ಖರ್ಗೆ ವೇದಿಕೆ ಶುದ್ಧೀಕರಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ರದ್ದತಿಗೆ ಆಗ್ರಹ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧಗೊಳಿಸುವುದನ್ನು ಖಂಡಿಸಿ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿರವರ ವಿರುದ್ದ ದುರುದ್ದೇಶಪೂರಿತ ಎಫ್ ಐಆರ್ ದಾಖಲಿಸಿದ ಉತ್ತರಾಖಂಡ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಶನಿವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ಶುನ್ನೂರ, ಕಳೆದ ತಿಂಗಳ ಅಗಸ್ಟ್ 8ನೇ ರಂದು ಉತ್ತರಾಖಂಡದ ಹಲದ್ವಾನಿ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ವಿರೋಧ ಪಕ್ಷದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಮನುವಾದದ ಮನಸ್ಥಿತಿಯವರು ಶುದ್ದಿಕರಣ ಮಾಡಿದ್ದು ಮತ್ತು ಈ ಘಟನೆಯನ್ನು ತೀವ್ರವಾಗಿ ವಿರೋಧಿಸಿದ ಲೋಕಸಭಾ ಪ್ರ ತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದನ್ನು ಖಂಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 80ವರ್ಷಗಳಾದರೂ ಇನ್ನೂ ಜಾತಿ ವ್ಯವಸ್ಥೆ ಜೀವಂಶವಿದೆ ಎಂಬುವುದಕ್ಕೇ ಈ ಘಟನೆಯೇ ಪ್ರಬಲ ಸಾಕ್ಷಿಯಾಗಿದೆ. ಪ್ರಜಾಪ್ರಭತ್ವ ರಾಷ್ಟ್ರದಲ್ಲಿ ಇಂತಹ ಘಟನೆಗಳಿಗೆ ಅವಕಾಶವಿಲ್ಲ. ಆದರೂ ಕೀಳು ಮನಸ್ಥಿತಿಯವರು ಇದನ್ನು ಮಾಡಿದ್ದಾರೆ. ಅಂತಹವರ ಕ್ರಮ ಜರುಗಿಸಬೇಕಾದ ಸರ್ಕಾರ. ಇದನ್ನು ವಿರೋಧಿಸಿ ರಾಹುಲ್ ಗಾಂಧಿ ಅವರ ಮೇಲೆ ದೂರು ದಾಖಲಿಸಿದ್ದು ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ಶಾಸಕರು ಕಿಡಿಕಾರಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ ಮಾತನಾಡಿ, ಈ ಘಟನೆಯನ್ನು ದೇಶದ ಸಮಸ್ತ ಪ್ರಜ್ಞಾವಂತವರು ಖಂಡಿಸಿದ್ದಾರೆ. ಆದರೂ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು. ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರಪ್ಪ ಬಿಳ್ಳಾರ ಮಾತನಾಡಿ, ರಾಹುಲ್ ಗಾಂಧಿ ಅವರ ವಿರುದ್ಧ ಹಾಕಲಾಗಿರುವ ಎಫ್ ಐಆರ್ ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಯುಡಾ ಅಧ್ಯಕ್ಷ ಬಾಬುರಾವ ಕಾಣ್ಣೂರ, ಪಕ್ಷದ ಮುಖಂಡರಾದ ಆದರ್ಶ ಯಲ್ಲಪ್ಪ, ಪರಶುರಾಂ ಚವ್ಹಾಣ, ಶಿವಕುಮಾರ ಹುಲಕಲ್, ನಾಗಣಗೌಡ ಹಳಿಗೇರಾ, ಶಿವರಾಜ ಬಾವೂರ,ಬಾಬುಗೌಡ ಮಾಚನೂರ, ಸುರೇಶಗೌಡ, ಶರಣು ಪಡಶೆಟ್ಟಿ, ಸುರೇಶ ಮಡ್ಡಿ, ಸಾಬಣ್ಣ ಕೆಂಗೂರಿ, ರಾಜಮೈನೊದ್ದಿನ್ ಮಿರ್ಚಿ, ಶಿವು ಕೊಲಿವಾಡ, ಮಹೇಶ ಕೊಲೂರು ಇತರರಿದ್ದರು.

Leave a Reply

Your email address will not be published. Required fields are marked *

↑
Suddi Belaku