ಯಾದಗಿರಿ : ದಸರಾ ಹಬ್ಬದ ನವರಾತ್ರಿ ವೇಳೆ ದೇವಿ ದುರ್ಗಾಮಾತೇಯನ್ನು ಪ್ರತಿಷ್ಠಾಪಿಸುವ ಮೂಲಕ ಒಂಬತ್ತು ದಿನಗಳ ಕಾಲ ಧಾರ್ಮಿಕ ಭಕ್ತಿ ಆಚರಣೆ ಮಾಡುವುದರಿಂದ ಮನಸ್ಸು ಶಾಂತಚಿತ್ತವಾಗಿ ಹೊಸ ಚೈತನ್ಯ ಪಡೆಯತ್ತದೆ ಎಂದು ಬಿಜೆಪಿ ಹಿರಿಯ ನಾಯಕ ರಾಚಣ್ಣಗೌಡ ಮುದ್ನಾಳ ಹೇಳಿದರು. ಮಾತಾ ಮಾಣಿಕೇಶ್ವರಿ ನಗರದಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನದ ಸಮೀಪ ನವರಾತ್ರಿ ಹಬ್ಬದ ಅಂಗವಾಗಿ 9 ದಿನಗಳ ಕಾಲ ನಡೆಯಲಿರುವ ದಾಂಡಿಯಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭರತ ಭೂಮಿ ಧಾರ್ಮಿಕದ ಕೇಂದ್ರಬಿಂದುವಾಗಿದೆ. ದುಷ್ಟರನ್ನು ಶಿಕ್ಷಿಸಿ, ಉತ್ತಮರನ್ನು ರಕ್ಷಿಸುವ ದೇವಿ ಜಗನ್ಮಾಥೆಯನ್ನು ಸರ್ವರನ್ನು ಪೂಜಿಸುವ ಮೂಲಕ ಜೀವನದಲ್ಲಿ ಉನ್ನತಿ ಹೊಂದಬೇಕೆಂದರು.
ನವರಾತ್ರಿ ಪ್ರಮುಖ ಆಕರ್ಷಣೆಯಾಗಿರುವ ದಾಂಡಿಯಾ ಮನೋರಂಜನ್ಮಾಕವಾಗಿ ಆಡಬೇಕೆಂದರು.
ನವರಾತ್ರಿಯ ಶುಭಸಂದರ್ಭದಲ್ಲಿ ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯವನ್ನು ತಾಯಿ ದುರ್ಗಾದೇವಿ ಕರುಣಿಸಲಿ ಎಂದು ರಾಚಣ್ಣಗೌಡ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮನಗೌಡ ಕ್ಯಾತನಾಳ, ಹೇಮಂತ್ ಶಾಂತಗೌಡ ಪಗಲಾಪುರ, ಶರಣಗೌಡ ಪಾಟೀಲ್ ಕ್ಯಾತನಾಳ, ಸ್ವಾಮಿದೇವ ದಾಸನಕೇರಿ, ರವೀಂದ್ರಗೌಡ ಹಳಿಗೇರ, ಸಂತೋಷ ಪತಗೇರ, ವೆಂಕಟೇಶ, ಸುಮಾ ಹಾಗೂ ಮಂಜುನಾಥ ಜೋಗರ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.
Leave a Reply