ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ ಅರ್ಜಿ ಆಹ್ವಾನ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಹಾಗೂ ವಿವಿಧ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ವಾವಲಂಬನೆಗಾಗಿ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ 2026-27ನೇ  ಸಾಲಿನ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವೀರಶೈವ-ಲಿಂಗಾಯತ, ಡಿ. ದೇವರಾಜ ಅರಸು, ಮಡಿವಾಳ ಮಾಚಿದೇವ, ಮರಾಠ, ಸವಿತಾ ಸಮಾಜ, ಅಲೆಮಾರಿ/ಅರೆ ಅಲೆಮಾರಿ, ವಿಶ್ವಕರ್ಮ, ನಿಜಶರಣ ಅಂಬಿಗರ ಚೌಡಯ್ಯ, ಉಪ್ಪಾರ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಗಳು ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ.

ಪ್ರಮುಖ ಯೋಜನೆಗಳ ವಿವರ:

  • ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ: ಪ್ರ‍್ಗ-3ಬಿ ವ್ಯಾಪ್ತಿಗೆ ಬರುವ ಸಮುದಾಯದವರಿಗೆ ಶೈಕ್ಷಣಿಕ ಸಾಲ, ವಿದೇಶ ವಿದ್ಯಾ ವಿಕಾಸ, ಜೀವಜಲ, ಕಾಯಕಕಿರಣ, ಸ್ವಾವಲಂಬಿ ಸಾರಥಿ ಹಾಗೂ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳು.. (ವೆಬ್‌ಸೈಟ್: kvldcl.karnataka.gov.in).

  • ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: ಪ್ರವರ್ಗ-1, 2ಎ, 3ಎ, 3ಬಿ (ಪ್ರತ್ಯೇಕ ನಿಗಮ ಹೊಂದಿರುವ ಸಮುದಾಯಗಳನ್ನು ಹೊರತುಪಡಿಸಿ) ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ವೈಯಕ್ತಿಕ ಸಾಲ, ಗಂಗಾ ಕಲ್ಯಾಣ ನೀರಾವರಿ, ಅರಿವು, ವಿದೇಶಿ ವ್ಯಾಸಂಗ, ಸ್ವಾವಲಂಬಿ ಸಾರಥಿ ಹಾಗೂ ಹೊಲಿಗೆ ಯಂತ್ರ ವಿತರಣೆ. ರ‍್ಷಿಕ ಆದಾಯ ಮಿತಿ ಗ್ರಾಮೀಣರಿಗೆ ₹98,000 ಹಾಗೂ ನಗರವಾಸಿಗಳಿಗೆ ₹1,20,000 ಒಳಗೆ ಇರಬೇಕು. (ವೆಬ್‌ಸೈಟ್: dbcdc.karnataka.gov.in).

  • ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ಅರಿವು ಶೈಕ್ಷಣಿಕ ಸಾಲ ಹಾಗೂ ಪ್ರಸಕ್ತ ಸಾಲಿನ ಹೊಸ ಯೋಜನೆಯಾದ ‘ಆಧುನಿಕ ಲಾಂಡ್ರಿ’ ಘಟಕ ಸ್ಥಾಪನೆಗೆ ನೆರವು. (ವೆಬ್‌ಸೈಟ್: kmmd.karnataka.gov.in).

  • ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ: ಶ್ರೀ ಶಹಾಜಿರಾಜೇ ಸಮೃದ್ಧಿ ಯೋಜನೆ, ಜೀಜಾವು ಜಲಭಾಗ್ಯ (ಗಂಗಾ ಕಲ್ಯಾಣ – ಕನಿಷ್ಠ ೨ ಎಕರೆ ಜಮೀನು ಕಡ್ಡಾಯ), ಅರಿವು ಶೈಕ್ಷಣಿಕ ಸಾಲ, ಮರಾಠ ಮಿಲಿಟರಿ ಹೋಟೆಲ್, ಸ್ವಾವಲಂಬಿ ಸಾರಥಿ, ರಾಜಶ್ರೀ ಶಾಹು ಮಹಾರಾಜ ವಿದೇಶಿ ಸಾಲ ಹಾಗೂ ಹೊಲಿಗೆ ಯಂತ್ರ ಯೋಜನೆ. (ವೆಬ್‌ಸೈಟ್: kmcdc.karnataka.gov.in).

  • ಸವಿತಾ ಸಮಾಜ ಅಭಿವೃದ್ಧಿ ನಿಗಮ: ಸ್ವಯಂ ಉದ್ಯೋಗ ನೇರ ಸಾಲ, ಅರಿವು ಶೈಕ್ಷಣಿಕ ಸಾಲ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳ ಉನ್ನತ ವ್ಯಾಸಂಗ ಸಾಲ ಯೋಜನೆಗಳು. (ವೆಬ್‌ಸೈಟ್: kssd.karnataka.gov.in).

  • ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮ: ಸ್ವಯಂ ಉದ್ಯೋಗ ನೇರ ಸಾಲ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ ಹಾಗೂ ಅರಿವು ಸಾಲ ಯೋಜನೆ. (ವೆಬ್‌ಸೈಟ್: upparadevelopment.karnataka.gov.in).

  • ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: ಪಂಚವೃತ್ತಿ ಅಭಿವೃದ್ಧಿ ಆರ್ಥಿಕ ನೆರವು, ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ವಿದೇಶಿ ವ್ಯಾಸಂಗ (ಆದಾಯ ಮಿತಿ ₹15 ಲಕ್ಷದೊಳಗೆ), ಹೊಲಿಗೆ ಯಂತ್ರ/ಝಿಗ್-ಝಾಗ್ ಯೋಜನೆ. ಕಳೆದ 2024-25 ಹಾಗೂ 2025-26ರಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದವರನ್ನು ನೇರವಾಗಿ ಪ್ರಸ್ತುತ ಸಾಲಿಗೆ ಪರಿಗಣಿಸಲಾಗುವುದು. (ವೆಬ್‌ಸೈಟ್: kvcldcl.karnataka.gov.in).

  • ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ: ಪ್ರವರ್ಗ-1ರ 6(ಎ) ಯಿಂದ 6(ಎಕೆ) ವ್ಯಾಪ್ತಿಯ ಬೆಸ್ತ, ಅಂಬಿಗ, ಗಂಗಾಮತ, ಕಬ್ಬಲಿಗ, ಕೋಲಿ ಸಮುದಾಯದವರಿಗೆ ಅರಿವು ಸಾಲ, ವಿದೇಶಿ ಶಿಕ್ಷಣ ಹಾಗೂ ಸ್ವಯಂ ಉದ್ಯೋಗ ಯೋಜನೆಗಳು. (ವೆಬ್‌ಸೈಟ್: ambigaradevelopment.karnataka.gov.in).

  • ಉಪ್ಪಾರ ಅಭಿವೃದ್ಧಿ ನಿಗಮ: ಸ್ವಯಂ ಉದ್ಯೋಗ, ಅರಿವು, ವಿದೇಶಿ ವ್ಯಾಸಂಗ, ಸ್ವಾವಲಂಬಿ ಸಾರಥಿ ಹಾಗೂ ಶ್ರೀ ಭಗೀರಥ ಗಂಗಾ ಕಲ್ಯಾಣ ಯೋಜನೆ. (ವೆಬ್‌ಸೈಟ್: upparadevelopment.karnataka.gov.in).

  • ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮ: ಪ್ರವರ್ಗ-3ಎ ವ್ಯಾಪ್ತಿಯವರಿಗೆ ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ಶೈಕ್ಷಣಿಕ ಸಾಲ ಹಾಗೂ ಮುನ್ನಡೆ ಯೋಜನೆ. (ವೆಬ್‌ಸೈಟ್: kvcdc.karnataka.gov.in).

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕಡೆಯ ದಿನಾಂಕ:

ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in), ಗ್ರಾಮ ಒನ್, ಯಾದಗಿರಿ ಒನ್, ಕರ್ನಾಟಕ ಒನ್ ಅಥವಾ ಅಟಲ್-ಜಿ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಕೌಶಲ್ಯ ತರಬೇತಿ ಹಾಗೂ ಮುನ್ನಡೆ ಯೋಜನೆಗಳಿಗೆ kaushalkar.com ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು 30-09-2026 ಕೊನೆಯ ದಿನಾಂಕವಾಗಿದೆ (ಮರಾಠ ಅಭಿವೃದ್ಧಿ ನಿಗಮದ ಯೋಜನೆಗಳಿಗೆ 03-10-2026 ಕೊನೆಯ ದಿನ). ಎಲ್ಲಾ ನಿಗಮಗಳ ‘ಅರಿವು’ ಶೈಕ್ಷಣಿಕ ಸಾಲ ಯೋಜನೆಗಳಿಗೆ ಯಾವುದೇ ಗಡುವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ಯಾದಗಿರಿ ಮಿನಿ ವಿಧಾನಸೌಧದ 2ನೇ ಮಹಡಿಯಲ್ಲಿರುವ ನಿಗಮಗಳ ಜಿಲ್ಲಾ ಕಚೇರಿ (ದೂರವಾಣಿ: 08473-253746) ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku