Tag: Yadgiri News

  • ಕೆಂಭಾವಿಯಲ್ಲಿ ಟ್ಯಾಕ್ಸಿ ನಿಲ್ದಾಣ ನಿರ್ಮಾಣಕ್ಕೆ ಚಾಲಕರ ಒಕ್ಕೂಟ ಮನವಿ

    ಕೆಂಭಾವಿಯಲ್ಲಿ ಟ್ಯಾಕ್ಸಿ ನಿಲ್ದಾಣ ನಿರ್ಮಾಣಕ್ಕೆ ಚಾಲಕರ ಒಕ್ಕೂಟ ಮನವಿ

    ಸುದ್ದಿ ಬೆಳಕು ವಾರ್ತೆ ಸುರಪುರ : ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂದಣಿ ಹಾಗೂ ವಾಹನ ದಟ್ಟಣೆಯ ನಡುವೆ ಟ್ಯಾಕ್ಸಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೆ ಸಾರ್ವಜನಿಕರಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು, ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣ ಗೋಡೆ ಎದುರಿಗಿರುವ ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಟ್ಯಾಕ್ಸಿ ನಿಲ್ದಾಣ ನಿರ್ಮಿಸಿಕೊಡಲು ಅನುಕೂಲ ಕಲ್ಪಿಸಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟವು (ರಿ.) ಕೆಂಭಾವಿ ಪುರಸಭೆಗೆ ಲಿಖಿತ ಮನವಿ ಸಲ್ಲಿಸಿದೆ. ಸುರಪುರ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕೆಂಭಾವಿ ಪಟ್ಟಣವು ದಿನದಿಂದ ದಿನಕ್ಕೆ…

  • ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾಗಿ ರಾಜಶೇಖರಗೌಡ ವಜ್ಜಲ್ ನೇಮಕ

    ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾಗಿ ರಾಜಶೇಖರಗೌಡ ವಜ್ಜಲ್ ನೇಮಕ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಕರ್ನಾಟಕ ರಾಜ್ಯ ಶಿವಶರಣ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜ (ರಿ.), ಬೆಂಗಳೂರು ಇದರ ಯಾದಗಿರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಸಮಾಜದ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ತಿಳಿಸಿದ್ದಾರೆ. ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ವೀರಶೈವ ಲಿಂಗಾಯತ ರೆಡ್ಡಿ ಸಮಾಜಕ್ಕೆ ರಾಜ್ಯ ಮತ್ತು ದೇಶದ…

  • ಬರ ಘೋಷಣೆಗೆ ಆಗ್ರಹ: ಯಾದಗಿರಿ ಕೆಡಿಪಿ ಸಭೆ ಬಹಿಷ್ಕರಿಸಿದ ಶಾಸಕ ಕಂದಕೂರು

    ಬರ ಘೋಷಣೆಗೆ ಆಗ್ರಹ: ಯಾದಗಿರಿ ಕೆಡಿಪಿ ಸಭೆ ಬಹಿಷ್ಕರಿಸಿದ ಶಾಸಕ ಕಂದಕೂರು

     ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಗುರುಮಠಕಲ್ ಹಾಗೂ ಯಾದಗಿರಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸದೆ ರಾಜ್ಯ ಸರ್ಕಾರ ತಾರತಮ್ಯ ಎಸಗಿದೆ ಎಂದು ಆರೋಪಿಸಿ, ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯನ್ನು ಬಹಿಷ್ಕರಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಪಿ ಸಭೆ ಆಯೋಜಿಸಲಾಗಿತ್ತು.…

  • ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪಡೆದ ಉಮೇಶ್ ಮುದ್ನಾಳ್‌ಗೆ ಯಾದಗಿರಿಯಲ್ಲಿ ಸನ್ಮಾನ

    ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪಡೆದ ಉಮೇಶ್ ಮುದ್ನಾಳ್‌ಗೆ ಯಾದಗಿರಿಯಲ್ಲಿ ಸನ್ಮಾನ

    ಸುದ್ದಿ ಬೆಳಕು ವಾರ್ತೆ ಯಾದಗಿರಿ  : ಯಾದಗಿರಿ ಜಿಲ್ಲೆಯಾದ್ಯಂತ ನಗರ ಹಾಗೂ ಗ್ರಾಮೀಣ ಭಾಗದ ಜನಸಾಮಾನ್ಯರು, ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಖ್ಯಾತ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಅವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಲಭಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಪ್ರಭು ಅಂಬಿಗರ್ ಕೊಡಲ್ ತಿಳಿಸಿದರು. ನಗರದ ಚಿತ್ತಾಪುರ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ…

  • ‘ಬಳ್ಳಾರಿ ಚಲೋ’ ಬೃಹತ್ ಸಮಾವೇಶ: ಲಿಂಗಸುಗೂರಿನಲ್ಲಿ ರಣಕಹಳೆ ; ಮುದ್ನಾಳ ಭಾಗಿ

    ‘ಬಳ್ಳಾರಿ ಚಲೋ’ ಬೃಹತ್ ಸಮಾವೇಶ: ಲಿಂಗಸುಗೂರಿನಲ್ಲಿ ರಣಕಹಳೆ ; ಮುದ್ನಾಳ ಭಾಗಿ

    ಸುದ್ದಿ ಬೆಳಕು ವಾರ್ತೆ ಲಿಂಗಸುಗೂರು/ಯಾದಗಿರಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಹಮ್ಮಿಕೊಂಡಿರುವ ಐತಿಹಾಸಿಕ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಉದ್ಘಾಟನಾ ಬೃಹತ್ ಸಮಾವೇಶವು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಅದ್ದೂರಿಯಾಗಿ ಜರುಗಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಪ್ರಮುಖ ಬಿಜೆಪಿ ಯುವ ಮುಖಂಡರು ಹಾಗೂ ರಾಜ್ಯ ಬಿಜೆಪಿ…

  • ಬರ ಪಟ್ಟಿಯಿಂದ ಯಾದಗಿರಿ, ಗುರುಮಠಕಲ್ ಕೈಬಿಟ್ಟಿದ್ದೇಕೆ? ಶರಣಗೌಡ ಕಂದಕೂರ ಕಿಡಿ

    ಬರ ಪಟ್ಟಿಯಿಂದ ಯಾದಗಿರಿ, ಗುರುಮಠಕಲ್ ಕೈಬಿಟ್ಟಿದ್ದೇಕೆ? ಶರಣಗೌಡ ಕಂದಕೂರ ಕಿಡಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ, ಬೆಳೆ ನಷ್ಟದ ನಡುವೆಯೂ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಶಾಸಕ ಶರಣಗೌಡ ಕಂದಕೂರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ನೀಡಿರುವ ವರದಿಗಳಲ್ಲಿಯೇ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳಲ್ಲಿ ಮಳೆ ಕೊರತೆ ಹೆಚ್ಚಿರುವುದಾಗಿ ಉಲ್ಲೇಖಿಸಲಾಗಿದೆ. ಆದರೂ ಕೇವಲ ಒಂದು…

  • ಶಹಾಪುರ: ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿ, ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು

    ಶಹಾಪುರ: ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿ, ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು

    ಸುದ್ದಿ ಬೆಳಕು ವಾರ್ತೆ ಶಹಾಪುರ (ಯಾದಗಿರಿ):  ಹೊಲದಲ್ಲಿ ಹತ್ತಿ ಕಳೆ ಕೀಳುವ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಬೊಲೆರೊ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ಮೂವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಭಾನುವಾರ ತಾಲೂಕಿನ ಮಡ್ನಾಳ್ ಗ್ರಾಮದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ದರ‍್ದೈವಿಗಳನ್ನು ಭಾಗ್ಯಶ್ರೀ (೩೫), ಸತ್ಯಮ್ಮ (೩೦) ಹಾಗೂ ಹೊನ್ನಿಂಗಮ್ಮ (೧೮)…

