ಪರಿಸರ ಸ್ನೇಹಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ ಪೂಜಿಸಿ: ಮಲ್ಲಿಕಾರ್ಜುನ ಶಿರಗೋಳ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜೀವಸಂಕುಲ ಉಳಿವಾಗಿ ಪ್ರತಿಯೊಬ್ಬರು ಪರಿಸರದ ಕಾಳಜಿವಹಿಸಬೇಕಿದೆ.ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿ ಪರಿಸರದ ಹೀತ ಕಾಪಾಡಬೇಕೆಂದು ಶಶಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಶಿರಗೋಳ ಅವರು ಕಿವಿಮಾತು ಹೇಳಿದ್ದಾರೆ.

ಅವರು ಬುಧವಾರ ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಕಾಲೇಜು ನಲ್ಲಿ ವಿಜಯ ವಿಠ್ಠಲ ಸೇವಾ ಸಂಸ್ಥೆ ಹಾಗೂ ಶಶಿ ಚಾರಿಟೇಬಲ್ ಟ್ರಸ್ಟ್ ಲಿಂಗೇರಿ ಕೋನಪ್ಪ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಂಡ ಮನೆ ಮನೆಗೂ ಗಣಪ ಕಾರ್ಯಕ್ರಮದ ಪರಿಸರ ಸ್ನೇಹಿ ಗಣೇಶ ವಿಗ್ರಹ ತೈಯಾರಿಕೆ ಪ್ರಾತ್ಯಕ್ಷತೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.ಪರಿಸರ ಹಾಗೂ ಆರೋಗ್ಯಕ್ಕೆ ಮಾರಕವಾಗುವ ಪಿಇಪಿ ಗಣೇಶ ಮೂರ್ತಿಗಳಿಂದ ನೀರು ಮಲಿನವಾಗಿ ಜೀವಸಂಕುಲಕ್ಕೆ ಕಂಟಕವಾಗಿ ಜಲಚರಗಳು ನಾಶವಾಗಲಿವೆ.ಹೀಗಾಗಿ ಮಾಲಿನ್ಯ ಮುಕ್ತ ಮಾಡಲು ಜಲಮೂಲಗಳನ್ನು ಸಂರಕ್ಷಿಸೋಣ ಎಂದರು. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೇಡಿಮಣ್ಣಿನ ಚಿಕ್ಕ ಗಣಪತಿ ಮೂರ್ತಿಗಳನ್ನು ಪೂಜಿ ಪರಿಸರ ಉಳಿಸೋಣ ಎಂದರು.

ಈ ವೇಳೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ಶಕುಂತಲಾ ಅವರು ಮಾತನಾಡಿ ಪ್ಲಾಸ್ಟರಚ ಆಫ್ ಪ್ಯಾರಿಸ್ ಗಣಪತಿ ಪ್ರತಿಷ್ಠಾಪನೆಯಿಂದ ಮೂರ್ತಿಯು ನೀರಿನಲ್ಲಿ ಕರಗುವುದಿಲ್ಲ ಹೀಗಾಗಿ ಪಿಇಓ ಗಣೇಶ ಪ್ರತಿಷ್ಠಾಪನೆ ಮಾಡದೆ ಜೇಡಿ ಮಣ್ಣಿನಿಂದ ತೈಯಾರಿಸಿದ ವಿಗ್ರಹಗಳ ತೈಯಾರಿ ಮಾಡಿ ಇಲ್ಲವೇ ಪರಿಸರ ಸ್ನೇಹಿ ಮಣ್ಣಿನ ಗಣಪನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿ ಪರಿಸರದ ಕಾಳಜಿವಹಿಸಬೇಕೆಂದರು.


ಕಲಾವಿದ ಹಣಮಂತ ಬಾಡದ್ ಅವರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತೈಯಾರು ಮಾಡುವ ವಿಧಾನ ತಿಳಿಸಿದರು.ಮನೆಯಲ್ಲಿ ಪರಿಸರ ಸ್ನೇಹಿ ಮಣ್ಣಿನಿಂದ ಗಣೇಶ ವಿಗ್ರಹಗಳನ್ನು ತೈಯಾರಿಸಿ ತಮ್ಮ ಮನೆಯಲ್ಲಿ ಮಣ್ಣಿನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುವ ಬಗ್ಗೆ ತಿಳಿಸಿದರು.ಪಿಓಪಿ ಗಣೇಶಗಳ ಬದಲು ಮಣ್ಣಿನ ಗಣಪತಿ ಪೂಜಿಸಿ ಪರಿಸರ ರಕ್ಷಣೆ ಮಾಡುವ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಶಶಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಗೌರವಾಧ್ಯಕ್ಷರಾದ ಹನುಮಂತಪ್ಪ ಶಿರಗೋಳ, ಲಿಂಗೇರಿ ಕೋನಪ್ಪ ಕಾಲೇಜನ ಪ್ರಾಂಶುಪಾಲರಾದ ಜೆ.ಎಂ.ವಿಶ್ವಕರ್ಮ, ವಿಜಯ ವಿಠ್ಠಲ ಸೇವಾ ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಕುಲಕರ್ಣಿ, ಶಿವರಾಜ ಕಟ್ಟಿಮನಿ, ಸಂಗೀತಾ ಪಡಶೆಟ್ಟಿ, ತನುಜಾ ಪಾಟೀಲ ಸೇರಿದಂತೆ ಅನೇಕರು ಇದ್ದರು.

You Might Also Like

Leave a Reply

Your email address will not be published. Required fields are marked *

Suddi Belaku