Category: ಯಾದಗಿರಿ ಸುದ್ದಿ

News Acritical

  • ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ ಅರ್ಜಿ ಆಹ್ವಾನ

    ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ ಅರ್ಜಿ ಆಹ್ವಾನ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಹಾಗೂ ವಿವಿಧ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ವಾವಲಂಬನೆಗಾಗಿ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ 2026-27ನೇ  ಸಾಲಿನ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವೀರಶೈವ-ಲಿಂಗಾಯತ, ಡಿ. ದೇವರಾಜ ಅರಸು, ಮಡಿವಾಳ ಮಾಚಿದೇವ, ಮರಾಠ, ಸವಿತಾ ಸಮಾಜ, ಅಲೆಮಾರಿ/ಅರೆ ಅಲೆಮಾರಿ, ವಿಶ್ವಕರ್ಮ, ನಿಜಶರಣ ಅಂಬಿಗರ ಚೌಡಯ್ಯ, ಉಪ್ಪಾರ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಗಳು ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು,…

  • ಸೆ.17ರಂದು ಶ್ರೀ ವಿಶ್ವಕರ್ಮ ಜಯಂತಿ ಆಚರಣೆ: ಪೂರ್ವಭಾವಿ ಸಭೆ

    ಸೆ.17ರಂದು ಶ್ರೀ ವಿಶ್ವಕರ್ಮ ಜಯಂತಿ ಆಚರಣೆ: ಪೂರ್ವಭಾವಿ ಸಭೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಸೆಪ್ಟೆಂಬರ್ ೧೭ ರಂದು ನಗರದಲ್ಲಿ ‘ಶ್ರೀ ವಿಶ್ವಕರ್ಮ ಜಯಂತಿ’ಯನ್ನು ಅತ್ಯಂತ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಣೆಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರು/ಕಚೇರಿ ಸಹಾಯಕ (ಒ.ಎ) ಹುಲಿನಾಯಕ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸೆಪ್ಟೆಂಬರ್ ೧೭…

  • ಪರಿಸರ ಸ್ನೇಹಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ ಪೂಜಿಸಿ: ಮಲ್ಲಿಕಾರ್ಜುನ ಶಿರಗೋಳ

    ಪರಿಸರ ಸ್ನೇಹಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ ಪೂಜಿಸಿ: ಮಲ್ಲಿಕಾರ್ಜುನ ಶಿರಗೋಳ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜೀವಸಂಕುಲ ಉಳಿವಾಗಿ ಪ್ರತಿಯೊಬ್ಬರು ಪರಿಸರದ ಕಾಳಜಿವಹಿಸಬೇಕಿದೆ.ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿ ಪರಿಸರದ ಹೀತ ಕಾಪಾಡಬೇಕೆಂದು ಶಶಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಶಿರಗೋಳ ಅವರು ಕಿವಿಮಾತು ಹೇಳಿದ್ದಾರೆ. ಅವರು ಬುಧವಾರ ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಕಾಲೇಜು ನಲ್ಲಿ ವಿಜಯ ವಿಠ್ಠಲ ಸೇವಾ ಸಂಸ್ಥೆ ಹಾಗೂ ಶಶಿ ಚಾರಿಟೇಬಲ್ ಟ್ರಸ್ಟ್ ಲಿಂಗೇರಿ ಕೋನಪ್ಪ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಂಡ…

  • ಯಾದಗಿರಿ ಮಾರ್ಗದಲ್ಲಿ ವಂದೇ ಭಾರತ ಸ್ಲೀಪರ್ ರೈಲು ಸಂಚಾರಕ್ಕೆ ಕರವೇ ಆಗ್ರಹ

    ಯಾದಗಿರಿ ಮಾರ್ಗದಲ್ಲಿ ವಂದೇ ಭಾರತ ಸ್ಲೀಪರ್ ರೈಲು ಸಂಚಾರಕ್ಕೆ ಕರವೇ ಆಗ್ರಹ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿರುವ ಬೆಂಗಳೂರು-ಮುAಬೈ ವಂದೇ ಭಾರತ್ ಸ್ಲೀಪರ್ ಎಸಿ ರೈಲನ್ನು ಗುಂತಕಲ್, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಮಾರ್ಗದಲ್ಲೇ ಕಡ್ಡಾಯವಾಗಿ ಓಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಘಟಕವು ದಕ್ಷಿಣ ಮಧ್ಯ ರೈಲ್ವೆ ವಲಯದ ಸಿಕಂದರಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್‌ಎಂ) ಪ್ರಬಲ ಆಗ್ರಹ ಮಂಡಿಸಿದೆ. ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ಡಿಆರ್‌ಎಂ ಡಾ. ಆರ್. ಗೋಪಾಲಕೃಷ್ಣನ್ ಅವರಿಗೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅವರ ನೇತೃತ್ವದ…

  • ಜನರಿಗೆ ನ್ಯಾಯ ಒದಗಿಸುವುದು ಬಹಳ ಮುಖ್ಯ: ಸಿಎಂ ಡಿ.ಕೆ. ಶಿವಕುಮಾರ್

    ಜನರಿಗೆ ನ್ಯಾಯ ಒದಗಿಸುವುದು ಬಹಳ ಮುಖ್ಯ: ಸಿಎಂ ಡಿ.ಕೆ. ಶಿವಕುಮಾರ್

    ಸುದ್ದಿ ಬೆಳಕು ವಾರ್ತೆ ಬೆಂಗಳೂರು : “ಜನಸಾಮಾನ್ಯರು ಸರ್ಕಾರಿ ಕಚೇರಿಗಳು ಅಥವಾ ನ್ಯಾಯಾಲಯದ ಕದ ಕಟ್ಟಿದಾಗ ದೇವರನ್ನೇ ಕೇಳುತ್ತಿದ್ದೇವೆ ಎಂಬ ಮನೋಭಾವವಿರುತ್ತದೆ. ಜನರಿಗೆ ನ್ಯಾಯ ಒದಗಿಸುವುದು ಬಹಳ ಮುಖ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಭಾನುವಾರ ನಡೆದ ‘ದಕ್ಷಿಣ ವಲಯದ ಕಾನ್ಸುಲೇಷನ್ ಆಫ್ ಸ್ಟಾಕ್ ಸಾಕ್ಷಿಗಳ ಸುಧಾರಣಾ ಸಮಿತಿ 2026’ರ ಸಮಾರೋಪ ಕಾರ್ಯಕ್ರಮವನ್ನು ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು. ಸ್ಟಾಕ್ ವಿಟ್ನೆಸ್ ರಿಫಾರ್ಮ್ಸ್ಫ್ ಕಮಿಟಿ ಅಗತ್ಯತೆಯ ಬಗ್ಗೆ…

  • ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ನಾಗರಾಜ್ ಭಾಸ್ಕರ್ ಆಯ್ಕೆ

    ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ನಾಗರಾಜ್ ಭಾಸ್ಕರ್ ಆಯ್ಕೆ

    ಸುದ್ದಿ ಬೆಳಕು ವಾರ್ತೆ ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಣ ವಿಭಾಗದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡಲಾಗುವ *“ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ”*ಗೆ ಹತ್ತಿಕುಣಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ನಾಗರಾಜ್ ಭಾಸ್ಕರ್ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಸೆಪ್ಟೆಂಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಭಾರತ್ ಜೋಡೋ ಸಭಾಂಗಣದಲ್ಲಿ ನಡೆಯಿತು. ಗಣ್ಯರು ಹಾಗೂ ಶಿಕ್ಷಣ ಕ್ಷೇತ್ರದ ಪ್ರಮುಖರ ಸಮ್ಮುಖದಲ್ಲಿ ನಾಗರಾಜ ಭಾಸ್ಕರ…

  • ಯಾದಗಿರಿ ಬರ ಪಟ್ಟಿಯಲ್ಲಿ ತಾರತಮ್ಯ ಆರೋಪ: ಸರ್ಕಾರದ ವಿರುದ್ಧ ಮಾಗನೂರ ಕಿಡಿ

    ಯಾದಗಿರಿ ಬರ ಪಟ್ಟಿಯಲ್ಲಿ ತಾರತಮ್ಯ ಆರೋಪ: ಸರ್ಕಾರದ ವಿರುದ್ಧ ಮಾಗನೂರ ಕಿಡಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದರೂ, ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಕೇವಲ ಒಂದು ತಾಲೂಕನ್ನು ಮಾತ್ರ ಸೇರಿಸಿರುವುದು ಅನ್ಯಾಯ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಉಳಿದ ತಾಲೂಕುಗಳಲ್ಲಿಯೂ ಮಳೆ ಅಭಾವದಿಂದ ಬೆಳೆಗಳು ಹಾನಿಗೊಳಗಾಗಿವೆ. ಬಿತ್ತನೆ ಮಾಡಿದ ಬೆಳೆಗಳು ಒಣಗಿದ್ದು, ಸಾಲ ಮಾಡಿ ಕೃಷಿ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸರ್ಕಾರದ ಬರ ಪಟ್ಟಿಯಲ್ಲಿ ಜಿಲ್ಲೆಗೆ…

