ರಾಜ್ಯ ಸಮ್ಮೇಳನದಲ್ಲಿ ಗಿರಿ ಜಿಲ್ಲೆಯ ಸಾಹಿತ್ಯ ಸಾಧಕರಿಗೆ ರಾಷ್ಟ್ರೀಯ ಗೌರವ

Posted by

ಸುದ್ದಿ ಬೆಳಕು ವಾರ್ತೆ

ಹುಬ್ಬಳ್ಳಿ: ವಿಶ್ವ ದರ್ಶನ ಟ್ರಸ್ಟ್ ಹಾಗೂ ವಿಶ್ವದರ್ಶನ ಜನಶಿವ ಫೌಂಡೇಶನ್, ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್ವಧರ್ಮ ಭಾವೈಕ್ಯತೆಯ ಏಳನೇ ರಾಜ್ಯ ಸಮ್ಮೇಳನ ಹಾಗೂ ವಿಶ್ವ ದರ್ಶನ ಪತ್ರಿಕೆಯ ಆರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ನ್ಯಾಷನಲ್ ಐಕಾನ್ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಿರಿ ಜಿಲ್ಲೆಯ ಸಾಹಿತಿ ಎ. ಬಿ. ಪೂಜಾರಿ ಅವರಿಗೆ ‘ನ್ಯಾಷನಲ್ ಐಕಾನ್ ಕನ್ನಡ ಸಾಹಿತ್ಯ ರತ್ನ’ ಪ್ರಶಸ್ತಿ ಹಾಗೂ ಬರಹಗಾರ ಮತ್ತು ಶಿಕ್ಷಕರಾದ ಸಿದ್ದಪ್ಪ ಕೋನಳ್ಳಿ ಅವರಿಗೆ ‘ರಾಷ್ಟ್ರೀಯ ಅಕ್ಷರ ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವು ಜುಲೈ 19, 2026ರಂದು ಗುಲ್ಬರ್ಗ (ಕಲಬುರಗಿ) ಜಿಲ್ಲೆಯ ಅಫ್ಜಲಪುರ ತಾಲೂಕಿನ ಶ್ರೀ ಗುರು ಮಾಳೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಪ್ರಶಸ್ತಿ ಸ್ವೀಕರಿಸಿದ ಇಬ್ಬರು ಸಾಧಕರನ್ನು ಇದೇ ಸಂದರ್ಭದಲ್ಲಿ ಅವರ ಗೆಳೆಯ ಬಳಗದ ಸದಸ್ಯರಾದ ನಾಗರಾಜ್ ಬಿರ್ನೂರ್, ನಾಗರಾಜ್ ಭಾಸ್ಕರ್, ರುದ್ರು ಭಾಸ್ಕರ್, ಬಂಡಿ, ಶ್ರೀಕಾಂತ್ ಸೆಡಂಕರ್, ಉಪನ್ಯಾಸಕ ನಿಂಗಪ್ಪ, ಚಂದ್ರಶೇಖರ್ (ವಾರ್ಡನ್) ಹಾಗೂ ಸಂತೋಷ್ (ವಾರ್ಡನ್) ಅವರು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

Suddi Belaku