ಯಾದಗಿರಿಯಲ್ಲಿ ‘ರಂಗೋಲಿ ರಾಷ್ಟ್ರ’ ಕಾರ್ಯಕ್ರಮ: ಬೃಹತ್ ರಂಗೋಲಿಗಳ ಮೂಲಕ ದೇಶಭಕ್ತಿ ಜಾಗೃತಿ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಯಾದಗಿರಿ ನಗರ ಮಂಡಲದ ವತಿಯಿಂದ ಸಹಾರ ಕಾಲೋನಿಯ ಹನುಮಾನ್ ದೇವಸ್ಥಾನ ಆವರಣದಲ್ಲಿ ‘ರಂಗೋಲಿ ರಾಷ್ಟ್ರ’ ಕಾರ್ಯಕ್ರಮ ನಡೆಯಿತು.

ಅಭಿಯಾನದ ರಾಜ್ಯ ಸಂಚಾಲಕಿ ಲಲಿತಾ ಅನಪುರ ಹಾಗೂ ಜಿಲ್ಲಾ ಸಂಚಾಲಕಿ ಪ್ರಭಾವತಿ ಮಾರುತಿ ಕಲಾಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಕಾರ್ಯಕರ್ತರು ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯನ್ನು ಸಾರುವ ವಿವಿಧ ಬೃಹತ್ ರಂಗೋಲಿಗಳನ್ನು ಬಿಡಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶ್ ರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ಸೇರಿದಂತೆ ಚಂದ್ರಕಲಾ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಂಗೋಲಿ ಮೂಲಕ ದೇಶದ ಸಂಸ್ಕೃತಿ, ಪರಂಪರೆ, ರಾಷ್ಟ್ರಭಕ್ತಿ ಹಾಗೂ ಏಕತೆಯ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು.

You Might Also Like

Leave a Reply

Your email address will not be published. Required fields are marked *

↑
Suddi Belaku