ಯಾದಗಿರಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ: ಮಹೇಶರೆಡ್ಡಿ ಮುದ್ನಾಳ ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಮಳೆ ಇಲ್ಲದೇ ಬಿತ್ತಿದ ಬೆಳೆಗಳು ನಾಶವಾಗಿ ರೈತರು ಭಾರಿ ಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಯಾದಗಿರಿ ತಾಲೂಕವನ್ನು ಬರಗಾಲ ಘೋಷಣೆ ಮಾಡದ ಸರ್ಕಾರದ ಕ್ರಮವನ್ನು ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ ರೆಡ್ಡಿ ಮುದ್ದಾಳ ಖಂಡಿಸಿದ್ದಾರೆ. ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಚಟ್ಟಳ್ಳಿ ಗ್ರಾಮದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡಿ ತಾಲೂಕಿನಲ್ಲಿ ಲಕ್ಷಾಂತರ ಎಕರೆ ಭೂಮಿಯಲ್ಲಿ ಹೆಸರು, ಉದ್ದು, ಹತ್ತಿ, ತೊಗರಿ ಸೇರಿದಂತೆಯೇ ಇತರೇ ಬೆಳೆಗಳು ಮಳೆಯಿಲ್ಲದೇ ಒಣಗಿವೆ. ಸಾವಿರಾರು ರೈತರು ಸಾಲ, ಸೂಲ ಮಾಡಿ ಬೀತ್ತಿದ ಬೆಳೆ ಕೈಗೆ ಬರುತ್ತಿಲ್ಲವಾದ್ದರಿಂದ ಚಿಂತೆಯ ಲ್ಲಿದ್ದಾರೆ. ಮಾಡಿದ ಸಾಲ ಕಟ್ಟಲು ಆಗದೇ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಇಷ್ಟೇಲ್ಲ ನೈಜ ಸ್ಥಿತಿ ಯಾದಗಿರಿ ವಿಧಾನ ಸಭಾ ಕ್ಷೇತ್ರ ಮತ್ತು ತಾಲೂಕಿನಲ್ಲಿ ಇದೆ. ಆದರೇ ರಾಜ್ಯ ಸರ್ಕಾರ ಮತ್ತು ಕಂದಾಯ ಸಚಿವರೂ ಆದ ಉಪಮುಖ್ಯ ಮಂತ್ರಿಗಳು ಯಾದಗಿರಿ ತಾಲೂಕು ಬರಗಾಲವೆಂದು ಘೋಷಣೆ ಮಾಡದೇ ಘೋರ ಅನ್ಯಾಯ ಮಾಡಿದೆ ಎಂದು ಅವರು ದೂರಿದ್ದಾರೆ. ಕೂಡಲೇ ಈ ತಾಲೂಕುವನ್ನು ಬರಗಾಲವೆಂದು ಘೋಷಣೆ ಮಾಡಬೇಕೆಂದು ಮಹೇಶರೆಡ್ಡಿ ಮುದ್ದಾಳ ಆಗ್ರಹಿಸಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku