
ಈ ವರ್ಷದ ಮುಂಗಾರು ಅವಧಿಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಮತ್ತೊಮ್ಮೆ ಭೀಕರ ಬರಗಾಲದ ಆತಂಕ ಎದುರಾಗಿದೆ.
** ಬರಲಿಲ್ಲ ಬರಲಿಲ್ಲ ಮಳೆರಾಯ ಬರಲಿಲ್ಲ ರೈತರಿಗೆ ಉಳಿಗಾಲವಿಲ್ಲ ಕಬ್ಬಾಳಿ ನೀನೊಲೆದು ಮುಂಗಾರು ಮಳೆ ಸುರಿಲು ಕಾಯದಿರೆ ಬದುಕೇ ಇಲ್ಲ ನನ್ನವ್ವ ಕಾಯದಿರೆ ಬದುಕಿ ಇಲ್ಲ.*
ಎನ್ನುವ ಮಳೆರಾಯನ ಹಾಡು ಸತ್ಯವಾದಂತಿದೆ ರೈತರ ಬದುಕು ಬಾರೋ ಮಳೆರಾಯ ಬಾರೋ ಎನ್ನುವಂತಾಗಿದೆ ಗಂಗೆಯನ್ನು ಧರೆಗಿಳಿಸಲು ರೈತರು ಎಲ್ಲಾ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು ಯಾವುದಕ್ಕೂ ಮಳೆರಾಯ ರೈತರ ಮೇಲೆ ಕರುಣೆ ತೋರಿಸದಿರುವುದು ಈ ವರ್ಷದ ರೈತರ ಭವಿಷ್ಯದ ಬದುಕಿಗೆ ಆತಂಕ ತಂದೊಡ್ಡಿದೆ.
ಹೋದ ವರ್ಷ ರಾಜ್ಯದ ಎಲ್ಲಾ ರೈತರು ಎಲ್ಲ ಬೆಳೆಗಳನ್ನು ಸಂಪೂರ್ಣವಾಗಿ ಬೆಳೆದು ಖುಷಿ ಉಮ್ಮಸ್ಸು ಉರುಪಿನಿಂದ ಈ ವರ್ಷ ಹೊಲಗಳನ್ನು ಹದ ಮಾಡಿ ಬಿತತಿ ಬೆಳೆಯಬೇಕೆನ್ನುವಷ್ಟರಲ್ಲಿ
ಮುಂಗಾರಿನ ಆರಂಭದಲ್ಲಿ ಮಳೆ ಚೆನ್ನಾಗಿ ಆಗಿದೆ ಎಂದು ರೈತ ಖುಷಿಯಿಂದ ಹೊಲಗಳನ್ನು ಬಿತ್ತನೆ ಮಾಡಿದ ನಂತರ ಮಳೆರಾಯ ದೂರವಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಜಗತ್ತಿಗೆ ಅನ್ನ ಹಾಕುವ ರೈತ ಈ ವರ್ಷ ಸಂಕಷ್ಟದಲ್ಲಿದ್ದು ಭವಿಷ್ಯದಲ್ಲಿ ಮಳೆ ಆಗುತ್ತದೆಯೋ ಇಲ್ಲವೋ ಎನ್ನುವ ಚಿಂತಾಗ್ರಾಸ ವಾತಾವರಣದಲ್ಲಿ ಬದುಕುವಂತಾಗಿದೆ. ರೈತರ ಭವಿಷ್ಯದ ಬದುಕಿಗೆ ಪ್ರಕೃತಿ ಕೂಡ ಮುನಿಸಿಕೊಂಡಿದ್ದು ಪ್ರಕೃತಿಯಿಂದ ಆಗುವ ಏರುಪೇರುಗಳೇ ಇವತ್ತಿನ ಈ ರೈತನ ದುಸ್ಥಿತಿಗೆ ಕಾರಣವಾಗುತ್ತಿದೆ ಎಂದು ಗೋಳಾಡುವಂಥಾಗಿದೆ.
ಎಂತದ್ದೇ ಕಷ್ಟ ಬಂದರೂ ಧೈರ್ಯದಿಂದ ಎದುರಿಸುತ್ತೇನೆ ಎನ್ನುವ ಬಲ ಹೊಂದಿರುವ ರೈತ ಮಳೆ ಒಂದು ಬಾರದಿದ್ದರೆ ರೈತ ಕುಗ್ಗುತ್ತಾನೆ ಎನ್ನುವುದಕ್ಕೆ ಈ ವರ್ಷದ ಬರಗಾಲದ ಮುನ್ಸೂಚನೆಯೇ ರೈತನ ಧೈರ್ಯ ಕುಂದುವಂತೆ ಮಾಡಿದೆ. ಈಗಾಗಲೇ ಸರ್ಕಾರಗಳು ಇಲಾಖೆಯ ಅಧಿಕಾರಿಗಳಿಗೂ ರೈತರಿಗೆ ಬರಿಗಾಲ ಎದುರಿಸಲು ಸಿದ್ಧರಾಗಿ ಎನ್ನುವ ಸೂಚನೆ ನೀಡಿದ್ದು ಈ ಸುದ್ದಿ ಕೇಳಿದ ರೈತರ ಬದುಕು ದುಸ್ಪೋಪ್ನ ವಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಎಂಥದ್ದೇ ಕಷ್ಟ ಬಂದರೂ ಧೈರ್ಯದಿಂದ ಎದುರಿಸಿ ಜಗತ್ತಿಗೆ ಅನ್ನ ಹಾಕುವ ರೈತನ ಬದುಕಿಗೆ ಕುತ್ತು ಬಂದಿರುವುದು ರೈತ ಕುಟುಂಬವನ್ನು ನಲಗುವಂತೆ ಮಾಡುತ್ತಿದೆ. ಬೆಳೆದ ಬೆಳೆಗಳಿಗೆ ಬೆಲೆ ಕಡಿಮೆಯಾದರೂ ಹೆಚ್ಚು ತಲೆಕೆಡಿಸಿಕೊಳ್ಳದ ರೈತ ನಾನು ಕಡಿಮೆ ಬೆಲೆಗೆ ಮಾರಿದರು ನನ್ನ ಹೆಸರಿನ ಮೇಲೆ ಸಾವಿರಾರು ಜನ ಊಟ ಮಾಡುತ್ತಾರೆ ಎಂಬ ಕರುಣೆಯಿಂದ ಬಂದಷ್ಟು ಬರಲಿ ಶಿವನ ದಯವಂದಿರಲಿ ಎನ್ನುವಂತೆ ಬಂದ ಕಾಳು ಕಡಿ ಬೆಳೆಗಳನ್ನು ಮಾರಿ ಮನೆಗೆ ಬರುತ್ತಾನೆ, ಆದರೆ ಬೆಳೆಗಳನ್ನು ಬೆಳೆಯಲು ಮಳೆಯೇ ಇಲ್ಲವೆಂದರೆ ರೈತನ ಬದುಕು ಹೆಂಗಾಗಬೇಡ ಎನ್ನುವ ಚಿಂತೆಯಲ್ಲಿ ಬದುಕು ಸಾಗಿಸುವಂತಹ ದುಸ್ಥಿತಿ ರೈತನಿಗಿ ಬಂದಿರುವುದು ರೈತನ ಧೈರ್ಯವನ್ನು ಕುಗ್ಗುವಂತೆ ಮಾಡಿದೆ.

ಪ್ರಾರಂಭದಲ್ಲಿ ಹುಮ್ಮಸ್ಸು ಉರುಪಿನಲ್ಲಿಯೇ ಹೆಸರು, ತೊಗರಿ, ಸೂರ್ಯಕಾಂತಿ ಉಳ್ಳಾಗಡ್ಡಿ ಹೀಗೆ ಆಯಾ ಭಾಗದ ಮುಂಗಾರಿ ಬೆಳೆಗಳನ್ನು ಬಿತ್ತಿದ ರೈತ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದ ರೈತ ಪ್ರಾರಂಭದಲ್ಲಿ ಬೆಳೆಗಳು ಚೆನ್ನಾಗಿ ಬಂದಿರುವುದನ್ನು ನೋಡಿ ತುಂಬಾ ಖುಷಿಪಟ್ಟಿದ್ದ ಆದರೆ ಬೆಳೆದ ಬೆಳೆಗಳಿಗೆ ಮಳೆರಾಯ ಆಸರಾಗುತ್ತಿಲ್ಲ ಎನ್ನುವ ಕೊರಗಿನಿಂದ ಬೆಳೆಗಳು ಸೊರಗಿದಂತೆ ರೈತನ ಬದುಕು ಸೊರಗುತ್ತಿದೆ ಹಾಗಾಗಿ ಬೆಳಗ್ಗೆಯಿಂದ ಸಂಜೆವರೆಗೂ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾನೆ ಆದರೆ ಮಳೆಯು ಮಾತ್ರ ರೈತನ ಗೋಳು ಕೇಳದಿರುವುದು ರೈತನಿಗೆ ಕೈ ಚೆಲ್ಲಿ ಕುಳಿತುಕೊಳ್ಳುವಂತ ಪರಿಸ್ಥಿತಿ ಬಂದು ಒದಗಿರುವುದು ರೈತನ ಗೋಳಿಗೆ ಕಾರಣವಾಗುತ್ತಿದ್ದು ತಾನು ಬದುಕಿ ತಾನು ಸಾಕಿದ ದನ ಕರಗಳನ್ನು ಹೇಗೆ ಬದುಕಿಸಬೇಕು ಎನ್ನುವ ಚಿಂತೆಯಲ್ಲಿದ್ದಾನೆ.
*""ವರುಣದೇವ ನಿನ್ನ ಕರುಣೆ ತೋರಿ ಬಾ ಇಳಿದು ಧರಣಿ ಮ್ಯಾಗ ಮುನಿಬ್ಯಾಡೋ ನಮ್ಮ ಮ್ಯಾಗ*""
ಎನ್ನುವಂತೆ ಪ್ರತಿಯೊಬ್ಬ ರೈತನ ಹೇಗಾದರೂ ಮಾಡಿ ವರುಣದೇವ ಭೂಮಿಗೆ ಧರೆಗಿಳಿದು ಬಾ ಎನ್ನುವ ಕೂಗನ್ನು ವ್ಯಕ್ತಪಡಿಸುತ್ತಿದ್ದು ಮಳೆರಾಯ ಮಾತ್ರ ರೈತನ ಕೂಗಿಗೆ ಕರಗದಿರುವುದು ರೈತನ ಭವಿಷ್ಯದ ಬದುಕನ್ನು ನುಂಗುವ ಮುನ್ಸೂಚನೆ ಮಳೆರಾಯ ನೀಡುತ್ತಿರುವುದರಿಂದ ರೈತನ ಬದುಕು ಭವಿಷ್ಯದಲ್ಲಿ ಕಷ್ಟವಾಗಲಿದೆ ಎನ್ನುವ ಮಾತುಗಳು ರೈತಾಪಿ ವರ್ಗದಲ್ಲಿ ಕೇಳಿ ಬರುತ್ತಿವೆ. ಈಗಾಗಲೇ ರೈತರ ಬೆಳೆಗಳ ಸಮೀಕ್ಷೆಯನ್ನು ಮೊಬೈಲ್ ಆಪ್ ಗಳ ಮೂಲಕ ಅಪ್ಲೋಡ್ ಮಾಡಲು ಸರ್ಕಾರ ಸೂಚಿಸಿದೆಯಾದರೂ ರೈತನಿಗೆ ಮಳೆ ಇಂದ ಬರುವಷ್ಟು ಧೈರ್ಯ ಮತ್ತು ಸಂಕಷ್ಟವನ್ನು ದೂರಮಾಡುವ ಶಕ್ತಿ ಯಾವ ಸರ್ಕಾರಕ್ಕೂ ಇಲ್ಲ ಯಾವ ಇನ್ಸೂರೆನ್ಸ್ ಕಂಪನಿಗಳಿಗೂ ಇಲ್ಲ ಮತ್ತು ಮಳೆಯಿಂದ ಆಗುವ ಭರವಸೆ ನಮಗೆ ಇನ್ಯಾವುದರಿಂದ ಸಿಗೋದಿಲ್ಲ ಎನ್ನುವ ಕೂಗು ಕೇಳಿ ಬರುತ್ತಿದೆ ಇಷ್ಟೆಲ್ಲ ಕೂಗನ್ನು ಆಲಿಸುತ್ತಿರುವ ಪ್ರಕೃತಿಯ ದೇವ ರೈತನ ಗೋಳಗಿ ಕಿಂಚಿತ್ತು ಕಿವಿ ಕೊಡದೆ. ಕಳೆದ ಎರಡು ವರ್ಷ ಖುಷಿಯಾಗಿದ್ದ ರೈತನ ಬದುಕು, ಈ ವರ್ಷ ಸಂಕಷ್ಟ ತಂದಿರುವುದು ರೈತನ ಬದುಕಿಗೆ ಮತ್ತು ಮೂಕು ಪ್ರಾಣಿಗಳ ಅನ್ನಕ್ಕೆ ಕನ್ನ ಹಾಕಿದಂತಾಗಿದೆ.
ಈ ಸಾರಿ ದಾಖಲೆಯ ಮಳೆ ಕೊರತೆ ಮತ್ತು ಎಲ್ ನಿನೋ ಪ್ರಭಾವದಿಂದ ಪೆಸಿಫಿಕ್ ಸಾಗರದಲ್ಲಿ ಉಂಟಾಗಿರುವ ತೀವ್ರ ಎಲ್ ನಿನೋ ಪ್ರಭಾವದಿಂದಾಗಿ ಈ ಬಾರಿ ಮಾನ್ಸೂನ್ ಮಾರುತಗಳು ಜೂನ್ ತಿಂಗಳಲ್ಲಿ ಅತ್ಯಂತ ದುರ್ಬಲಗೊಂಡಿವೆ. ಇದು ಕಳೆದ 146 ವರ್ಷಗಳಲ್ಲೇ ಅತ್ಯಂತ ಒಣ ಜೂನ್ ತಿಂಗಳುಗಳಲ್ಲಿ ಒಂದಾಗಿ ದಾಖಲಾಗಿದೆ.
ಇಡೀ ಕರ್ನಾಟಕದಲ್ಲಿ ಜೂನ್ ತಿಂಗಳ ಅಂತ್ಯದ ವೇಳೆಗೆ ಸುಮಾರು 42% ಮಳೆ ಕೊರತೆ ದಾಖಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ 27% ಕ್ಕೂ ಹೆಚ್ಚು ಮಳೆ ಅಭಾವ ಕಂಡುಬಂದಿದೆ.
ಕೃಷಿ ಮತ್ತು ಬಿತ್ತನೆಗೆ ಎದುರಾಗಿರುವ ಹಿನ್ನಡೆಯಿಂದ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಬೀದರ್, ವಿಜಯಪುರ, ಯಾದಗಿರಿ ಬಾಗಲಕೋಟೆ, ಗದಗ, ಬೆಳಗಾವಿ, ಮತ್ತು ರಾಯಚೂರಿನಲ್ಲಿ ಜೂನ್ ಮಧ್ಯಭಾಗದಲ್ಲಿ ತಾಪಮಾನವು 38°C ನಿಂದ 40.5°C ವರೆಗೆ ದಾಖಲಾಗಿತ್ತು.
ಮಳೆಯಿಲ್ಲದೆ ಒಣ ಭೂಮಿ ವಿಸ್ತರಿಸುತ್ತಿದ್ದು, ಮಣ್ಣಿನಲ್ಲಿ ತೇವಾಂಶ ತಳಮುಟ್ಟಿದೆ. ಹವಾಮಾನ ಇಲಾಖೆಯು ರೈತರಿಗೆ ತೇವಾಂಶ ನೋಡಿಕೊಂಡು, ಸಾಧ್ಯವಾದಷ್ಟು ಬರ ನಿರೋಧಕ ತಳಿಗಳ ಬಿತ್ತನೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದೆ.

ಜಲಾಶಯಗಳ ಖಾಲಿ ಸ್ಥಿತಿ ಮತ್ತು ನೀರಿನ ಹಾಹಾಕಾರ
ಡ್ಯಾಂಗಳಲ್ಲಿ ನೀರಿನ ಇಳಿಕೆಯಿಂದ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ಮತ್ತು ತುಂಗಭದ್ರಾ ನದಿ ಪಾತ್ರದ ಪ್ರಮುಖ ಜಲಾಶಯಗಳಲ್ಲಿ (ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ) ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ರಾಜ್ಯದ 14 ಪ್ರಮುಖ ಜಲಾಶಯಗಳ ಒಟ್ಟು ಸಾಮರ್ಥ್ಯದಲ್ಲಿ ಪ್ರಸ್ತುತ ಕೇವಲ 23% ರಷ್ಟು ಮಾತ್ರ ನೀರು ಉಳಿದಿದೆ.
ಕುಡಿಯುವ ನೀರಿಗೆ ತತ್ವಾರ: ಮಳೆ ಇಲ್ಲದ ಕಾರಣ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಇದರಿಂದಾಗಿ ರಾಜ್ಯದ ಸುಮಾರು 826ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ.
ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು
ಬರ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರವು ತುರ್ತಾಗಿ 117 ಕೋಟಿ ರೂ.ಗಳ ನಿಧಿಯನ್ನು ಬಿಡುಗಡೆ ಮಾಡಿದೆ.
ಸದ್ಯಕ್ಕೆ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಆದ್ಯತೆಯ ಮೇರೆಗೆ ಕಾಯ್ದಿರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಜುಲೈ ಮೊದಲ ವಾರದ ಮಳೆ ಮತ್ತು ಜಲಾಶಯಗಳ ಸ್ಥಿತಿಗತಿಯನ್ನು ಅವಲೋಕಿಸಿ ಅಧಿಕೃತವಾಗಿ ಬರಗಾಲ ಘೋಷಿಸುವ ಕುರಿತು ತೀರ್ಮಾನ ಕೈಗೊಳ್ಳಲಿದೆ.
ಸರ್ಕಾರಗಳು ಬರಗಾಲ ನೀಗಿಸಲು ಎಷ್ಟೇ ಕ್ರಮಗಳನ್ನು ಕೈಗೊಂಡರು ರೈತನಿಗೆ ಮಳೆ ನೀಡುವ ಖುಷಿ ಮತ್ತು ಆದಾಯವನ್ನು ಯಾರಿಂದಲೂ ನೀಗಿಸಲು ಸಾಧ್ಯವಿದಲ್ಲ ಎನ್ನುವುದು ರೈತರ ಕೊರಗಾಗಿದೆ ಪ್ರಕೃತಿಯಿಂದ ಆಗುವ ತೊಂದರೆಗಳನ್ನು ಮಾನವರು ನಿಭಾಯಿಸಲು ಎಷ್ಟೇ ಪ್ರಯತ್ನ ಪಟ್ಟರು ಪ್ರಕೃತಿಯಿಂದ ಆಗುವ ಮಳೆ-ಬೆಳೆಗಳಲ್ಲಿ ಇರುವ ಖುಷಿ ಬೇರೆ ಯಾವುದರಿಂದ ರೈತ ಪಡೆಯಲು ಸಾಧ್ಯವಿಲ್ಲ ವಾಗಿದ್ದರಿಂದ ರೈತನು ಮಳೆಯನ್ನೇ ನಂಬಿ ಬದುಕು ಸಾಗಿಸುತ್ತಾನೆ. ಆದ್ದರಿಂದಾಗಿ ರಾಜ್ಯದ ರೈತರೆಲ್ಲರೂ ಮಳೆಗಾಗಿ ಹಂಬಲಿಸುತ್ತಿದ್ದಾರೆ ಎನ್ನುವುದನ್ನು ವರುಣದೇವ ಅರ್ಥಮಾಡಿಕೊಂಡು ಧರೆಗಿಳಿದು ಬಾ ಎಂದು ನಾವೆಲ್ಲರೂ ಪ್ರಾರ್ಥಿಸೋಣ.

•• ಜಗದೀಶ.ಎಸ್.ಗಿರಡ್ಡಿ
ಲೇಖಕರು. ಗೊರಬಾಳ.
9902470856.












Leave a Reply