿಯ ಸಾರ್ವಜನಿಕರಿಗೆ ಎಲ್ಲಾ ಅಂಚೆ ಸೇವೆಗಳು ಯಾದಗಿರಿ ಮುಖ್ಯ ಅಂಚೆ ಕಚೇರಿಯಲ್ಲಿ ಲಭ್ಯವಿರುತ್ತದೆ. ಹೀಗಾಗಿ, ಸಾರ್ವಜನಿಕರು ತಮ್ಮ ಎಲ್ಲಾ ಅಂಚೆ ಸಂಬಂಧಿತ ವ್ಯವಹಾರಗಳನ್ನು ಯಾದಗಿರಿ ಮುಖ್ಯ ಅಂಚೆ ಕಚೇರಿಯಲ್ಲಿ ಪಡೆಯಬೇಕು ಎಂದು ವಿನಂತಿಸಿದೆ. ಸಾರ್ವಜನಿಕರು ವಿಲೀನಗೊಂಡ ಅಂಚೆ ಕಚೇರಿಯಲ್ಲಿ ಅಂಚೆ ಸೇವೆಗಳನ್ನು ಮುಂದುವರಿಸಲು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










Leave a Reply