ರಾಯಚೂರಿನಲ್ಲಿ ಗಾಂಧೀಜಿ ಜಯಂತಿ: ಎನ್‌ಎಸ್‌ಎಸ್‌ನಿಂದ ಸ್ವಚ್ಛತಾ ಶ್ರಮದಾನ, ಪರಿಸರ ಜಾಗೃತಿ

Posted by

–

ಸುದ್ದಿ ಬೆಳಕು ವಾರ್ತೆ

ರಾಯಚೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157 ನೇ ಜಯಂತ್ಯೋತ್ಸವದ ಅಂಗವಾಗಿ ನಿಜಲಿಂಗಪ್ಪ ನಗರದ ಸಾರ್ವಜನಿಕ ಸ್ಥಳಗಳು ಹಾಗೂ ಉದ್ಯಾನವನಗಳಲ್ಲಿ ಸ್ವಚ್ಚತಾ ಶ್ರಮದಾನ ಮಾಡುವ ಮೂಲಕ ರಾಯಚೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಗಾಂಧೀ ಹಾಗೂ ಶಾಸ್ತ್ರೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿತು.

“ಸ್ವಚ್ಚತಾ ಹೀ ಸೇವಾ” ಅಭಿಯಾನ ಮತ್ತು “ಸ್ವಚ್ಚ ಭಾರತ” ಅಭಿಯಾನಗಳ ಅಡಿಯಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕವು ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರದ ಸ್ವಚ್ಛತೆ ಮತ್ತು ಸಂರಕ್ಷಣೆಗಾಗಿ ಶ್ರಮಿಸುತ್ತಿದೆ.

ಸ್ವಚ್ಚತಾ ಶ್ರಮದಾನದ ಜೊತೆಗೆ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗಳ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಮೇಲಾಗುವ ದುಷ್ಪರಿಣಾಮಗಳ ಕುರಿತಾಗಿ ಮತ್ತು ಏಕಬಳಕೆ ಪ್ಲಾಸ್ಟಿಕ್ ಉಪಯೋಗ ಮಾಡದಂತೆ ಹಾಗೂ ಎಲ್ಲ ತರಹದ ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಿಕೊಳ್ಳುವಂತೆ, ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಹೇಳುವ ಮೂಲಕ ಪರಿಸರ ಸಂರಕ್ಷಣೆಯ ಕುರಿತಾಗಿ ಜನಜಾಗೃತಿ ಮೂಡಿಸಲಾಯಿತು.

ಸ್ವಯಂ ಸೇವಕಿಯರಾದ ಮಹೇಶ್ವರಿ ಬಸವರಾಜ, ಸಂಗೀತಾ ವೆಂಕಟೇಶ, ರೇಖಾ ನೇತೃತ್ವದಲ್ಲಿ ಜಮುನಾ, ಸ್ವಪ್ನಾ, ರೇಣುಕಾ, ರೂಪಾ, ತುಳಸಿ, ಅಂಬುಜಾ, ಸಂಗೀತಾ ವಿ ಸ್ವಚ್ಛತಾ ಶ್ರಮದಾನವನ್ನು ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷ ಕುಮಾರ ರೇವೂರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯ ಯಶಸ್ವಿಯಾಗಿ ನೆರವೇರಿತು.

You Might Also Like

Leave a Reply

Your email address will not be published. Required fields are marked *

↑
Suddi Belaku