ಬಸವಸಾಗರಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ; ಸದ್ಯ ರೈತರಿಗೆ ಕಾಲುವೆ ನೀರು ಸಾಧ್ಯವಿಲ್ಲ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕೃಷ್ಣಾ ಅಚ್ಚು ಕಟ್ಟು ಭಾಗದ ರೈತರ ಜೀವನಾಡಿ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಚಿವರು ಆಲಮಟ್ಟಿ ಶಾಸ್ತ್ರೀ ಹಾಗೂ ನಾರಾಯಣಪುರ ಬಸವಸಾಗರ ಅವಳಿ ಜಲಾಶಯಗಳಲ್ಲಿ ಕೃಷಿಗಾಗಿ ಕಾಲುವೆಗಳಿಗೆ ನೀರು ಬಿಡಲು ಕೇವಲ 10 ಟಿಎಂಸಿಯಷ್ಟು ಲಭ್ಯವಿದೆ ಒಂದೊಮ್ಮೆ ಕೃಷ್ಣಾ ಹಾಗೂ ಅದರ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಅವಳಿ ಜಲಾಶಯಗಳು ಸಂಪೂರ್ಣ ಭರ್ತಿಯಾದರೆ ಮಾತ್ರ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಕಾಲುವೆ ನೀರು ಹರಿಸಲು ಯೋಚಿಸಲಾಗುವದು ಎಂದು ಸಚಿವರು ಹೇಳಿದರು.

ಅವಳಿ ಜಲಾಶಯಗಳಲ್ಲಿನ ಡೆಡ್ ಸ್ಟೋರೇಜ್ ಹೊರತುಪಡಿಸಿ 86 ಟಿಎಂಸಿ ನೀರಿನ ಸಂಗ್ರಹ ಇದೆ ಇದರಲ್ಲಿ ಕುಡಿಯಲು, ಆರ್ಟಿಪಿಸಿ ಸೇರಿ ಇತರೆ ಉದ್ಯಮಿಗಳಿಗೆ, ಬ್ರಿಜ್ ಕಮ್ ಬ್ಯಾರೆಜುಗಳಿಗೆ, ಕೆರೆ ತುಂಬವದು, ಬಾಷ್ಪೀಕರಣ, ನದಿ ಪಾತ್ರಕ್ಕೆ ನೀರು ಹರಿಸುವದು ಸೇರಿ ಇತರೆ ಬೇಡಿಕೆ ಅನುಗುಣವಾಗಿ ವಾರ್ಷಿಕವಾಗಿ 76 ಟಿಎಂಸಿ ಯಷ್ಟು ಬಳಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ಕಾಲುವೆ ನೀರು ಕೊಡಲು ಆಗುವದಿಲ್ಲಾ ಒಂದೊಮ್ಮೆ ಆಗಷ್ಟ ವೇಳೆಗೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಸದ್ಯ ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ ಅಂದಾಜು 40 ಸಾವಿರ ಕ್ಯೂಸೆಕ್ ಒಳಹರಿವು ಇದೆ ನಿತ್ಯ ಜಲಾಶಯದಲ್ಲಿ 3 ರಿಂದ 4 ಟಿಎಂಸಿಯಷ್ಟು ನೀರು ಸಂಗ್ರವಾಗುತ್ತಿದೆ.


ಒಂದೊಮ್ಮೆ ಮಹಾರಾಷ್ಟದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದರೆ ನಿತ್ಯ 10 ಟಿಎಂಸಿಯಷ್ಟು ನೀರಿನ ಸಂಗ್ರಹ ಹೆಚ್ಚಾದರೆ ಅವಳಿ ಜಲಾಶಯಗಳು ನಿರೀಕ್ಷೆಯಂತೆ ಭರ್ತಿಯಾದರೆ ಕಾಲುವೆ ಜಾಲಗಳಿಗೆ ನೀರು ಹರಿಸಲು ಯೋಚಿಸಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಈಗಾಗಲೇ ಸಿಎಂ ಡಿ.ಕೆ ಶಿವಕುಮಾರ್ ಅವರು ಜಲಾಶಯ ನೀರು ನಂಬಿ ವ್ಯವಸಾಯ ಮಾಡದಂತೆ ರೈತರಲ್ಲಿ ಮನವಿ ಮಾಡಿದ್ದಾರೆ ಜೊತೆಗೆ ದೇಶದ 12 ದೊಡ್ಡ ರಾಜ್ಯಗಳಿಗೆ ಬರಗಾಲ ಆವರಿಸಿದೆ ರಾಜ್ಯದ ಅಂದಾಜು 175 ಬರಗಾಲ ಪೀಡಿತ ತಾಲ್ಲೂಕುಗಳಾಗಿವೆ ಎಂದು ವಿವರಿಸಿದ ಸಚಿವರು ಬಸವಸಾಗರ ಜಲಾಶಯದ ಮುಂಭಾಗದಲ್ಲಿ ಆಲಮಟ್ಟಿ ಮಾದರಿಯ ಸುಂದರ ಉದ್ಯಾವನ ನಿರ್ಮಿಸಲು ಕೇಂದ್ರ ಸರ್ಕಾರದ ಡ್ರಿಪ್ ಯೋಜನೆ ಅಡಿಯಲ್ಲಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವಾಗಿ ಉದ್ಯಾನ ನಿರ್ಮಾಣಕ್ಕೆ ಮುಂದಾಗುವದಾಗಿ ಹೇಳಿದರು.

ಬೂದಿಹಾಳ ಪೀರಾಪುರ ಹಂತ 2 ಯೋಜನೆ ಅಡಿಯಲ್ಲಿ ಹೊಲಗಾಲುವೆಗಳು ನಿರ್ಮಿಸುವ ಮೂಲಕ ನಿಗದಿ ಪಡಿಸಿದ ಜಮೀನುಗಳಿಗೆ ನೀರಿನ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದ ಸಚಿವರು ಕೆಬಿಜೆಎನ್ಎಲ್ ಅಡಿಯಲ್ಲಿ ಖಾಲಿ ಇರುವ ಪ್ರದೇಶದಲ್ಲಿ ಕೆರೆಗಳನ್ನು ನಿರ್ಮಾಣ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಮತ್ತು ವಿಶೇಷ ಯೋಜನೆ ಅಡಿಯಲ್ಲಿ ಸೌರ ವಿದ್ಯುತ್ ತಯಾರಿಕೆಗೂ ಯೋಜಿಸಲಾಗುತ್ತಿದೆ ಮತ್ತು 12 ವರ್ಷಗಳಿಂದ ನಿಂತ್ತು ಹೋಗಿರುವ ನಂದವಾಡಿ ಏತ ನೀರಾವರಿ ಯೋಜನೆ ಜಾರಿಗೆ ಕ್ರಮ ವಹಿಸುವದಾಗಿ ಸುದ್ದಿಗಾರರ ಪ್ರಶ್ನೇಯೊಂದಕ್ಕೆ ಸಚಿವರು ಉತ್ತರಿಸಿದರು.


ಇದೇ ಸಂದರ್ಭದಲ್ಲಿ ಜಲಾಶಯದ ವೀಕ್ಷಣೆ ಗೇಟ್ಗಳ ಕಾರ್ಯಚರಣೆ, ನಿರ್ವಹಣೆ ಮತ್ತು ಎಲ್ ಎಲ್ ಬಿಸಿ ಕಾಲುವೆಗಳಿಗೆ ಅಳವಡಿಸಿರುವ ಸ್ಕಾಡ್ ಗೇಟ್ಸ್ ಕಾರ್ಯಚರಣೆ ನಿರ್ವಹಣೆ ಹಾಗೂ ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿ ಗುತ್ತಿಗೆ ವಹಿಸಿಕೊಂಡಿರುವ ಮೆಕಾಟ್ರಾನಿಕ್ಸ್ ಕಂಪನಿಯ ಇಂಜನೀಯರಿಗಳಿಂದ ವಿಡಿಯೋ ವೀಕ್ಷಣೆ ಮಾಡುವ ಮೂಲಕ ಮಾಹಿತಿ ಪಡೆದುಕೊಂಡರು.

ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಪ್ರಗತಿ ಹಂತದದಲ್ಲಿರುವ ಬೂದಿಹಾಳ ಪೀರಾಪುರ ಎರಡನೇ ಹಂತದ ಕಾಮಗಾರಿ ವೀಕ್ಷಣೆ ಮಾಡಿ ಕಾರ್ಯವಿಧಾನದ ಕುರಿತು ಪರಿವೀಕ್ಷಣೆ ಮಾಡಿ ಮಾಹಿತಿ ಪಡೆದರು.

ಮುದ್ದೇಬಿಹಾಳ ಶಾಸಕ ಸಿ.ಎಸ್ ಅಪ್ಪಾಜಿ ನಾಡಗೌಡ, ಸುರಪುರ ಶಾಸಕರಾದ ರಾಜಾ ವೇಣುಗೋಪಾಲ ನಾಯಕ, ಕೆಬಿಜೆಎನ್ಎಲ್ ಎಂ.ಡಿ ಕೃಷ್ಣಮೂರ್ತಿ ಕುಲಕರ್ಣಿ, ಡಿಸಿ ರಾಹುಲ್ ತುಕಾರಾಮ್ ಪಾಂಡ್ವೆ, ಎ.ಸ್ಪಿ ಪೃಥ್ವಿಕ್ ಶಂಕರ, ಸಿಇ ಜಿ.ಜಿ ಪವಾರ, ಎಸ್ ಇ ರಮೇಶ ರಾಠೋಡ, ರಾಜಾ ಕುಮಾರನಾಯಕ, ರಾಜಾ ಸುಶಾಂತನಾಯಕ, ಮುಖಂಡರಾದ ರಾಜಶೇಖರಗೌಡ ಪಾಟೀಲ್, ಯಂಕೂಬ ಸಾಹುಕಾರ, ರವಿಚಂದ್ರ ಸಾಹುಕಾರ, ನಿಂಗಣ್ಣ ಬಾಚಿಮಟ್ಟಿ, ಗುಂಡಪ್ಪ ಸೊಲ್ಲಾಪುರ, ಶಾಂತಪ್ಪ ಮೇಸ್ತಕ್, ಅಮರೇಶ ಕೋಳುರ, ತಿಮ್ಮಣ್ಣ, ವಿರೇಶ ಸೇರಿದಂತೆ ನಾರಾಯಣಪುರ ಸುತ್ತಮುತ್ತಲಿನ ಗ್ರಾಮಗಳ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತೆಯರು ಇದ್ದರು.
ಇಇ ಹಣಮಂತ ಕೊಣ್ಣೂರು, ಸುರೇಂದ್ರರೆಡ್ಡಿ, ಎಇಇಗಳಾದ ಮಹಾದೇವಪ್ಪ ಭಜಂತ್ರಿ, ರಾಘವೇಂದ್ರ ಕುಲಕರ್ಣಿ, ಶಂಕರ ಹಡಲಗೇರಿ, ಬಸವರಾಜ, ಎಇಗಳಾದ ಶ್ರೀಶೈಲ್ ಬಿಜ್ಜೂರ, ವಿಜಯಕುಮಾರ ಅರಳಿ, ಬಾಲಸುಬ್ರಹ್ಮಣ್ಯಂ, ಬಾಲಚಂದ್ರ ಸೇರಿ ಇತರೆ ಅಧಿಕಾರಿ ವರ್ಗದವರು ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

Suddi Belaku