
ಸುದ್ದಿ ಬೆಳಕು ವಾರ್ತೆ
ಕನ್ನೇಕೋಳೂರ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಅಂಗವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವತಿಯಿಂದ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಬಿಎಲ್‌ಒ-1 ಅವರೊಂದಿಗೆ ಕನ್ನೇಕೋಳೂರ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀ ರಾಚಣ್ಣ ಸಾಹು ಕರದಳ್ಳಿ, ಶ್ರೀ ಶಿವಪುತ್ರಪ್ಪ ಗೌಡ ಮಾಲಿಪಾಟೀಲ, ಶ್ರೀ ನಾಗಣಗೌಡ, ಶ್ರೀ ಸಿದ್ದಣ್ಣಗೌಡ, ಶ್ರೀ ಬನ್ನಪ್ಪ ನಾಟೇಕಾರ, ಬಿಜೆಪಿ ಬಿಎಲ್‌ಒ-2 ಶ್ರೀ ರಾಜಶೇಖರ ಮಲ್ಹಾರ ಶೆಟ್ಟಿ ಹಾಗೂ ಶ್ರೀ ಸುರೇಶ್‌ಬಾಬು ಹೊಸಮನಿ ಉಪಸ್ಥಿತರಿದ್ದರು.
ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಸ್ಥಳಾಂತರ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಮತದಾರರ ಪಟ್ಟಿ ಸಮರ್ಪಕವಾಗಿರಲು ಸಾರ್ವಜನಿಕರು ಸಹಕರಿಸುವಂತೆ ಮುಖಂಡರು ಮನವಿ ಮಾಡಿದರು.











Leave a Reply