Tag: Suddi Belaku News

  • ಡಾ. ವೀರಬಸವಂತರೆಡ್ಡಿ ಮುದ್ನಾಳ ವೈದ್ಯಕೀಯ–ರಾಜಕೀಯಕ್ಕೆ ಮಾದರಿ: ಸಚಿವ ಎಂ.ಬಿ. ಪಾಟೀಲ್

    ಡಾ. ವೀರಬಸವಂತರೆಡ್ಡಿ ಮುದ್ನಾಳ ವೈದ್ಯಕೀಯ–ರಾಜಕೀಯಕ್ಕೆ ಮಾದರಿ: ಸಚಿವ ಎಂ.ಬಿ. ಪಾಟೀಲ್

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಮಾಜಿ ಶಾಸಕರಾದ ಲಿಂ.ಡಾ.ವೀರಬಸವಂತರೆಡ್ಡಿ ಮುದ್ದಾಳ ಅವರು ಕಾಯಕ ನಿಷ್ಠೆ, ಶಿಸ್ತಿನ ಸಿಪಾಯಿ, ಬದ್ಧತೆಯ ಜೀವನ ನಡೆಸುವ ಮೂಲಕ ವೈದ್ಯಕೀಯ ವೃತ್ತಿ ಮತ್ತು ರಾಜಕೀಯದಲ್ಲೂ ಇತರರಿಗೆ ಮಾದರಿಯಾಗಿದ್ದರೆಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರ 2ನೇ ಪುಣ್ಯಸ್ಮರಣೆ ಹಾಗೂ ಸಾಹಿತಿ ಡಾ.ಸುಭಾಷಚಂದ್ರ ಕೌಲಗಿ ಸಂಪಾದಕತ್ವದ ಗ್ರಂಥ ಬಿಡುಗಡೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರದ ಬಿಎಲ್‌ಡಿ ಸಂಸ್ಥೆಯ ಮೆಡಿಕಲ್ ಕಾಲೇಜಿನಲ್ಲಿ ಸುಮಾರು…

  • ರಾಹುಲ್, ಪ್ರಿಯಾಂಕಾ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ: ಯಾದಗಿರಿಯಲ್ಲಿ ಕೇಂದ್ರದ ವಿರುದ್ಧ ಸಚಿವ ಎಂ.ಬಿ. ಪಾಟೀಲ ವಾಗ್ದಾಳಿ

    ರಾಹುಲ್, ಪ್ರಿಯಾಂಕಾ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ: ಯಾದಗಿರಿಯಲ್ಲಿ ಕೇಂದ್ರದ ವಿರುದ್ಧ ಸಚಿವ ಎಂ.ಬಿ. ಪಾಟೀಲ ವಾಗ್ದಾಳಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರ ಬಂಧನವು “ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. “ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಲಕ್ಷಾಂತರ ಯುವಕರು ಬೀದಿಗಿಳಿದು ಹೋರಾಟ…

  • ವಿದ್ಯಾರ್ಥಿಗಳ ಭಾವನೆಗೆ ಕಾಂಗ್ರೆಸ್ ಸ್ಪಂದಿಸಿದೆ: ಕೇಂದ್ರ ಸಚಿವರ ರಾಜೀನಾಮೆಗೆ ಡಿಕೆಶಿ ಆಗ್ರಹ

    ವಿದ್ಯಾರ್ಥಿಗಳ ಭಾವನೆಗೆ ಕಾಂಗ್ರೆಸ್ ಸ್ಪಂದಿಸಿದೆ: ಕೇಂದ್ರ ಸಚಿವರ ರಾಜೀನಾಮೆಗೆ ಡಿಕೆಶಿ ಆಗ್ರಹ

    ಸುದ್ದಿ ಬೆಳಕು ವಾರ್ತೆ ನವದೆಹಲಿ :  “ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ. ನಮ್ಮ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ. ಹೊಸ ಮುಖ, ಜಿಲ್ಲೆ ಹಾಗೂ ಪ್ರಾಂತ್ಯವಾರು ಲೆಕ್ಕಾಚಾರ ಮಾಡಿ ತೀರ್ಮಾನ ಮಾಡುತ್ತಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ನವದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. “ಸಚಿವ ಸಂಪುಟ ವಿಸ್ತರಣೆ ಮಾಡಿ, ಬುಧವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮಾಡಲು ರಾಜ್ಯಪಾಲರ ಅನುಮತಿ ಪಡೆಯಲಾಗಿತ್ತು. ಆದರೆ ಮಂಗಳವಾರ ನಿಗದಿಯಾಗಿದ್ದ…

  • ಬಸವಸಾಗರಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ; ಸದ್ಯ ರೈತರಿಗೆ ಕಾಲುವೆ ನೀರು ಸಾಧ್ಯವಿಲ್ಲ

    ಬಸವಸಾಗರಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ; ಸದ್ಯ ರೈತರಿಗೆ ಕಾಲುವೆ ನೀರು ಸಾಧ್ಯವಿಲ್ಲ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಕೃಷ್ಣಾ ಅಚ್ಚು ಕಟ್ಟು ಭಾಗದ ರೈತರ ಜೀವನಾಡಿ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಚಿವರು ಆಲಮಟ್ಟಿ ಶಾಸ್ತ್ರೀ ಹಾಗೂ ನಾರಾಯಣಪುರ ಬಸವಸಾಗರ ಅವಳಿ ಜಲಾಶಯಗಳಲ್ಲಿ ಕೃಷಿಗಾಗಿ ಕಾಲುವೆಗಳಿಗೆ ನೀರು ಬಿಡಲು ಕೇವಲ 10 ಟಿಎಂಸಿಯಷ್ಟು ಲಭ್ಯವಿದೆ ಒಂದೊಮ್ಮೆ ಕೃಷ್ಣಾ ಹಾಗೂ ಅದರ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಅವಳಿ ಜಲಾಶಯಗಳು ಸಂಪೂರ್ಣ ಭರ್ತಿಯಾದರೆ…

  • ಕನಕದಾಸರ ಸಾಹಿತ್ಯ ಸಮಾಜಕ್ಕೆ ದಾರಿದೀಪ: ಡಾ. ಶಿವಶಂಕರ

    ಕನಕದಾಸರ ಸಾಹಿತ್ಯ ಸಮಾಜಕ್ಕೆ ದಾರಿದೀಪ: ಡಾ. ಶಿವಶಂಕರ

    ಸುದ್ದಿ ಬೆಳಕು ವಾರ್ತೆ ಶಹಾಪುರ: ಸಮಾಜದಲ್ಲಿ ಗುಣಕ್ಕಿಂತ ಕುಲವೇ ಮುಖ್ಯ ಎಂದು ಬೀಗುವವರಿಗೆ ಕನಕದಾಸರು ತಮ್ಮ ಸಾಹಿತ್ಯ ಮತ್ತು ಕೀರ್ತನೆಗಳ ಮೂಲಕ ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದಾರೆ. ದುರ್ಜನರ ಸಂಗವನ್ನು ತೊರೆದು ಸದಾ ಸಜ್ಜನರ ಸಂಗದಲ್ಲೇ ಬದುಕಬೇಕು ಎಂಬ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಬೇವಿನಹಳ್ಳಿಯ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಶಂಕರ ಹೇಳಿದರು. ತಾಲೂಕಿನ ಬೇವಿನಹಳ್ಳಿ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜ್ಯೋತಿರ್ಗಮಯ ಸೇವಾ ಸಂಸ್ಥೆ ಸಂಯುಕ್ತ…

  • ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಮನವಿ

    ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಮನವಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವೈನ್ ಶಾಪ್‌ಗಳು ಹಾಗೂ ಬಾರ್‌ಗಳಿಂದ ಅಕ್ರಮವಾಗಿ ಮದ್ಯ ಸಾಗಾಟ ಮತ್ತು ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸೇನೆ ಜಿಲ್ಲಾ ಘಟಕದಿಂದ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತಾನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಪೋಲಪ್ಪ ಎಂ. ನಾರಾಯಣೋರ್ ಅವರು ಯಾದಗಿರಿ ಅಬಕಾರಿ ಉಪ ಆಯುಕ್ತರಿಗೆ ಸಲ್ಲಿಸಿ ಮಾತಾನಾಡಿದ ಅವರು ಕೆಲವು ವೈನ್ ಶಾಪ್‌ಗಳು ಮತ್ತು ಬಾರ್‌ಗಳಿಂದ ಟಂಟಂ…

  • ರಾಜ್ಯ ಸಮ್ಮೇಳನದಲ್ಲಿ ಗಿರಿ ಜಿಲ್ಲೆಯ ಸಾಹಿತ್ಯ ಸಾಧಕರಿಗೆ ರಾಷ್ಟ್ರೀಯ ಗೌರವ

    ರಾಜ್ಯ ಸಮ್ಮೇಳನದಲ್ಲಿ ಗಿರಿ ಜಿಲ್ಲೆಯ ಸಾಹಿತ್ಯ ಸಾಧಕರಿಗೆ ರಾಷ್ಟ್ರೀಯ ಗೌರವ

    ಸುದ್ದಿ ಬೆಳಕು ವಾರ್ತೆ ಹುಬ್ಬಳ್ಳಿ: ವಿಶ್ವ ದರ್ಶನ ಟ್ರಸ್ಟ್ ಹಾಗೂ ವಿಶ್ವದರ್ಶನ ಜನಶಿವ ಫೌಂಡೇಶನ್, ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್ವಧರ್ಮ ಭಾವೈಕ್ಯತೆಯ ಏಳನೇ ರಾಜ್ಯ ಸಮ್ಮೇಳನ ಹಾಗೂ ವಿಶ್ವ ದರ್ಶನ ಪತ್ರಿಕೆಯ ಆರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ನ್ಯಾಷನಲ್ ಐಕಾನ್ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗಿರಿ ಜಿಲ್ಲೆಯ ಸಾಹಿತಿ ಎ. ಬಿ. ಪೂಜಾರಿ ಅವರಿಗೆ ‘ನ್ಯಾಷನಲ್ ಐಕಾನ್ ಕನ್ನಡ ಸಾಹಿತ್ಯ ರತ್ನ’ ಪ್ರಶಸ್ತಿ ಹಾಗೂ ಬರಹಗಾರ ಮತ್ತು ಶಿಕ್ಷಕರಾದ…

  • ಹಳೆ ತಹಸೀಲ್ ಕಚೇರಿ ಜಾಗದಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಸಂಘಟನೆಗಳ ಆಗ್ರಹ

    ಹಳೆ ತಹಸೀಲ್ ಕಚೇರಿ ಜಾಗದಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಸಂಘಟನೆಗಳ ಆಗ್ರಹ

    ಸುದ್ದಿ ಬೆಳಕು ವಾರ್ತೆ ಶಹಾಪುರ: ನಗರದ ಹಳೆಯ ತಹಸೀಲ್ ಕಚೇರಿ ಜಾಗದಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಸಾಮೂಹಿಕ ಸಂಘಟನೆಗಳ ವತಿಯಿಂದ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ನಗರದ ಹಳೆಯ ತಹಸೀಲ್ ಕಚೇರಿ ಇರುವ ಸರ್ವೆ ನಂ. 371ರಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಸ್ಥಳವಿದೆ. ಅಲ್ಲಿಯೇ ಕಟ್ಟಡ ನಿರ್ಮಿಸಿದರೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ನಗರದಿಂದ ಸುಮಾರು 4–5 ಕಿ.ಮೀ ದೂರದಲ್ಲಿರುವ…

  • ಸೋನಂ ವಾಂಗ್ಚುಕ್ ಬಂಧನ ಖಂಡನೆ; ಯಾದಗಿರಿಯಲ್ಲಿ AIDSO ಪ್ರತಿಭಟನೆ

    ಸೋನಂ ವಾಂಗ್ಚುಕ್ ಬಂಧನ ಖಂಡನೆ; ಯಾದಗಿರಿಯಲ್ಲಿ AIDSO ಪ್ರತಿಭಟನೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ಜುಲೈ 20ರಂದು ದೆಹಲಿಯಲ್ಲಿ ನಡೆಯಲಿರುವ ‘ಪಾರ್ಲಿಮೆಂಟ್ ಚಲೋ’ ಹೋರಾಟಕ್ಕೆ ಬೆಂಬಲ ಸೂಚಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (AIDSO) ವತಿಯಿಂದ ನಗರದ ನೇತಾಜಿ ಸುಭಾಷ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಇತರ ಹೋರಾಟಗಾರರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ…

  • ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ: ಕನ್ನೇಕೋಳೂರಿನಲ್ಲಿ ಬಿಜೆಪಿ ಜಾಗೃತಿ

    ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ: ಕನ್ನೇಕೋಳೂರಿನಲ್ಲಿ ಬಿಜೆಪಿ ಜಾಗೃತಿ

    ಸುದ್ದಿ ಬೆಳಕು ವಾರ್ತೆ ಕನ್ನೇಕೋಳೂರ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಅಂಗವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವತಿಯಿಂದ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಬಿಎಲ್‌ಒ-1 ಅವರೊಂದಿಗೆ ಕನ್ನೇಕೋಳೂರ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀ ರಾಚಣ್ಣ ಸಾಹು ಕರದಳ್ಳಿ, ಶ್ರೀ ಶಿವಪುತ್ರಪ್ಪ ಗೌಡ ಮಾಲಿಪಾಟೀಲ, ಶ್ರೀ ನಾಗಣಗೌಡ, ಶ್ರೀ ಸಿದ್ದಣ್ಣಗೌಡ, ಶ್ರೀ ಬನ್ನಪ್ಪ ನಾಟೇಕಾರ, ಬಿಜೆಪಿ…

↑
Suddi Belaku