
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮೌಲ್ಯವಿದೆ, ಸಾಕ್ಷರತೆಯಿಂದ ಮಾತ್ರ ನಾವೇಲ್ಲರೂ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ, ಇಲ್ಲಿರುವ ಗ್ರಂಥಾಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ, ಗ್ರಾಮದ ವಿಧ್ಯಾರ್ಥಿಗಳು ಅದರ ಲಾಭ ಪಡೆದುಕೊಳ್ಳಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಸಲಹೆ ನೀಡಿದರು.
ರಾಮಸಮುದ್ರ ಗ್ರಾಮದಲ್ಲಿ ತಾ.ಪಂನಿAದ 25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗ್ರಂಥಾಲಯಕ್ಕೆ ಭೇಟಿ ನೀಡಿದ ಶಾಸಕರು, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗಿ ಅವರು ಗ್ರಂಥಾಲಯದ ಎಲ್ಲಾ ಮಾಹಿತಿಯನ್ನು ಶಾಸಕರಿಗೆ ನೀಡಿದರು.
ಅಲ್ಲಿನ ಸೌಲಭ್ಯಗಳ ಮಾಹಿತಿ ಪಡೆದು, ಗ್ರಂಥ ಪಾಲಕರು ಕೂಡ ವಿಧ್ಯಾರ್ಥಿಗಳ ಬೋಧನೆಗೆ ಅನುಕೂಲತೆ ಮಾಡಿ ಕೊಡಿ ಎಂದು ಸೂಚಿಸಿದರು.
ಪ್ರಸಕ್ತ ದಿನಗಳಲ್ಲಿ ನಾವು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆಗಳನ್ನು ಕಾಣುತ್ತಿದ್ದೇವೆ, ವಿಧ್ಯಾರ್ಥಿಗಳು ತಂದೆ-ತಾಯಿ, ಗುರುಗಳ ಆಶಯದಂತೆ ಉನ್ನತ ಗುರಿ, ಸಂಕಲ್ಪ ಮಾಡಿ ಪರಿಶ್ರಮದಿಂದ ಅಭ್ಯಾಸ ಮಾಡಿ, ಗುರಿ ತಲುಪಿ ಎಂದು ಅಲ್ಲಿ ಉಪಸ್ಥಿತರಿದ್ದ ವಿಧ್ಯಾರ್ಥಿಗಳಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪರಶುರಾಮ, ಇಂಜಿನಿಯರ್ ಹಣಮಂತ ಬಳಿಚಕ್ರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರೇಣುಕಾ, ಮುಖಂಡರಾದ ನಾಗಣ್ಣಗೌಡ ಹಳಿಗೇರಾ, ಬಾಸ್ಕರ್, ಹಣಮಂತ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Leave a Reply