ವಡಗೇರಾದ ಕಲಿಕೆ ಜೀವನೋಪಾಯ ಯೋಜನೆ ಪರಿಶೀಲಿಸಿದ ಸಿಇಒ ಲವೀಶ್ ಓರಡಿಯ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ವಡಗೇರಾ ತಾಲೂಕಿನ ಕಲಿಕೆ ಜೀವನೋಪಾಯ ಕಾರ್ಯಕ್ರಮದ ವ್ಯಾಪ್ತಿಯ ಹಾಲಗೇರಾ, ಕದರಾಪುರ ಹಾಗೂ ಬೆಂಡೆಬಂಬಳಿ ಗ್ರಾಮಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್
ಓರಡಿಯ ಅವರು ಭೇಟಿ ನೀಡಿ, ಕಲಿಕೆ ಜೀವನೋಪಾಯ ಕಾರ್ಯಕ್ರಮದಡಿ ಅನುಷ್ಠಾನಗೊಂಡಿರುವ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಪರಿಶೀಲಿಸಿದರು.

ಕೃಷಿ ಹಾಗೂ ತೋಟಗಾರಿಕೆ ಪ್ರಾತ್ಯಕ್ಷಿಕೆ ಕ್ಷೇತ್ರಗಳು, ತರಕಾರಿ ನರ್ಸರಿ ಘಟಕ, ಕೊಳವೆಬಾವಿ, ಮರುಪೂರಣ ಘಟಕ, ಬಯೋಗ್ಯಾಸ್ ಘಟಕಗಳು, ಸಮುದಾಯ ಸಹಭಾಗಿತ್ವದಲ್ಲಿ ಅಳವಡಿಸಲಾದ ಸೋಲಾರ್ ಪಂಪ್ ಸೆಟ್‌ಗಳು, ಮಹಿಳಾ ರೈತ ಉತ್ಪಾದಕ ಸಂಘದ ಕಿರು ಆಹಾರ ಸಂಸ್ಕರಣಾ ಕೇಂದ್ರ, (ರೊಟ್ಟಿ ತಯಾರಿಕಾ ಕೇಂದ್ರ), ಕೋಳಿ ಸಾಕಾಣಿಕೆ ಹಾಗೂ ಆಡು ಸಾಕಾಣಿಕೆ ಚಟುವಟಿಕೆಗಳನ್ನು ವೀಕ್ಷಿಸಿ ರೈತ ಫಲಾನುಭವಿಗಳ ಅವರೊಂದಿಗೆ ಸಂವಾದ ನಡೆಸಿ,ರೈತರ ಅನುಭವಗಳು, ಆದಾಯ ವೃದ್ಧಿ ಹಾಗೂ ನಿರ್ವಹಣೆಯ ಕುರಿತು ಚರ್ಚಿಸಿ, ವಿವಿಧ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿ, ಹಲವು ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಗ್ರಾಮೀಣ ರೈತರ ಜೀವನೋಪಾಯ ಸುಧಾರಣೆ, ಕೃಷಿ ಉತ್ಪಾದಕತೆ ಹೆಚ್ಚಳ, ಜಲ ಸಂರಕ್ಷಣೆ, ನವೀಕರಿಸಬಹುದಾದ ಇಂಧನದ ಬಳಕೆ ಹಾಗೂ ಮಹಿಳಾ ಸಬಲೀಕರಣಕ್ಕೆ ಕಾರ್ಯಕ್ರಮ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿ, ಇದೇ ರೀತಿಯ ಗುಣಮಟ್ಟದ ಕಾರ್ಯಗಳನ್ನು ಮುಂದುವರಿಸುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಲಿಕೆ ಜೀವನೋಪಾಯ ಕಾರ್ಯಕ್ರಮದ ಅಧಿಕಾರಿ ಸಾಯಿ ಶ್ರೀಕಾಂತ್, ಸಂತೋಷ ಶೇಷಾಳು (ಸಹಾಯಕ ಯೋಜನಾ ಅಧಿಕಾರಿ, DRDA), ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ,ಶಶಿಧರ್ ಹಿರೇಮಠ, (ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ವಡಗೇರಾ), ರವೀಂದ್ರ ದೇಸಾಯಿ (ತಾಂತ್ರಿಕ ಸಂಯೋಜ VBRMG ಕಿರಣ್ ಬಾಬು, (ಸಹಾಯಕ ನಿರ್ದೇಶಕ, VBRMG), ಸಿದ್ರಾಮಪ್ಪ (ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ, NRLM), ಶ್ರೀಮತಿ ಕಾವೇರಿ ರಸಾಲ್ಕರ್ (ಜಿಲ್ಲಾ ವ್ಯವಸ್ಥಾಪಕರು – ಜೀವನೋಪಾಯ, NRLM), ಕು. ರಾಜೇಶ್ವರಿ (ಬ್ಲಾಕ್ ರಿಸೋರ್ಸ್ ಪರ್ಸನ್ – PRI), ಸಿ. ಬಿ. ಪಾಟೀಲ್ (PDO, ಬೆಂಡೆಬಂಬಳಿ), ಶಿವರಾಜ್ (PDO, ಹಾಲಗೇರಾ), ಶರಣಗೌಡ (PDO, ವಡಗೇರಾ), ಕಲಿಕೆ ಸಿಬ್ಬಂದಿಗಳಾದ ಮಹೇಶ್, ಶಾಂತಗೌಡ, ಹಸನ್ ರಜಕ್, ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಕ್ಷೇತ್ರ ಸಹಾಯಕರು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಫಲಾನುಭವಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku