ಮೃತ ಫಲಾನುಭವಿ ಕುಟುಂಬಕ್ಕೆ ೨ ಲಕ್ಷ ರೂ.ವಿಮಾ ಚೆಕ್ ವಿತರಣೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕೇಂದ್ರ ರ‍್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ ಮೃತ ಫಲಾನುಭವಿಯ ಕುಟುಂಬಕ್ಕೆ ರೂ.೨ ಲಕ್ಷ ಮೊತ್ತದ ವಿಮಾ ಇತ್ರ‍್ಥದ ಚೆಕ್‌ಅನ್ನು ಬ್ಯಾಂಕ್ ಆಫ್ ಬರೋಡಾದ ಬಳಿಚಕ್ರ ಶಾಖೆಯ ವತಿಯಿಂದ ವಿತರಿಸಲಾಯಿತು.
ಇಲ್ಲಿನ ಬಳಿಚಕ್ರ ಶಾಖೆಯ ವ್ಯವಸ್ಥಾಪಕರಾದ ಶ್ರೀ ಟಿ. ಭಾಸ್ಕರ ಅವರು, ಮೃತ ಬೇಜಮಿನ್ ಅವರ ಕುಟುಂಬದ ಸದಸ್ಯರಾದ ಶ್ರೀಮತಿ ಬಸ್ಸಮ್ಮ ಅವರಿಗೆ ರೂ.೨ ಲಕ್ಷ ಚೆಕ್ ಹಸ್ತಾಂತರಿಸಿದರು.
ಚೆಕ್ ವಿತರಿಸಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಟಿ. ಭಾಸ್ಕರ ಅವರು, ಪ್ರತಿಯೊಬ್ಬ ನಾಗರಿಕನಿಗೂ ಸಾಮಾನ್ಯ ವೈಯಕ್ತಿಕ ಜೀವ ವಿಮೆಗಳು ಎಷ್ಟು ಮಹತ್ವದ್ದಾಗಿವೆ ಎಂಬುದನ್ನು ವಿವರಿಸಿದರು. ಅನಿರೀಕ್ಷಿತ ಸಂರ‍್ಭಗಳಲ್ಲಿ ಇಂತಹ ವಿಮೆಗಳು ಕುಟುಂಬಕ್ಕೆ ರ‍್ಥಿಕ ಆಸರೆಯಾಗಲಿವೆ ಎಂದು ಅವರು ತಿಳಿಸಿದರು.
ಇದೇ ಸಂರ‍್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸರ‍್ವಜನಿಕರಿಗೆ ರ‍್ಕಾರದ ಪ್ರಮುಖ ವಿಮಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಈ ಕರ‍್ಯಕ್ರಮದಲ್ಲಿ ಎಫ್.ಎಲ್.ಸಿ ಶ್ರೀಧರ, ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಕಚೇರಿ ಸಹಾಯಕರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku