ಎಸ್ಸೆಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದ ರಿಷಿಕಾ | ಹಿಂದಿಯಲ್ಲಿ ಶೇ. 100ರಷ್ಟು ಸಾಧನೆ

Posted by

ಪತ್ರಿಕಾ ವಿತರಕನ ಮಗಳಿಗೆ ವೈದ್ಯಕೀಯ ಕನಸು…!

ಸುದ್ದಿ ಬೆಳಕು ವಾರ್ತೆ

ಸೈದಾಪುರ. ಏಪ್ರಿಲ್ 24 : ಗ್ರಾಮೀಣ ಮಕ್ಕಳು ಎಂದರೆ ಮೂಗು ಮುರಿಯುವ ಜನತೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಸಾಧನೆ ಮಾಡಿದ ಕೀರ್ತಿ ಈ ಪ್ರತಿಭೆಗೆ ಸಲ್ಲಿಸುತ್ತದೆ.

ಸೈದಾಪುರ ಪಟ್ಟಣದ ಪತ್ರಿಕಾ ವಿತರಕ ಕೆ. ಬಿ ರಾಘವೇಂದ್ರ ಮತ್ತು ಕೆ. ಬಿ ರೂಪ ದಂಪತಿಗಳ ಹಿರಿಯ ಮಗಳಾದ ಕುಮಾರಿ ರಿಷಿಕಾ ಕೆ.ಬಿ ಈಚೆಗೆ ನಡೆದ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ ಶೇ.96.32 ಅಂಕ ಪಡೆದು ಸೈ ಎನಿಸಿಕೊಂಡಿದ್ದಾಳೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ಥಳೀಯ ಎಸ್ ಬಿಎಂ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಳೆ. ಆರಂಭದಿಂದಲೂ ಓದಿನಲ್ಲಿ ಮುಂಚೂಣಿಯಲ್ಲಿದ್ದ ಅವಳು ಪೋಷಕರ ಸಹಕಾರ, ಶಿಕ್ಷಕರ ಗುಣಾತ್ಮಕ ಬೋಧನೆಯನ್ನು ಮನದಟ್ಟು ಮಾಡಿಕೊಂಡು ನಿರಂತರ ಪರಿಶ್ರಮದಿಂದಾಗಿ ಎಸ್ಸೆಸ್ಸೆಲ್ಸಿಯಲ್ಲಿ ಇಂಗ್ಲಿಷ (122), ಕನ್ನಡ (95), ಹಿಂದಿ (100), ಗಣಿತ (92), ವಿಜ್ಞಾನ (96) ಹಾಗೂ ಸಮಾಜ ವಿಜ್ಞಾನ (97) ಸೇರಿ ಗರಿಷ್ಟ 625ಕ್ಕೆ 602 ಅಂಕಗಳನ್ನು ಪಡೆದು ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ.
ಪತ್ರಿಕಾ ವಿತರಣೆಯ ಜತೆಗೆ ಮೆಡಿಕಲ್ ಶಾಪ್ ಅನ್ನು ಹೊಂದಿರುವ ತಂದೆ ಕೆ. ಬಿ ರಾಘವೇಂದ್ರ ಅವರು ಮಗಳನ್ನು ಡಾಕ್ಟರ್ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಪುತ್ರಿ ರಿಷಿಕಾ ಕೂಡ ಎಸ್ಸೆಸ್ಸೆಲ್ಸಿ ಮುಗಿತು ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸುತ್ತ ನಮ್ಮ ಪೋಷಕರ ಅಪೇಕ್ಷೆಯೇ ನನ್ನ ಗುರಿಯಾಗಿದೆ ಇದಕ್ಕಾಗಿ ಪಿಯುಸಿಯಲ್ಲಿಯೂ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದು ತಂದೆಯ ಕನಸು ನನಸು ಮಾಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾಳೆ. ಇದಲ್ಲದೆ ಸ್ವತಃ ರಿಷಿಕಾ ಸಹ ವೈದ್ಯೆಯಾಗಿ ಅಸಹಾಯಕ ಜನರ ಆರೋಗ್ಯ ಸೇವೆ ಮಾಡಬೇಕು ಎಂಬ ಸದುದ್ದೇಶವನ್ನು ಹೊಂದಿದ್ದಾಗಿ ಅಭಿಪ್ರಾಯ ತಿಳಿಸಿದ್ದಾಳೆ.
ಗ್ರಾಮೀಣ ಪ್ರತಿಭೆಯೊಂದು ನಗರ ಮಟ್ಟದ ವಿದ್ಯಾರ್ಥಿಗಳನ್ನು ಮೀರಿಸುವ ಮಟ್ಟಿಗೆ ಸಾಧನೆ ಮಾಡಿದ್ದು ಎಲ್ಲರ ಮೆಚ್ಚುಗೆ ಪಡೆದಿದ್ದು ಮಗುವಿನ ಸಾಧನೆಗೆ ಶಾಲಾ ಶಿಕ್ಷಕರ ಅದಿಯಾಗಿ ಪೋಷಕರು ಹರ್ಷ ವ್ಯಕ್ತಪಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ವೇಳೆ ಆರ್ಯವೈಶ್ಯ ಸಮಾಜದ ಮುಖಂಡರು ಮತ್ತು ಎಸ್.ಬಿ.ಎಮ್.ಶಾಲೆಯ ಮುಖ್ಯಸ್ಥರು ಹರ್ಷ ವ್ಯಕ್ತಪಡಿಸಿದರು.

 

 ಗ್ರಾಮೀಣ ಮಟ್ಟದಲ್ಲಿ ಇದ್ದುಕೊಂಡೆ ನಮ್ಮ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದಿರುವುದಿ ಅತೀವ ಸಂತಸ ತಂದಿದೆ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂಬ ಸಂಕಲ್ಪ ಇದಕ್ಕಾಗಿ ಅವಳ ಮುಂದಿನ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸಹಕಾರವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಅವಳ ವೈದ್ಯಕೀಯ ಕನಸು ನನಸಾಗಲಿ ಎಂಬ ಹೆಬ್ಬಯಕೆ ನನ್ನದು.
– ಕೆ. ಬಿ ರೂಪ ಸೈದಾಪುರ,ರಿಷಿಕಾ ಅವರ ತಾಯಿ.

Leave a Reply

Your email address will not be published. Required fields are marked *

Suddi Belaku