ಶಹಾಪೂರ ತಾಲೂಕು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರ ಸ್ಥಾನಗಳ ಪ್ರಕಟ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಏಪ್ರಿಲ್ 23  : ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕ ವಿವಿಧ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸ್ಥಾನಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದಿಂದ ಅದಾಲತ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಶಹಾಪೂರ ತಹಸೀಲ್ದಾರ ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸ್ಥಾನಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 5(1) ರಂತೆ ನಿಗದಿಪಡಿಸಲಾಗಿದೆ. ಆಯೋಗದ ವೆಬ್ ಸೈಟ್ ವಿಳಾಸ; https://rdpr.karnataka.gov.in/rdc/public/ ದಿನಾಂಕ : 18-04-2026ರ ರಾಜ್ಯ ಪತ್ರದಲ್ಲಿ (ರಾಜ್ಯ ಪತ್ರದ ವಿಳಾಸ : https://erajyapatra.karnataka.gov.in ನಲ್ಲಿ ಪ್ರಕಟಿಸಲಾಗಿದೆ.

ಈ ಸದಸ್ಯ ಸ್ಥಾನಗಳ ಪ್ರಕಟಣೆ ಕುರಿತಂತೆ ದಿನಾಂಕ : 24.04.2026ರ ರೊಳಗಾಗಿ ಆಯೋಗದ ವೈಬ್ ಸೈಟ್ ವಿಳಾಸ : https://rdpr.karnataka.gov.in/rdc/public/ ನಲ್ಲಿ ಅಥವಾ ಖುದ್ದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್ ನಂ.2, 2ನೇ ಮಹಡಿ, ಕೊಠಡಿ ಸಂಖ್ಯೆ : 229, 230 ಬಹು ಮಹಡಿಗಳ ಕಟ್ಟಡ ಬೆಂಗಳೂರು ಇವರ ಕಚೇರಿಯಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದ್ದು, ಈ ವಿಷಯದ ಕುರಿತು ದಿನಾಂಕ : 24.04.2026ರ ಒಳಗಾಗಿ ಸ್ವೀಕೃತವಾದ ಆಕ್ಷೇಪಣೆ ಹಾಗೂ ಅಹವಾಲುಗಳ ಪರಿಶೀಲನಾ ಅದಾಲತ್ ದಿನಾಂಕ : 27.04.2026ರ ಸಮಯ ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 1:30 ವರೆಗೆ ನಡೆಯಲಿದ್ದು, ಅದಾಲತ್‌ನಲ್ಲಿ ಭಾಗವಹಿಸಲು ಇಚ್ಚಿಸಿದ್ದಲ್ಲಿ ಸರ್ಕಾರದಿಂದ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಕಡ್ಡಾಯವಾಗಿ ತರಕದ್ದು, ಎಂಬ ಮಾಹಿತಿಯನ್ನು ಹಾಗೂ ಶಹಾಪೂರ ತಾಲೂಕು ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸ್ಥಾನಗಳನ್ನು ಈ ಕೆಳಗಿನಂತೆ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.

ಶಹಾಪುರ ತಾಲೂಕು ಗ್ರಾಮ ಪಂಚಾಯಿತಿಗಳಾದ ಚಾಮನಾಳ 22, ಉಕ್ಕಿನಾಳ 24, ವನದುರ್ಗ 18, ಹೊಸಕೇರಾ 20, ಕಕ್ಕೆಸಗೇರಾ 19, ಮದ್ದರಕಿ 18, ಮೂಡಬೂಳ 22, ಹೋತಪೇಠ 28, ಗೋಗಿ (ಕೆ) 23, ಗೋಗಿಪೇಠ 19, ಕನ್ಯಾಕೋಳ್ಳುರ 19, ಸಗರ 37, ರಸ್ತಾಪೂರ 24, ಹತ್ತಿಗೂಡರ 13, ಶಿರವಾಳ 17, ಅಣಬಿ 16, ನಾಗನಟಗಿ 27, ಕೊಳ್ಳುರ 14, ಬೀರನೂರ 14, ಹುರಸಗುಂಡಗಿ 12, ಇಬ್ರಾಹಿಂಪೂರ 15, ಚಟ್ನಳ್ಳಿ 19, ಖಾನಾಪೂರ 20, ಶಹಾಪೂರ ತಾಲೂಕು ಗ್ರಾಮ ಪಂಚಾಯತ ಒಟ್ಟು 460 ಸದಸ್ಯರು ಸ್ಥಾನ ಇರುತ್ತವೆ. ಚುನಾಯಿತ ಸದಸ್ಯರ ಸ್ಥಾನಗಳನ್ನು ಪ್ರಕಟಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku