ಯಾದಗಿರಿಯಲ್ಲಿ ಏಪ್ರಿಲ್ 16ರಂದು ನೇರ ಸಂದರ್ಶನ – 25 ಹುದ್ದೆಗಳ ಭರ್ತಿ

Posted by

ಯಾದಗಿರಿ : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ 2026ರ ಏಪ್ರಿಲ್ 16 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ಬಸವರಾಜ ಅವರು ತಿಳಿಸಿದ್ದಾರೆ.

ಯಾದಗಿರಿ ಚೈತನ್ಯ ಇಂಡಿಯಾ ಫೀನ್ ಕ್ರೇಡಿಟ್ ಪ್ರೈ.ಲಿ, ಸ್ವತಂತ್ರ ಫೀಲ್ಡ್ ಆಫೀಸರ್ 25 ಹುದ್ದೆಗಳು ಖಾಲಿ ಇದ್ದು ಅರ್ಹತೆ ಪಿಯುಸಿ, ಐಟಿಐ, ಹೊಂದಿರಬೇಕು. ಯಾದಗಿರಿ, ಗುರುಮಠಕಲ್, ಸೈದಾಪೂರು, ಮುದೋಳ ಉದ್ಯೋಗ ಸ್ಥಳವಾಗಿದೆ. 20 ರಿಂದ 28 ವರ್ಷ ಒಳಗಿರಬೇಕು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬೇಕು, ಬೈಕ್ ಮತ್ತು ಡಿ.ಎಲ್.ಹೊಂದಿದವರಿಗೆ ಮೊದಲ ಆದ್ಯತೆ ಪಿ.ಎಫ್, ಇಎಸ್‌ಐ, ಉಚಿತ ವಸತಿ, ಅವಕಾಶ ವಂಚಿತ ನಿರುದ್ಯೋಗಿ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದೆ. ಈ ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್, ಬಯೋಡಾಟಾದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು, ಹಾಗೂ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ನೇರ ಸಂದರ್ಶನ ನಡೆಯುವ ಸ್ಥಳ ಯಾದಗಿರಿ ಚಿತ್ತಾಪೂರು ರಸ್ತೆ (ಮಿನಿ ವಿಧಾನ ಸೌಧ) ಜಿಲ್ಲಾಡಳಿತ ಭವನ, ಬಿ-ಬ್ಲಾಕ್ ರೂ.ನಂ.ಬಿ1, ಬಿ2 2ನೇ ಮಹಡಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದೂ.ಸಂ.08473253718, ಮೊ.ನಂ.9448566765ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku