by
Category: ರಾಯಚೂರು

ರಾಯಚೂರು ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆ ಕುರಿತು ವಿಶೇಷ ಉಪನ್ಯಾಸ
ಸುದ್ದಿ ಬೆಳಕು ವಾರ್ತೆ ರಾಯಚೂರು : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರಾಯಚೂರಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನವೆಂಬರ್ 2ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಲ್.ವಿ.ಡಿ. ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಕರಭರಿ ಅವರು “Importance of Spoken English and Job Opportunities” ವಿಷಯದ ಕುರಿತು ಉಪನ್ಯಾಸ ನೀಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನ ಹಾಗೂ ಸಂವಹನ…

ರಾಯಚೂರಿನಲ್ಲಿ ಫ್ಲ್ಯಾಶ್ಮಾಬ್, ಬೀದಿ ನಾಟಕದ ಮೂಲಕ ಎಚ್ಐವಿ–ಏಡ್ಸ್ ಜಾಗೃತಿ
ಸುದ್ದಿ ಬೆಳಕು ವಾರ್ತೆ ರಾಯಚೂರು : “ಎಚ್ಐವಿ ಸೋಂಕು ಹರಡದಿರಲಿ–ಬಾಳು ಬಂಗಾರವಾಗಲಿ” ಎಂಬ ಘೋಷವಾಕ್ಯದಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಹಾಗೂ ರೆಡ್ ರಿಬ್ಬನ್ ಕ್ಲಬ್ (ಆರ್ಆರ್ಸಿ) ಘಟಕಗಳ ವತಿಯಿಂದ ಸೋಮವಾರ ವಿವಿಧೆಡೆ ಫ್ಲ್ಯಾಶ್ಮಾಬ್ ಹಾಗೂ ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಎಚ್ಐವಿ–ಏಡ್ಸ್ ಕುರಿತು ಜಾಗೃತಿ ಮೂಡಿಸಲಾಯಿತು. ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಸಂತೋಷಕುಮಾರ ರೇವೂರ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಎನ್ಎಸ್ಎಸ್ ಹಾಗೂ ರೆಡ್…
by

ರಾಯಚೂರಿನಲ್ಲಿ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಬಳಕೆಗೆ ಜಾಗೃತಿ
ಸುದ್ದಿ ಬೆಳಕು ವಾರ್ತೆ ರಾಯಚೂರು : ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಹಾಗೂ ವೆಂಡಿಂಗ್ ಮೆಷಿನ್ ಬಳಕೆಯ ಕುರಿತು ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ‘ಗರ್ಭಕಂಠದ ಕ್ಯಾನ್ಸರ್–ಕ್ಯಾನ್ಸರ್ ಮುಕ್ತ ಮಹಿಳೆ–ಪ್ಲಾಸ್ಟಿಕ್ ಮುಕ್ತ ಪರಿಸರ’ ಎಂಬ ವಿಷಯದ ಕುರಿತು ಅರಿವು ಮೂಡಿಸಲಾಯಿತು. ವಿದ್ಯಾರ್ಥಿನಿಯರ ಬಳಕೆಗಾಗಿ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಹಾಗೂ ವೆಂಡಿಂಗ್ ಮೆಷಿನ್ ಅನ್ನು ಉಚಿತವಾಗಿ ನೀಡಲಾಗಿದ್ದು, ಅವುಗಳ ಬಳಕೆಯ ಕುರಿತು ಮಾಹಿತಿ ನೀಡಲಾಯಿತು.…
by

ವಿದ್ಯಾರ್ಥಿ ಜೀವನವೇ ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿ: ಡಾ. ಎ. ಚನ್ನಪ್ಪ
ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಆತ್ಮೀಯ ಸ್ವಾಗತ; ವಿವಿಧ ಕಾರ್ಯಚಟುವಟಿಕೆಗಳಿಗೆ ಚಾಲನೆ ಸುದ್ದಿ ಬೆಳಕು ವಾರ್ತೆ ರಾಯಚೂರು : ವಿದ್ಯಾರ್ಥಿ ಜೀವನವು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿನಿಯರು ಈ ಹಂತವನ್ನು ಸದುಪಯೋಗಪಡಿಸಿಕೊಂಡು ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ಡಾ. ಎ. ಚನ್ನಪ್ಪ, ಕೆಎಎಸ್ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ 2026–27ನೇ ಸಾಲಿನ ವಿವಿಧ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಬಿ.ಎ., ಬಿ.ಕಾಂ., ಬಿ.ಎಸ್ಸಿ.…
by

ರಾಯಚೂರಿನಲ್ಲಿ ‘ನಶಾ ಮುಕ್ತ್ ಯುವಾ ಫಾರ್ ವಿಕಸಿತ ಭಾರತ್’ ಅಭಿಯಾನಕ್ಕೆ ಚಾಲನೆ
ಸುದ್ದಿ ಬೆಳಕು ವಾರ್ತೆ ರಾಯಚೂರು : ಭಾರತ ಸರಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆಯ ಮೈ ಭಾರತ್ – ಎನ್ಎಸ್ಎಸ್ ನಿರ್ದೇಶನಾಲಯದ ವತಿಯಿಂದ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಶಾ ಮುಕ್ತ್ ಯುವಾ ಫಾರ್ ವಿಕ್ಸಿತ್ ಭಾರತ್ ಸಂಕಲ್ಪ ಅಭಿಯಾನದ ಅಂಗವಾಗಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಆಯೋಜಿಸಿದ್ದ ಸದರಿ ಕಾರ್ಯಮವನ್ನು ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ ಡಾ. ಸತೀಶ್, ತಾಲೂಕಾ ಆರೋಗ್ಯಾಧಿಕಾರಿ ಇವರು…
by

ಓಜೋನ್ ಪದರ ರಕ್ಷಣೆ ಮಾನವ ಆರೋಗ್ಯಕ್ಕೂ ಅಗತ್ಯ: ಡಾ. ಪುಷ್ಪಾ
ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವ ಓಜೋನ್ ದಿನಾಚರಣೆ ಸುದ್ದಿ ಬೆಳಕು ವಾರ್ತೆ ರಾಯಚೂರು : ಓಜೋನ್ ಪದರವು ಸೂರ್ಯನಿಂದ ಭೂಮಿಗೆ ಆಗಮಿಸುವ ಹಾನಿಕಾರಕ ನೇರಳಾತೀತ ಕಿರಣಗಳನ್ನು ಹೀರಿಕೊಂಡು ಜೀವಜಗತ್ತನ್ನು ರಕ್ಷಿಸುವ ಪ್ರಮುಖ ನೈಸರ್ಗಿಕ ಕವಚವಾಗಿದೆ. ಓಜೋನ್ ಪದರದ ರಕ್ಷಣೆ ಪರಿಸರದ ಜತೆಗೆ ಮಾನವ ಆರೋಗ್ಯದ ಸುರಕ್ಷತೆಗೂ ನೇರವಾಗಿ ಸಂಬಂಧಿಸಿದೆ ಎಂದು ಸಿಂಧನೂರು ಸರ್ಕಾರಿ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪುಷ್ಪಾ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ…
by

ರಾಯಚೂರು ಮಹಿಳಾ ಕಾಲೇಜಿನಲ್ಲಿ ಸಂಶೋಧನಾ ನೈತಿಕತೆ ಉಪನ್ಯಾಸ
ಸುದ್ದಿ ಬೆಳಕು ವಾರ್ತೆ ರಾಯಚೂರು : “ಸಂಶೋಧನಾ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಸ್ವಂತಿಕೆ, ಪಾರದರ್ಶಕತೆ ಹಾಗೂ ಜವಾಬ್ದಾರಿ ಅತ್ಯಂತ ಮೂಲಭೂತ ಮೌಲ್ಯಗಳಾಗಿವೆ. ಸೂಕ್ತ ಆಕರ ಉಲ್ಲೇಖವಿಲ್ಲದೆ ಇತರರ ಮಾಹಿತಿಯನ್ನು ಬಳಸುವುದು (ಪ್ಲೆಜಿಯರಿಸಂ) ಹಾಗೂ ಅಂಕಿ-ಅಂಶಗಳನ್ನು ತಿರುಚುವುದು (ಡೇಟಾ ಫಾಲ್ಸಿಫಿಕೇಶನ್) ನೈತಿಕ ಅಪರಾಧವಾಗಿದ್ದು, ಇದು ಸಂಶೋಧನೆಯ ವಿಶ್ವಾಸಾರ್ಹತೆಯನ್ನೇ ಕುಗ್ಗಿಸುತ್ತದೆ,” ಎಂದು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ…
by

ರಾಯಚೂರಿನಲ್ಲಿ ವಿದ್ಯಾರ್ಥಿನಿಯರಿಗೆ ಎಚ್ಐವಿ ಏಡ್ಸ್ ಜಾಗೃತಿ ಕಾರ್ಯಕ್ರಮ
ಸುದ್ದಿ ಬೆಳಕು ವಾರ್ತೆ ರಾಯಚೂರು : ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಜಂಟಿಯಾಗಿ ಹೆಚ್ಐವಿ ಏಡ್ಸ್ ಮತ್ತು ಸ್ವಯಂ ಪ್ರೇರಿತ ರಕ್ತದಾನದ ಕುರಿತು ವಿದ್ಯಾರ್ಥಿನಿಯರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ವತಿಯಿಂದ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ – 2026 ರ ಅಡಿಯಲ್ಲಿ…
by

ರಾಯಚೂರಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ, ಬೀಜದುಂಡೆ ತಯಾರಿಕೆ ಕಾರ್ಯಾಗಾರ
ಸುದ್ದಿ ಬೆಳಕು ವಾರ್ತೆ ರಾಯಚೂರು : “ಧಾರ್ಮಿಕ ಆಚರಣೆಗಳು ಪರಿಸರಕ್ಕೆ ಪೂರಕವಾಗಿರಬೇಕೇ ಹೊರತು ಪ್ರಕೃತಿ ವಿಕೋಪಕ್ಕೆ ದಾರಿಯಾಗಬಾರದು. ಮಣ್ಣಿನಿಂದ ತಯಾರಿಸಿದ ನೈಸರ್ಗಿಕ ಗಣೇಶ ಮೂರ್ತಿಗಳನ್ನು ಪೂಜಿಸುವುದರಿಂದ ಜಲಮಾಲಿನ್ಯ ತಡೆಗಟ್ಟಲು ಸಾಧ್ಯ,” ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ ತಿಳಿಸಿದರು. ಕಾಲೇಜಿನ ಇಕೋ-ಕ್ಲಬ್ (Eco-Club) ಹಾಗೂ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ “ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿಕೆ ಹಾಗೂ ಬೀಜದುಂಡೆಗಳ…
by

ರಾಯಚೂರು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ
ಸುದ್ದಿ ಬೆಳಕು ವಾರ್ತೆ ರಾಯಚೂರು : ಜ್ಞಾನಾರ್ಜನೆಯು ಕೇವಲ ಪಠ್ಯಪುಸ್ತಕ ಹಾಗೂ ತರಗತಿ ಕೊಠಡಿಗಳಿಗೆ ಸೀಮಿತವಾಗಿರದೆ, ಸಮಕಾಲೀನ ತಂತ್ರಜ್ಞಾನ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ವಿಸ್ತಾರಗೊಳ್ಳಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಅಡಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ವಿಶೇಷ ಉಪನ್ಯಾಸ ಸರಣಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿನಿಯರು ಇಂತಹ ವಿಶೇಷ ಉಪನ್ಯಾಸಗಳ ಸದುಪಯೋಗ ಪಡೆದುಕೊಂಡು…
by















