
ಸುದ್ದಿ ಬೆಳಕು ವಾರ್ತೆ
ಶಹಾಪುರ: ಸಹಕಾರ ಸಂಘಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವ ಜೊತೆಗೆ ಇಂತಹ ತರಬೇತಿ ಪಡೆಯುವುದರಿಂದ ಸಹಕಾರ ಸಂಘಗಳನ್ನು ಬಲಪಡಿಸಲು ಸಾಧ್ಯವೆಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳದ ನಿರ್ದೇಶಕರು ಹಾಗೂ ಸಂಘದ ನಿರ್ದೇಶಕರಾದ ಶಾಂತಗೌಡ ಮಾಲಿ ಪಾಟೀಲ್ ನಾಗನಟಗಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿ, ಯಾದಗಿರಿ ಹಾಗೂ ಸಹಕಾರ ಇಲಾಖೆ ಯಾದಗಿರಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ,ನಾಗನಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕ್ಲಸ್ಟರ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ಸಂಘಗಳಲ್ಲಿ ಲಭ್ಯವಿರುವ ಸೇವೆಗಳನ್ನು ಸದಸ್ಯರಿಗೆ ನೀಡುವುದರ ಜೊತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಹಾಗೂ ಒಕ್ಕೂಟದ ಮೂಲಕ ವಿವಿಧ ರೀತಿಯ ಜಿಲ್ಲಾಮಟ್ಟದ ರಾಜ್ಯಮಟ್ಟದ ಕ್ಲಸ್ಟರ್ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪ್ರತಿಯೊಂದು ಸಹಕಾರ ಸಂಘಗಳು ಕಾರ್ಯಕ್ರಮಗಳಲ್ಲಿ ಸದಸ್ಯರು ಭಾಗಿಯಾಗಿ ಇದರ ಒಂದು ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದರು.
ಒಕ್ಕೂಟದ ಉಪಾಧ್ಯಕ್ಷರಾದ ಎಂ ನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಶಹಪುರ ತಾಲೂಕ ತಾಂತ್ರಿಕ ವ್ಯವಸ್ಥಾಪಕರಾದ ನಕುಲ್ ಮಾತನಾಡಿ
ಬೆಳೆ ವಿಮೆ ಮುಂಗಾರು ಬೆಳೆಗಳಾದ ಹತ್ತಿ ತೊಗರಿ ಹೆಸರು ಬೆಳೆಗಳು ವಿಮೆ ನೋಂದಣಿಯನ್ನು ನಿಗದಿತ ದಿನಾಂಕದಲ್ಲಿ ನೋಂದಣಿ ಮಾಡಿಸಿ ರೈತರು ಇದರ ಲಾಭವನ್ನು ಪಡೆಯಬಹುದೆಂದು ರೈತರಿಗೆ ತಿಳಿ ಹೇಳಿದರು ಜೊತೆಗೆ ಇಲಾಖೆಯ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ಕೃಷಿ ಭಾಗ್ಯ ಯೋಜನೆ ಕೃಷಿ ಯಂತ್ರೀಕರಣ ಲಘು ನೀರಾವರಿ ಘಟಕ ಕೃಷಿ ಸಂಸ್ಕರಣ ಘಟಕ ರಾಷ್ಟ್ರೀಯ ಆಹಾರ ಭದ್ರತೆ ಪೌಷ್ಟಿಕ ಯೋಜನೆ. ಆತ್ಮ ಯೋಜನೆ ಕೃಷಿ ಇಲಾಖೆಯಿಂದ ಸಿಗುವ ಯೋಜನೆಗಳನ್ನು, ಪಡೆದುಕೊಳ್ಳಬೇಕೆಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಪ್ರಾಸ್ತವಿಕ ನುಡಿ ಹಾಗೂ ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಸುಜಾತ ಮಠ ಜಿಲ್ಲಾ ಸಹಕಾರ ಶಿಕ್ಷಕರು ನೆರವೇರಿಸಿದರು.
ಸಂಘದ ಕಾರ್ಯದರ್ಶಿಯಾದ ಮುನಿಯಪ್ಪಗೌಡ ಪೊಲೀಸ್ ಪಾಟೀಲ ಸ್ವಾಗತಿಸಿದರು.ದ್ವಿತೀಯ ದರ್ಜೆ ಸಹಾಯಕರಾದ ಸಿದ್ದನಗೌಡ ಚಾಮನಾಳ ವಂದಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ನಿಂಗಣ್ಣ ರಾಯಚೂರ, ಪರದಾನಪ್ಪ ಸುರಪುರ, ಹಾಗೂ ಗ್ರಾಮದ ಹಿರಿಯ ಮುಖಂಡರುಗಳಾದ ದೇವಿಂದ್ರಪ್ಪ ಯಾದವ್, ಮಲ್ಲಯ್ಯ ಸ್ವಾಮಿ ಹಿರೇಮಠ, ಹಾಗೂ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಸಂಘದ ಸದಸ್ಯರು ಊರಿನ ಹಿರಿಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.











Leave a Reply