ಯಾದಗಿರಿ : ಜಿಲ್ಲೆಯ ವಡಗೇರಾ ಮತ್ತು ಯಾದಗಿರಿ ತಾಲೂಕಿನ ಹಳ್ಳಿಗಳ ರೈತರಿಗೆ ಸಕಾಲಕ್ಕೆ ನಿಗದಿತ ಏಳು ತಾಸು ಕರೆಂಟ್ ಒದಗಿಸುವ ಮೂಲಕ ಮಳೆಯಿಲ್ಲದ ಈ ವೇಳೆ ರೈತರ ಕಷ್ಟಕ್ಕೆ ಸ್ಪಂಧಿಸಬೇಕೆಂದು ರಾಜ್ಯ ಬಿಜೆಪಿ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಜೆಸ್ಕಾಂ ಅಧಿಕಾರಿಗಳಿಗೆ ಒತ್ತಾಯಿಸಿದರು.
ವಡೇಗಾರದಲ್ಲಿ ಬುಧವಾರ ರೈತರೊಂದಿಗೆ ಸಭೆ ನಡೆಸಿ ಅಲ್ಲಿಗೆಯೇ ಜೆಸ್ಕಾಂ ಅಧಿಕಾರಿಗಳನ್ನು ಕರೆಸಿ ಮಾತನಾಡಿದ ಅವರು, ಮಳೆ ಇಲ್ಲದೇ ಬಿತ್ತಿದ ಬೆಳೆಗಳು ಒಣಗುತ್ತಿವೆ. ಹತ್ತಿ ಸೇರಿದಂತೆಯೇ ವಿವಿಧ ಬೆಳೆಗಳಿಗೆ ತುರ್ತಾಗಿ ನೀರು ಬೇಕಾಗಿದೆ. ಹಳ್ಳಿಗಳಲ್ಲಿನ ರೈತರ ಸ್ಥಿತಿ ಗಂಭೀರವಾಗಿದೆ. ರೈತರಿಗೆ ಬೆಳೆಗಳಿಗೆ ನೀಡುವ ವಿದ್ಯುತ್ ಸಕಾಲ ಮತ್ತು ನಿಗದಿತ ಸಮಯದವರೆಗೂ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಕಾರಣ ಯಾವುದೇ ಕಾರಣಕ್ಕೂ ರೈತರಿಗೆ ಸತಾಯಿಸುವ ಕೆಲಸ ಮಾಡಬೇಡಿ, ಇನ್ನೂ ಟಿಸಿ ಸೇರಿದಂತೆಯೇ ಬೇಕಾದ ಅಗತ್ಯ ವಸ್ತುಗಳನ್ನು ಅವಶ್ಯಕತೆ ಇದ್ದಲ್ಲಿ ಪೂರೈಸುವ ವಿದ್ಯುತ್ ಸೌಲಭ್ಯ ಕಲ್ಪಿಸಬೇಕೆಂದು ಮುದ್ನಾಳ ಅವರು,ಅಧಿಕಾರಿಗಳಿಗೆ ಮನದಟ್ಟು ಮಾಡಿದರು.
ಈಗಂತೂ ಮಳೆ ಇಲ್ಲದ ಕಾರಣ ಕರೆಂಟ್ ಪದೆ,ಪದೆ ಹೋಗುತ್ತಿಲ್ಲ, ಹೀಗಾಗಿ ಏಳು ತಾಸು ಕರೆಂಟ್ ನೀಡುವುದಾಗಿ ಮತ್ತು ಸಮಸ್ಯೆ ಇದ್ದಲ್ಲಿ ಸ್ಪಂಧಿಸುವುದಾಗಿ ಜೆಸ್ಕಾಂ ಎಇಇ ಮಾರ್ಕೇಂಡೆಶ್ವರ ಅವರು ಈ ವೇಳೆ ಹೇಳಿದರು.
ವಡಗೇರಾ ಜೆಸ್ಕಾಂ ಅಧಿಕಾರಿ ಥಾಮಸ್ ಹಾಗೂ ಮುಖಂಡರಾದ ಸಿದ್ದಣ್ಣಗೌಡ ಕಾಡಂನೋರ, ರುದ್ರಗೌಡ, ಲಿಂಗಪ್ಪ ಹತ್ತಿಮನಿ, ಲಕ್ಷ್ಮೀಪುತ್ರ ಪಾಟೀಲ್, ಪರಶುರಾಂ ಕುತಕುಂದಾ ಇದ್ದರು.
Leave a Reply