  • ಹುಣಸಗಿ: ಕೂಡಲಗಿಯಲ್ಲಿ ಜಾಬ್ ಕಾರ್ಡ್ ಮೇಳ, ಮನೆ ಮನೆ ಭೇಟಿ ಅಭಿಯಾನ

    ಹುಣಸಗಿ: ಕೂಡಲಗಿಯಲ್ಲಿ ಜಾಬ್ ಕಾರ್ಡ್ ಮೇಳ, ಮನೆ ಮನೆ ಭೇಟಿ ಅಭಿಯಾನ

    ಸುದ್ದಿ ಬೆಳಕು ವಾರ್ತೆ ಹುಣಸಗಿ (ಯಾದಗಿರಿ): “ಗ್ರಾಮೀಣ ಭಾಗದ ಕೂಲಿಕಾರರಿಗೆ ಆರ್ಥಿಕ ಭದ್ರತೆ ಒದಗಿಸಲು ರೂಪಿಸಲಾಗಿರುವ ‘ವಿಬಿ-ಜಿ-ರಾಮ್-ಜಿ’ (VB-G-RAM-G) ಯೋಜನೆಯಡಿ ಕೆಲಸ ಪಡೆಯಲು ಪ್ರತಿಯೊಬ್ಬ ಕೂಲಿಕಾರರು ನಮೂನೆ-೧ ರಲ್ಲಿ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಜಾಬ್ ಕಾರ್ಡ್ ಪಡೆದುಕೊಳ್ಳಬೇಕು,” ಎಂದು ಬೈಚಬಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಣಮಂತಪ್ಪ ಹೆಗ್ಗುರು ತಿಳಿಸಿದರು. ತಾಲ್ಲೂಕಿನ ಬೈಚಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಲಗಿ ಗ್ರಾಮದ ಹನುಮಾನ್ ದೇವಸ್ಥಾನದ ಆವರಣದಲ್ಲಿ ಬುಧವಾರ (ಆ. ೧೯) ಐಇಸಿ (IEC) ಚಟುವಟಿಕೆಯಡಿ ಆಯೋಜಿಸಲಾಗಿದ್ದ ಜಾಬ್ ಕಾರ್ಡ್…

  • ವಡಗೇರಾ: ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

    ವಡಗೇರಾ: ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

    ಸುದ್ದಿ ಬೆಳಕು ವಾರ್ತೆ ವಡಗೇರಾ (ಯಾದಗಿರಿ): “ಮಗುವಿನ ಗರ್ಭಾವಸ್ಥೆಯಿಂದ ಹಿಡಿದು ೧೮ ವರ್ಷ ತುಂಬುವವರೆಗೂ ಬದುಕುವ, ರಕ್ಷಣೆ ಪಡೆಯುವ, ವಿಕಾಸ ಹೊಂದುವ ಹಾಗೂ ಸಾರ್ವಜನಿಕವಾಗಿ ಭಾಗವಹಿಸುವ ನಾಲ್ಕು ಮೂಲಭೂತ ಹಕ್ಕುಗಳನ್ನು ನಮ್ಮ ಸಂವಿಧಾನ ಒದಗಿಸಿದೆ,” ಎಂದು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ ಪರ್ವತರೆಡ್ಡಿ ಎಸ್.ಐ. ತಿಳಿಸಿದರು. ವಡಗೇರಾ ತಾಲ್ಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. “ಮಕ್ಕಳಿಗೆ ಕಡ್ಡಾಯವಾಗಿ ಜನನ…

  • ಯಾದಗಿರಿ: ಪೂರ್ವಿಕರ ತ್ಯಾಗದ ಪ್ರತೀಕವೇ ಸ್ವಾತಂತ್ರ್ಯ ದಿನ: ಬಿ.ಎನ್. ವಿಶ್ವನಾಥ್ ನಾಯಕ್

    ಯಾದಗಿರಿ: ಪೂರ್ವಿಕರ ತ್ಯಾಗದ ಪ್ರತೀಕವೇ ಸ್ವಾತಂತ್ರ್ಯ ದಿನ: ಬಿ.ಎನ್. ವಿಶ್ವನಾಥ್ ನಾಯಕ್

    ಸುದ್ದಿ ಬೆಳಕು ವಾರ್ತೆ ಯಾದಗಿರಿ : “1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ದೇಶಕ್ಕೆ ಮುಕ್ತಿ ದೊರೆಯುವವರೆಗೂ ನಡೆದ ದೀರ್ಘ ಹೋರಾಟಗಳು, ಬ್ರಿಟಿಷರ ದಬ್ಬಾಳಿಕೆ-ಹಿಂಸೆಗಳ ನಡುವೆ ನಮ್ಮ ಪೂರ್ವಿಕರು ಮತ್ತು ಮಹಾನ್ ದೇಶಭಕ್ತರು ನೀಡಿದ ರಕ್ತ ಬಲಿದಾನದ ಸಾರ್ಥಕ ಸಂಕೇತವೇ ಇಂದಿನ ಸ್ವಾತಂತ್ರ್ಯ ದಿನ,” ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ್ ನಾಯಕ್ ಅಭಿಪ್ರಾಯಪಟ್ಟರು. ಭಾರತದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಸರ್ಕಾರಿ ಪದವಿ ಕಾಲೇಜು ರಸ್ತೆಯಲ್ಲಿರುವ ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಶನಿವಾರ…

Suddi Belaku