ಕೂಲಿ ಕಾರ್ಮಿಕರು ಬೆಂಗಳೂರಿನಲ್ಲಿಯೇ ಪಡಿತರ ಚೀಟಿ ಇ-ಕೆವೈಸಿ ಮಾಡಿಸಿ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಈಗಾಗಲೇ ಜಿಲ್ಲೆಯಲ್ಲಿ ಭೀಕರ ಬರಗಾಲ ಉದ್ಭವಿಸಿದ್ದು, ಉದ್ಯೋಗ ಅರಸಿ ಬೆಂಗಳೂರು ಹಾಗೂ ಇತರ ನಗರಗಳಿಗೆ ವಲಸೆ ಹೋಗಿದ್ದು, ಅವರು ಅಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿ ಇ-ಕೆವೈಸಿ ಮಾಡಿಸಿ ಎಂದು ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಸಲಹೆ ನೀಡಿದರು,
ಇಂದು ನಗರದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಅಲ್ಲಿ ನೆರೆದಿದ್ದ ಜನರೊಂದಿಗೆ ಮಾತನಾಡಿದ ಅವರು, ನೀವೂ ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಇಲ್ಲಿಗೇಕೆ ಬಂದಿದ್ದೀರಿ, ನೀವೂ ನೆಲೆಸಿರುವ ಬೆಂಗಳೂರಿನ ವಿವಿಧ ವಾರ್ಡಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇ-ಕೆವೈಸಿ ಮಾಡಿಸಬಹುದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಸೇರುವುದರಿಂದ ಎಲ್ಲರ ಕೆಲಸ ಮಾಡಲು ಒಂದೇ ದಿನ ಮಾಡಲು ಆಗುವುದಿಲ್ಲ, ಇನ್ನೊಂದು ಕಡೆ ಸರ್ವರ್ ಸಮಸ್ಯೆಯಾಗುತ್ತಿದೆ, ಅದರಿಂದ ಇ-ಕೆವೈಸಿ ಮಾಡಿಸಲು ಆಗುವುದಿಲ್ಲ, ಆದಷ್ಟೂ ಬೇಗನೆ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.


ಪಡಿತರದಾರರೊಂದಿಗೆ ಚರ್ಚಿಸಿದ ಸೋಮಶೇಖರ, ನಿಮಗೆ ಸರಿಯಾಗಿ ತಿಂಗಳಿಗೆ ಪಡಿತರ ಧಾನ್ಯಗಳು ಸಿಗುತ್ತಿವೇಯೇ ಎಂದು ವಿಚಾರಿಸಿ, ನ್ಯಾಯಬೆಲೆ ಅಂಗಡಿ ಮಾಲಿಕರು ವಿತರಣೆ ಮಾಡಿರುವ ಆಹಾರ ಪದಾರ್ಥಗಳ ಅಂಕಿ-ಅAಶ ಹಾಗೂ ದಾಸ್ತಾನು ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಪಡಿತರದಾರರಿಗೆ ಪ್ರಾಮಾಣಿಕವಾಗಿ ಆಹಾರ ಪದಾರ್ಥಗಳನ್ನು ವಿತರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ನಿರೀಕ್ಷಕ ವಿಠಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *

↑
Suddi Belaku