ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ; ಪಂಚಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರAಟಿ ಯೋಜನೆಯ ಲಾಭ ಅರ್ಹರಿಗೆ ದೊರೆಯುವಂತೆ ನೋಡಿಕೊಳ್ಳಲು ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಶ್ರೇಣಿಕ್ ಕುಮಾರ್ ಧೋಕಾ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಪಂಚಗ್ಯಾರAಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆ ನಡೆಸಿದ ಅವರು ಪಂಚಗ್ಯಾರAಟಿ ಯೋಜನೆಯಲಾಭ ಅರ್ಹರಿಗೆ ದೊರೆಯಬೇಕು.ಅನರ್ಹ ಫಲಾನುಭವಿಗಳು ಇದರ ದುರುಪಯೋಗಪಡಿಸಿಕೊಳ್ಳದಂತೆ ನಿಗಾವಹಿಸಲು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಹಾಗೂ ಅನ್ಯಭಾಗ್ಯ ಯೋಜನೆ ಲಾಭ ಪಡೆಯುತ್ತಿದ್ದ ಫಲಾನುಭವಿಗಳು ಮೃತರಾದಲ್ಲಿ,ಅಂತಹವರ ಸಂಪೂರ್ಣ ಅಂಕಿ ಅಂಶಗಳನ್ನೊಳಗೊAಡ ಮಾಹಿತಿ ಕಲೆಹಾಕಿ ವರದಿ ಸಲ್ಲಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯ ಮಾಹಿತಿ ಇರುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.

ಗೃಹ ಜ್ಯೋತಿ ಯೋಜನೆಯ ಲಾಭ ಅನರ್ಹರು ಪಡೆಯದಂತೆ, ಕರ್ನಾಟಕದ ಫಲಾನುಭವಿಗಳು ಮಾತ್ರ ಇದರ ಸದುಪಯೋಗಪಡೆಯಲೆಂದು ಹಾಗೂ ಅವರ ಸಾಮಾಜಿಕ ಸ್ಥಿತಿಗತಿಗಳ ವಾಸ್ತವ,ಅಧಿಕೃತ ಮೀಟರ್ ಆರ್. ಆರ್ ನಂಬರ್ ಅರಿತುಕೊಳ್ಳಲು ಜೆಸ್ಕಾಂ ದಿಂದ ಸರ್ವೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ ಎಂದ ಅವರು ಸರ್ವೆಗಾಗಿ ಬಂದಾಗ ತಮ್ಮ ಅಧಿಕೃತ ಆಧಾರ್, ವೋಟರ್ ಐಡಿ, ಇನ್ಕಮ್ ಟ್ಯಾಕ್ಸ ಐಡಿ ಇತರೆ ಅವಶ್ಯಕ ಪುರಾವೆ ದಾಖಲೆಗಳನ್ನು ಸಲ್ಲಿಸಿ ಸಹಕರಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡುವುದಾಗಿ ಸಭೆಯ ಮೂಲಕ ತಿಳಿಸಿದರು.

ಅಧಿಕಾರಿಗಳು ಕೂಡ ಮೃತಪಟ್ಟವರ ಮರಣ ಪ್ರಮಾಣ ಪತ್ರ,ಆಯಾ ಬ್ಯಾಂಕ್ ಅಕೌಂಟ್ಗಳ ಮಾಹಿತಿ, ಅನರ್ಹರಿಂದ ರಿಕವರಿ ಸೇರಿದಂತೆ ಸಮಗ್ರ ಮಾಹಿತಿ ವರದಿ ಸಲ್ಲಿಸುವಂತೆ ಅವರು ಸೂಚಿಸಿ, ಜೆಸ್ಕಾಂ ಸರ್ವೆ ಕಾರ್ಯದ ಬಗ್ಗೆ ಗ್ರಾಮವಾರು ಡಂಗುರ ಇತರೆ ಮೂಲಗಳ ಮೂಲಕ ಅರಿವು ಮೂಡಿಸಲು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ ದೊರೆ, ಹಣಮಂತ ಕಾನಳ್ಳಿ, ಬಸವರಾಜ ಬಿಳ್ಹಾರ್, ಹಳ್ಳಪ್ಪ ಹವಾಲ್ದಾರ್, ಸ್ಯಾಮ್ಸನ್ ಮಾಳಿಕೇರಿ , ತಾಲೂಕು ಅಧ್ಯಕ್ಷರಾದ ಬಸವರಾಜಪ್ಪ ಬಾಗಲಿ,ಬೀರಲಿಂಗಪ್ಪ ಬಾದ್ಯಾಪುರ, ಕೃಷ್ಣ ಜಾಧವ್,ಗಾಂಜಾ ಮೈನುದ್ದೀನ್, ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ ಹಾಗೂ ಸದಸ್ಯರು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಗೂ ನೋಡಲ್ ಅಧಿಕಾರಿ ಶ್ರೀ ವಿಜಯಕುಮಾರ್ ಮಡ್ಡೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku