ಯಾದಗಿರಿಯಲ್ಲಿ ಹಿಂದೂ ಮಹಾಗಣಪತಿಗೆ ರಾಚನಗೌಡ ಮುದ್ನಾಳ್ ಸೇರಿ ಬಿಜೆಪಿ ಮುಖಂಡರಿಂದ ವಿಶೇಷ ಪೂಜೆ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಗರದ ಹಿಂದೂ ಮಹಾಗಣಪತಿ ಮೂರ್ತಿಗೆ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಚನಗೌಡ ಮುದ್ನಾಳ ಅವರು ಗಣಪತಿಗೆ ಪೂಜೆ ಸಲ್ಲಿಸಿ, ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.
ಬಿಜೆಪಿ ಮುಖಂಡರಾದ ಭೀಮನಗೌಡ ಕ್ಯಾತನಾಳ, ಶರಣಗೌಡ ಅನಪುರ, ಶರಣಗೌಡ ಕಾಳೆ, ಬೆಳಗುಂದಿ ಸುರೇಶ ರಾಠೋಡ್, ಹಣಮಂತ ಇಟಗಿ, ಅನಿಲ್ ಕರಾಟೆ, ಶಿವರಾಜ ದಾಸನಕೇರಿ, ಶಿವು ಕೋಟಿಮನಿ, ವಿಶ್ವನಾಥ ಕಾಚಗಾರ, ಶಾಂತಗೌಡ ಪಗಲಪುರ, ಮಲ್ಲಿಕಾರ್ಜುನ ಜಲ್ಲಪ್ಪನೋರ್, ಚಂದಪ್ಪ ರಾಮಸಮುದ್ರ, ಚಂದ್ರಶೇಖರ ಕಡೆಯೂರು, ಭೀಮಣ್ಣ ಮಸ್ಕನಳ್ಳಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

↑
Suddi Belaku