  • ಸುರಪುರ: ಪ್ರಜಾಸೇವೆಯಲ್ಲಿ ವಿಬಿ-ಗ್ರಾಮ್ ಜಿ ಗ್ಯಾರಂಟಿ ಕಾರ್ಡ್ ವಿತರಣೆ

    ಸುರಪುರ: ಪ್ರಜಾಸೇವೆಯಲ್ಲಿ ವಿಬಿ-ಗ್ರಾಮ್ ಜಿ ಗ್ಯಾರಂಟಿ ಕಾರ್ಡ್ ವಿತರಣೆ

    ಸುದ್ದಿ ಬೆಳಕು ವಾರ್ತೆ ಸುರಪುರ/ಯಾದಗಿರಿ ಸಾರ್ವಜನಿಕರ ಮನೆಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ‘ಪ್ರಜಾಸೇವಾ’ ಕಾರ್ಯಕ್ರಮದ ಅಂಗವಾಗಿ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಸುರಪುರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ಜನಸಂಪರ್ಕ ಮೇಳದಲ್ಲಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-GRAM G) ಯೋಜನೆಯ ಮಾಹಿತಿ ಶಿಕ್ಷಣ ಸಂವಹನ (IEC) ಕೇಂದ್ರದ ವಿಶೇಷ ಮಳಿಗೆಯನ್ನು ತೆರೆಯಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ…

  • ಯಾದಗಿರಿ ಬರ ಪಟ್ಟಿಗೆ ಉಳಿದ ತಾಲೂಕುಗಳ ಸೇರ್ಪಡೆ: ಶಾಸಕ ತುನ್ನೂರ ಭರವಸೆ

    ಯಾದಗಿರಿ ಬರ ಪಟ್ಟಿಗೆ ಉಳಿದ ತಾಲೂಕುಗಳ ಸೇರ್ಪಡೆ: ಶಾಸಕ ತುನ್ನೂರ ಭರವಸೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಸರ್ಕಾರದ ಬರ ಘೋಷಣೆಯ ನಿರ್ಧಾರದ ಬಗ್ಗೆ ರೈತರು ಯಾವದೇ ಆತಂಕ್ಕಕ್ಕೆ ಒಳಗಾಗಬಾರದು. ಮುಂದಿನ ೮-೧೦ ದಿನದಲ್ಲಿ ಬಿಟ್ಟು ಹೋಗಿರುವ ಇನ್ನುಳಿದ ತಾಲ್ಲೂಕಗಳನ್ನು ಬರ ಪಟ್ಟಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಕಂದಾಯ ಸಚಿವರಾದ ಜಿ.ಪರಮೇಶ್ವರ ಅವರು ನೀಡಿದ್ದು, ಹಿಂದಿನ ಪಟ್ಟಿಯಲ್ಲಿ ಕೈಬಿಟ್ಟ ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಲಿವೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದ್ದಾರೆ. ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಶಾಸಕರು, ಸೆ.೪ ಶುಕ್ರವಾರ ಕಂದಾಯ ಸಚಿವ…

  • ಬರ ಪಟ್ಟಿಯಲ್ಲಿ ಯಾದಗಿರಿ ತಾಲೂಕುಗಳಿಗೆ ಮತ್ತೆ ನಿರಾಸೆ: ಸಾಹುಕಾರ ಆಕ್ರೋಶ

    ಬರ ಪಟ್ಟಿಯಲ್ಲಿ ಯಾದಗಿರಿ ತಾಲೂಕುಗಳಿಗೆ ಮತ್ತೆ ನಿರಾಸೆ: ಸಾಹುಕಾರ ಆಕ್ರೋಶ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಮಳೆ ಕೊರತೆಯಿಂದ ಯಾದಗಿರಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಮೊದಲ ಪಟ್ಟಿಯಲ್ಲಿ ಶಹಾಪುರ ತಾಲೂಕು ಮಾತ್ರ ಘೋಷಣೆಯಾಗಿದ್ದು, ಯಾದಗಿರಿ, ವಡಗೇರಾ, ಗುರುಮಿಠಕಲ್, ಸುರಪುರ ಹಾಗೂ ಹುಣಸಗಿ ತಾಲೂಕುಗಳಿಗೆ ಸ್ಥಾನ ನೀಡದಿರುವುದು ಖಂಡನೀಯ. ಇದೀಗ ಬಿಡುಗಡೆಯಾಗಿರುವ ಎರಡನೇ ಪಟ್ಟಿಯಲ್ಲೂ ಈ ತಾಲೂಕುಗಳನ್ನು ಕಡೆಗಣಿಸಿರುವುದು ಸರ್ಕಾರದ ರೈತಪರ ಕಾಳಜಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಬಿಜೆಪಿ ಯುವಮೋರ್ಚಾ ಯಾದಗಿರಿ ಜಿಲ್ಲಾಧ್ಯಕ್ಷ ಶ್ರೀಧರ…

↑
Suddi Belaku